ಬಾಲನಟನಾಗಿ ಮಲಯಾಳಂ ಬೆಳ್ಳಿತೆರೆಗೆ ಪರಿಚಿತನಾದ ಪಯ್ಯನ್ನೂರಿನ ನಟ ಹರಿಮುರಳಿ ಆತ್ಮಹತ್ಯೆ

by Narayan Chambaltimar

ಕಾಸರಗೋಡು: ಅನೇಕ ಮಲಯಾಳಂ ಸಿನಿಮಾಗಳಲ್ಲಿ ಬಾಲನಟನಾಗಿ ನಟಿಸಿ ಜನಪ್ರಿಯನಾಗಿದ್ದ ನಟ ಹರಿಮುರಳಿ (27) ನೇಣು ಬಿಗಿದು ಆತ್ಮಹತ್ಯೆ ಮಾಡಿದರು. ಪಯ್ಯನ್ನೂರಿನ ಅನ್ನೂರಿನ ವಸತಿಯಲ್ಲವರು ಆತ್ಮಹತ್ಯೆ ಗೆ ಶರಣಾದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ದಿಲೀಪ್ ನಾಯಕನಾಗಿ ನಟಿಸಿದ ಲಾಲ್ ಜೋಸ್ ನಿರ್ದೇಶನದ ‘ರಸಿಕನ್’ ಚಿತ್ರದಲ್ಲಿ ಇವರು ಗಮನೀಯ ಪಾತ್ರದಲ್ಲಿ ನಟಿಸಿದ್ದರು.
ರಂಗಭೂಮಿ, ಸಿನಿಮಾ ಕಲಾವಿದ ಪಯ್ಯನ್ನೂರ್ ಮುರಳಿ-ಪ್ರಸನ್ನ ದಂಪತಿಯ ಪುತ್ರನಾದ ಹರಿಮುರಳಿ ಬಾಲಕಲಾವಿದನಾಗಿ ಚಿತ್ರರಂಗಕ್ಕೆ ಕಾಲೂರಿದ್ದರು. ಕೆಲವು ಟಿವಿ ಧಾರವಾಹಿಗಳಲ್ಲೂ ನಟಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ಏನೆಂದು ವರದಿಯಾಗಿಲ್ಲ. ಮೃತರು ವಿಷ್ಯುವಲ್ ಇಫೆಕ್ಟ್ಸ್ ಏಂಡ್ ಎನಿಮೇಷನ್ ಪದವೀಧರರಾಗಿದ್ದು, ಸ್ವತಃ ಚಿತ್ರ ಕಥೆ ಬರೆದು ಸಿನಿಮಾ ನಿರ್ದೇಶಿಸುವ ಕನಸಿನಲ್ಲಿದ್ದರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00