362
ಡಿ. 29ರಂದು ಬೇಕಲ್ ಫೆಸ್ಟ್ ವೇಳೆ ರೖಲು ಬಡಿದು ಮಗ ಮೃತಪಟ್ಟ ಖಿನ್ನತೆಯಿಂದ ಸಾವಿಗೆ ಶರಣಾದ ದಂಪತಿ
ಕಾಸರಗೋಡು: ಪೊಯಿನಾಚಿಯಲ್ಲಿ ದಂಪತಿಗಳಿಬ್ಬರು ನೇಣು ಬಿಗಿದು ಆತ್ಮಹತ್ಯೆ ನಡೆಸಿದರು. ಪೊಯಿನಾಚಿ ಪರಂಬ ನಿವಾಸಿಗಳಾದ ವೇಣುಗೋಪಾಲ್ – ಸ್ಮಿತಾ ದಂಪತಿಯರು ಆತ್ಮಹತ್ಯೆ ನಡೆಸಿದವರಾಗಿದ್ದಾರೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಬೇಕಲ ಫೆಸ್ಟ್ ವೇಳೆ ರೖಲು ಡಿಕ್ಕಿಯಾಗಿ ಮೃತಪಟ್ಟ ಯುವಕ ಶಿವಾನಂದನ ತಾಯಿ-ತಂದೆ ಇವರಾಗಿದ್ದಾರೆ. ಮಗನ ಮರಣದ ಬಳಿಕ ತಾಯ್ತಂದೆಯರಾದ ಇವರು ಖಿನ್ನತೆಗೆ ಒಳಗಾಗಿದ್ದರು.
ಡಿ. 29ರಂದು ಶಿವಾನಂದ ಮೃತರಾಗಿದ್ದರು. ತದನಂತರ ಈ ದಂಪತಿಯರು ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಿಗ್ಗೆ ಮನೆಯ ಹಾಲ್ ನಲ್ಲಿ ದಂಪತಿಯರು ನೇಣು ಬಿಗಿದು ಸಾವಪ್ಪಿದ ಸ್ಥಿತಿಯಲ್ಲಿ ಪತ್ತೆಯಾದರು. ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.






