ಕೇರಳದಲ್ಲಿ ಒಂದೇ ಹಂತದ ಚುನಾವಣೆಗೆ ಸಿದ್ಧತೆ: ಮಾ. 16 ಅಥವಾ 17ರಂದು ಚುನಾವಣಾ ದಿನಾಂಕ ಘೋಷಣೆ ಸಾಧ್ಯತೆ

by Narayan Chambaltimar

ದೆಹಲಿ: ಕೇರಳ ಸಹಿತ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆ ಮಾರ್ಚ್ 15ರ ಬಳಿಕ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮಾಹಿತಿ ಇತ್ತಿದೆ. ಪ. ಬಂಗಾಳದ ಅಂತಿಮ ಮತದಾರರ ಪಟ್ಟಿಯ ಕುರಿತು ಆಕ್ಷೇಪ ಸಲ್ಲಿಸಲಿರುವ ಅಂತಿಮಾವಧಿ ಮಾ. 15ಕ್ಕೆ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ಮಾ. 16 ಅಥವಾ 17ರಂದು ಚುನಾವಣಾ ಘೋಷಣೆ ಸಾಧ್ಯತೆ ನಿರೀಕ್ಷಿಸಲಾಗಿದೆ.

ಕೇರಳ ಸಹಿತ ಮೂರು ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಸಲು ಪರಿಗಣಿಸಲಾಗಿದೆ. ಕೇರಳದ ಹೊರತು ತಮಿಳುನಾಡು ಮತ್ತು ಪುದುಚ್ಚೇರಿಯಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಅಸ್ಸಾಂ, ಪ. ಬಂಗಾಳದಲ್ಲಿ ಮೂರು ಹಂತದ ಚುನಾವಣೆಗೆ ಸಿದ್ದತೆಯಾಗಿದೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00