ಕಾಸರಗೋಡು: ಬದಿಯಡ್ಕ ನಿವಾಸಿ ಬ್ಯಾಂಕ್ ಸಿಬಂದಿಯೊಬ್ಬರು ತ್ರಿಶೂರು ಚಾಲಕುಡಿಯಲ್ಲಿ ರೖಲು ಪ್ರಯಾಣದ ಮಧ್ಯೆ ಹೊಳೆಗೆ ಬಿದ್ದು ಕಾಣೆಯಾದ ಘಟನೆ ನಡೆದಿದೆ. ಬದಿಯಡ್ಕ ಪೆಟ್ರೋಲ್ ಬಂಕ್ ಬಳಿಯ ದಿ. ರವೀಂದ್ರ ಶೆಣೖ ಅವರ ಪುತ್ರ ಅಚ್ಯುತಾನಂದ ಶೆಣೖ (40) ನಾಪತ್ತೆಯಾದ ವ್ಯಕ್ತಿಯಾಗಿದ್ದಾರೆ.
ರೖಲಿನಿಂದ ಹೊಳೆಗೆಸೆಯಲ್ಪಟ್ಟ ಇವರ ಪತ್ತೆಗೆ ಶೋಧ ಕಾರ್ಯ ಮುಂದುವರಿಯುತ್ತಿದೆ.
ಗುರುವಾರ ಬೆಳಿಗ್ಗೆ 10.45ರ ವೇಳೆಗೆಸ ಈ ಘಟನೆ ನಡೆದಿದೆ. ತಿರುವನಂತಪುರದಿಂದ ತ್ರಿಶೂರಿಗೆ ಬರುತ್ತಿದ್ದ ವೇನಾಡ್ ಎಕ್ಸ್ಪ್ರೆಸ್ ರೖಲಿನಲ್ಲಿ ಇವರು ಪ್ರಯಾಣಿಸುತ್ತಿದ್ದರು. ಅಂಗಮಾಲಿ ಕರಯಾಂಪರಂಬಿಲ್ ಎಂಬಲ್ಲಿ ಇಂಡಿಯನ್ ಮಲ್ಟಿಪಲ್ ಕೋ-ಓಪ್ ಸೊಸೈಟಿ ಬೇಂಕಿನಲ್ಲಿ ವಿಭಾಗಾಧಿಕಾರಿಯಾಗಿ ಇವರು ದುಡಿಯುತ್ತಿದ್ದರು. ಗುರುವಾರ ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದ ಅವರು ಕರ್ತವ್ಯದ ನಡುವೆಯೆ ಹೊರಗೆ ತೆರಳಿದ್ದರು. ಸುದೀರ್ಘ ಸಮಯ ದಾಟಿದರೂ ಬೇಂಕಿಗೆ ಮರಳಿ ಬಾರದೇ ಇದ್ದ ಹಿನ್ನೆಲೆಯಲ್ಲಿ ಸಹೋದ್ಯೋಗಿಗಳು ಫೋನ್ ಕರೆ ಮಾಡಿದಾಗ ರೖಲಿನಲ್ಲಿದ್ದ ಪ್ರಯಾಣಿಕರೊಬ್ಬರು ಕರೆ ಸ್ವೀಕರಿಸಿದರು. ಸೀಟಿನಲ್ಲಿ ಫೋನ್ ಇರಿಸಿ ರೖಲಿನ ಬಾಗಿಲ ಬಳಿ ತೆರಳಿದವರು ಅನಂತರ ಕಾಣೆಯಾಗಿದ್ದಾರೆಂದಷ್ಟೇ ಅವರು ತಿಳಿಸಿದ್ದರು. ಇದೇ ವೇಳೆ ರೖಲು ಟ್ರಾಕಿನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ರೖಲಿನಿಂದ ವ್ಯಕ್ತಿಯೊಬ್ಬರು ಹೊಳೆಗೆಸೆಯಲ್ಪಡುವುದನ್ನುಷಕಂಡಿದ್ದು, ಪೊಲೀಸರಿಗೆ ಮಾಹಿತಿ ಇತ್ತಿದ್ದರು. ಇವರು ತ್ರಿಶೂರಿನಲ್ಲಿ ವಾಸಿಸುತ್ತಿದ್ದು, ನೀರ್ಚಾಲಿನಲ್ಲಿ ಮನೆ ಹೊಂದಿದ್ದರು.






