ಕುಂಬಳೆ: ಭಕ್ತಿ ಸಡಗರದಿಂದ ಪಾರೆ ಶ್ರೀ ಭಗವತಿ ಆಲಿ ಚಾಮುಂಡಿ ಕ್ಷೇತ್ರ ಕಳಿಯಾಟ ಉತ್ಸವ ಆರಂಭ

by Narayan Chambaltimar
  • ಅತ್ಯುತ್ತರ ಕೇರಳದ ಅಪೂರ್ವ ಆಲಿಭೂತ ನಡೆಯುವ ತಾಣ: ಎ. 6ರಂದು ಭಗವತಿ ಯ ಹೂಮುಡಿ

ಕುಂಬಳೆ: ನಾಡಿನ ಮತೀಯ ಸೌಹಾರ್ದ ಸತ್ಪರಂಪರೆಗೆ ಕೖಗನ್ನಡಿ ಹಿಡಿಯುವ ಕುಂಬಳೆಯ ಪಾರೆ ಶ್ರೀ ಭಗವತಿ ಆಲಿ ಚಾಮುಂಡಿ ಕ್ಷೇತ್ರದ ಕಳಿಯಾಟ ಮಹೋತ್ಸವಕ್ಕೆ ಧ್ವಜಾರೋಹಣವಾಗಿದ್ದು, ಭಕ್ತಿ ಸಂಭ್ರಮಗಳಿಂದ ದೖವ ಕಾರ್ಯಕ್ರಮಗಳು ಜರಗುತ್ತಿದೆ.

ಮಾ. 30ರಂದು ಸೋಮವಾರ ರಾತ್ರಿ ಭಂಡಾರಮನೆಯಿಂದ ಆಚಾರಪಟ್ಟವರು ಮತ್ತು ಗುರಿಕ್ಕಾರರು ಹಾಗೂ ನಾಲ್ಕು ಊರ್ಯ(ಕುಂಬಳೆ, ಕಾರ್ಲೆ, ಬಂಬ್ರಾಣ, ಇಚ್ಲಂಪಾಡಿ) ಹಾಗೂ ನೂರು ವಿಲ್ಲಾ ತೀಯ ಸಮುದಾಯದವರು ಸೇರಿ ಉತ್ಸವ ಮೂರ್ತಿ,ತಿರುವಾಯುಧ, ಛತ್ರ ಚಾಮರ ಸಹಿತ ವಾದ್ಯಘೋಷದಲ್ಲಿ ಧ್ವಜ ಸಹಿತ ಭಂಡಾರ ತರುವುದರೊಂದಿಗೆ ಕಾರ್ಯಕ್ರಮಗಳಿಗೆ ಆರಂಭವಾಯಿತು. ಮಾ. 31ರಂದು ಮಂಗಳವಾರ ಬೆಳಿಗ್ಗೆ 4ಕ್ಕೆ ಭಗವತೀ ದರ್ಶನ, ಕೆಂಡಸೇವೆ, ಪ್ರದಕ್ಷಿಣೆ-ಬಲಿ ನಡೆದು ಕಳಿಯಾಟಕ್ಕೆ ಧ್ವಜಾರೋಹಣವಾಯಿತು.

ಬಳಿಕ ಅಪರಾಹ್ನ ಪಳ್ಳಿ ಪೂವಣ್ಣ ದೖವದ ವೆಳ್ಳಾಟಂ, ಭಜನೆ, ರಾತ್ರಿ ಅಣಂಙ್ ಭೂತ, ಪಳ್ಳಿ ಪೂವಣ್ಣ ದೖವದ ಕೋಲ, ಬೀಲ್ಲಾಪುರತ್ತ್ ಭಗವತಿ ಕೋಲಗಳು ನಡೆಯಿತು.

ಎಪ್ರೀಲ್ 1ರಂದು ಸಂಜೆ 4ರಿಂದ ಭಗವತಿ ದರ್ಶನ, ಅಡಯಾಳಂ ಚೇರ್ಕಲ್, ರಾತ್ರಿ 7ಕ್ಕೆ ವೀರಪುತ್ರನ್ ದೖವದ ವೆಳ್ಳಾಟಂ ಸಹಿತ ವಿವಿಧ ದೖವಗಳ ವೆಳ್ಳಾಟಂ ನಡೆಯಲಿದೆ.

