ಮೂರು ತಲೆಮಾರಿಗೆ ಅಕ್ಷರ ಜ್ಞಾನ ನೀಡಿದ ಬಂದಡ್ಕ ಜಿ. ಎಚ್. ಎಸ್. ಶಾಲೆಯ ರಜತ ಮಹೋತ್ಸವ ವರ್ಷಾಚರಣೆ ಆರಂಭ: ಲಾಂಛನ ಬಿಡುಗಡೆ

by Narayan Chambaltimar

ಬಂದಡ್ಕ: ಮೂರು ತಲೆಮಾರುಗಳ ಅಕ್ಷರ ಜ್ಯೋತಿಯಾಗಿರುವ ಬಂದಡ್ಕ ಜಿ.ಎಚ್.ಎಸ್.ಎಸ್ ಶಾಲೆಯ 74ನೇ ವಾರ್ಷಿಕೋತ್ಸವ, ಒಂದು ವರ್ಷ ಕಾಲ ನಡೆಯಲಿರುವ ಪ್ಲಾಟಿನಂ ಜುಬಿಲಿ ಆಚರಣೆಯ ಉದ್ಘಾಟನೆ ಮತ್ತು ಲೋಗೋ ಬಿಡುಗಡೆಯನ್ನು
ಖ್ಯಾತ ಸಾಹಿತಿ ಅಂಬಿಕಾಸುತನ್ ಮಾಂಗಾಡ್ ನೆರವೇರಿಸಿದರು.
​”ಬೆಳಕಿನ ಸೂರ್ಯೋದಯವನ್ನು ಸೃಷ್ಟಿಸಿದ್ದು ವಿದ್ಯಾಲಯಗಳು. ಅಂತಹ ಒಂದು ಸೂರ್ಯೋದಯವನ್ನು 1952 ರಲ್ಲಿ ಸಣ್ಣಯ ಮಾಸ್ಟರ್ ಅವರು ಬಂದಡ್ಕದಲ್ಲಿ ಏಕೋಪಾಧ್ಯಾಯ ಶಾಲೆಯನ್ನು ಆರಂಭಿಸುವ ಮೂಲಕ ನೆರವೇರಿಸಿದರು,” ಎಂದು ಅವರು ಹೇಳಿದರು. ಸ್ಟೆಫಿ ಪಿ.ಎ. ವಿನ್ಯಾಸಗೊಳಿಸಿದ ಲೋಗೋವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಪ್ಲಾಟಿನಂ ಜುಬಿಲಿ ಸಮಿತಿಯ ಕಾರ್ಯಾಧ್ಯಕ್ಷರಾದ ಸುರೇಶ್ ಪಿ.ವಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ರಾಘವ ಎಂ.ಎನ್. ವಾರ್ಷಿಕ ವರದಿಯನ್ನು ಮಂಡಿಸಿದರು. ಎಸ್‌.ಎಸ್‌.ಎಲ್‌.ಸಿ ಹಾಗೂ ಪ್ಲಸ್ ಟು ಪರೀಕ್ಷೆಗಳಲ್ಲಿ ಅತ್ಯುನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶ್ರೀಮತಿ ಅನ್ನಮ್ಮ ಜೋಯ್ ಮಟ್ಟತ್ತಿಲ್ ಮತ್ತು ಶ್ರೀ ವಿನೋದ್ ಟಿ.ವಿ. ಅವರು ದತ್ತಿ ನಿಧಿಗಳನ್ನು ವಿತರಿಸಿದರು. ಇದೇ ಸಂದರ್ಭದಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸ್ಮರಣಿಕೆಗಳನ್ನು ವಿತರಿಸಲಾಯಿತು.


ಸಂಘಟನಾ ಸಮಿತಿಯ ಪೋಷಕರಾದ ಶೋಭನಾ ಬಾಲಚಂದ್ರನ್, ಕೆ.ಎನ್. ರಾಜನ್, ಶ್ರೀಜಿತ್ ಎಂ.ಪಿ, ರಮ್ಯಾ ಆರ್, ಕೆ. ರಾಧಾಕೃಷ್ಣನ್ ನಂಬಿಯಾರ್, ಜೋಸ್ ಪಾರತ್ತಟ್ಟೇಲ್, ಕೆ. ಬಲರಾಮನ್ ನಂಬಿಯಾರ್, ಸಿಂಧು ಆಲಿಂಗಲ್, ಚರಣ್ ಕುಮಾರ್, ಸುಭಾಷ್ ವನಶ್ರೀ, ಹರಿದಾಸ್ ಬಂದಡ್ಕ, ಸಾಬು ಅಬ್ರಹಾಂ, ವಿ. ದಾಸ್ ಮಾಸ್ಟರ್, ಅಜಯ ಪಿ.ಎನ್, ಜ್ಯೋತಿ ಲಕ್ಷ್ಮಿ ಟೀಚರ್ ಮೊದಲಾದವರು ಶುಭ ಹಾರೈಸಿದರು. ಪ್ರಚಾರ ಸಮಿತಿ ಸಂಚಾಲಕ ಸುಭಾಷ್, ಆಹಾರ ಸಮಿತಿ ಅಧ್ಯಕ್ಷ ಚರಣ್ ಕುಮಾರ್ ,ಬಾಬು ಮಾಸ್ಟರ್ ಮೊದಲಾದವರು ಉಪಸ್ಥಿತರಿದ್ದರು.
ಪ್ರಾಂಶುಪಾಲೆ ಶ್ರೀಮತಿ ರೇಖಾ ದಾಸ್ ಕೆ.ಪಿ. ಸ್ವಾಗತಿಸಿದರು. ವಿಜಯನ್ ಎಂ.ಎಚ್. ವಂದಸಿದರು. ಪ್ಲಾಟಿನಂ ಜುಬಿಲಿ ಕಾರ್ಯಕ್ರಮದ ಸಂಚಾಲಕಿ ಶ್ರೀಮತಿ ವಸಂತಕುಮಾರಿ ಟಿ.ಕೆ. ಜುಬಿಲಿ ವರ್ಷದ ಕಾರ್ಯಕ್ರಮಗಳ ಕುರಿತು ವಿವರಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡ ನೃತ್ಯ ರೂಪಕದೊಂದಿಗೆ ಪ್ಲಾಟಿನಂ ಜುಬಿಲಿ ಆಚರಣೆಗಳಿಗೆ ಅಧಿಕೃತ ಚಾಲನೆ ನೀಡಲಾಯಿತು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00