ಎ. 2ರಂದು ಮೊದಲ ಕಳಿಯಾಟ ನಡೆಯಲಿದೆ.ಬೆಳಿಗ್ಗೆ 8ಕ್ಕೆ ವೀರಪುತ್ರನ್ ದೖವದ ಕೋಲ, 20ರಿಂದ ಮಲಯಾಂ ಚಿಮುಂಡಿ ದೖವದ ಕೋಲ, ಅನ್ನದಾನ, ಸಂಜೆ4ರಿಂದ ಭಗವತಿ ದರ್ಶನ, ಕೆಂಡಸೇವೆ, ಪುದಿಯ ಭಗವತಿ ತೊಡಂಙಲ್, ಅಡಯಿಳಂ ಚೇರ್ಕಲ್, 7ರಿಂದ ಕರಿವಿಲ್ಲ್, ಕನ್ನಿಕರುಮಗನ್, ವೀರಕಪುತ್ರನ್ ದೖವಗಳ ವೆಳ್ಳಾಟಂ, ಭಗವತಿ ದರ್ಶನ, ಕೆಂಡಸೇವೆ, ಬಿಂಬದರ್ಶನ, ಉರುಳುಸೇವೆ, ಪುದಿಯ ಭಗವತಿ ಕುಳಿಚಾಟಂ, ಮಲಯಾಂ ಚಾಮುಂಡಿ ಕೋಲ ಜರಗಲಿದೆ.

ಎ. 3ರಂದು ನಡು ಕಳಿಯಾಟ ಜರಗಲಿದೆ. ಬೆಳಿಗೆ 8ರಿಂದ ಕನ್ನಿಕರುಮಗನ್, ಕರಿವಿಲ್ಲು, ವೀರಕಪುತ್ರನ್ ದೖವಗಳ ಕೋಲ, ಅನ್ನದಾನ, ಅಪರಾಹ್ನ 3ರಿಂದ ವೇಟಕ್ಕೊರುಮಗನ್, ಮಲಯಾಂ ಚಾಮುಂಡಿ ಕೋಲ, ಸಂಜೆ ಭಜನೆ ನಡೆಯಲಿದೆ. ಬಳಿಕ ಹುಲ್ಪೆ ಸಮರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಎ. 4ರಂದು ಬೆಳಿಗ್ಗೆ 5ಕ್ಕೆ ಪೀಯಾಯಿ, 6ಕ್ಕೆ ಆಲಿಭೂತ, 10ರಿಂದ ಭಗವತಿ ದರ್ಶನ, ಕೆಂಡಸೇವೆ, ಬಲಿ, ಪುದಿಯ ಭಗವತಿ ದೖವ, ಕಲಶ ಪ್ರದಕ್ಷಿಣೆ, ವೀರಕಾಳಿ ದೖವದ ತೊಡಂಙಲ್ ನಡೆಯಲಿದೆ.
ಅಪರಾಹ್ನ ಭಜನೆ, ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ. ಅನಂತರ 9.30ರಿಂದ ವೇಟಕೊರುಮಗನ್ ದೖವದ ವೆಳ್ಳಾಟಂ, ಭಗವತಿ ದರ್ಶನ, ಕೆಂಡಸೇವೆ, ಬಿಂಬದರ್ಶನ ಉರುಳುಸೇವೆ, ವೀರಕಾಳಿ ದೖವದ ತೋತ್ತಂ, ಮಲಯಾಂ ಚಾಮುಂಡಿ ದೖವದ ಕುಳಿಚ್ಚಾಟ ನಡೆಯಲಿದೆ.
ಎ. 5ರಂದು ಬೆಳಿಗ್ಗೆ 6ಕ್ಕೆ ಪಿಯಾಯಿ, 6ರಿಂದ ಆಲಿಭೂತ, ಮಲಯಾಂ ಚಾಮುಂಡಿಕೋಲ, ವೇಟಕೊರುಮಗನ್ ಕೋಲ, ಭಗವತಿ ದರಶನ, ಕೆಂಡಸೇವೆ, ವೀರಕಾಳಿ ದೖವದ ಕೋಲ, ಪಾಡಾರ್ ಕುಳಂಙರ ಭಗವತಿ ತೊಡಂಙಲ್, ಅನ್ನದಾನ, ಅಪರಾಹ್ನ ಭಜನೆ, ರಾತ್ರಿ ವಿವಿಧ ದೖವಗಳ ವೆಳ್ಳಾಟ, ಕುಳಿಚಾಟ, ಮತ್ತು ನೂರುವಿಲ್ಲ್ ಕುರಿಕ್ಕಳ್ ದೖವದ ಕೋಲ ನಡೆಯಲಿದೆ.

ಎ. 6ರಂದು ಬೆಳಿಗ್ಗೆ 6ಕ್ಕೆ ಪೀಯಾಯಿ, 6.30ರಿಂದ ಆಲಿಭೂತ, ಮಲಯಾಂ ಚಾಮುಂಡಿ, ವೀರಕ ಪುತ್ರನ್ ದೖವಗಳ ಕೋಲ, ಅನ್ನದಾನ, ಅನಪರಾಹ್ನ 5ರಿಂದ ಭಗವತಿ ದರ್ಶನ, ಐಪಾಡಾರ್ ಕುಳಂಙರ ಭಗವತಿಯ ಹೂಮೂಡಿ, ಮಂತ್ರಮೂರ್ತಿ, ಆಲಿಭೂತ, ಕಲಶಪ್ರದಕ್ಷಿಣೆಯೊಂದಿಗೆ ಕಳಿಯಾಟಕ್ಕೆ ಧ್ವಜಾವರೋಹಣ ನಡೆಯಲಿದೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00