- ಸೌದೆ ಸಾಗಿಸುವ ನೆಪದಲ್ಲಿ ಬೆಲೆ ಬಾಳುವ ಮರಗಳನ್ನು ಕಡಿದು ಸಾಗಿಸಿದ್ದು ಯಾರು?
- ಉನ್ನತ ತನಿಖೆಗೆ ನಾಗರಿಕರ ಬೇಡಿಕೆ
ಪೆರ್ಲ: ಸೌದೆ ಕಡಿದು ಕೊಂಡೊಯ್ಯುವ ನೆಪದಲ್ಲಿ ಉಕ್ಕಿನಡ್ಕ ಮೆಡಿಕಲ್ ಕಾಲೇಜ್ ಆವರಣದಿಂದ ಮರ ಕಡಿದು ಸಾಗಿಸಲಾಗಿದೆ. ಕಳೆದ ಹಲವು ಸಮಯದಿಂದ ಮರ ಕಡಿದು ಸಾಗಿಸಲಾಗಿದೆಯಾದರೂ ಸಂಬಂಧಪಟ್ಟವರು ಈ ಕುರಿತು ಗಮನಿಸಲೇ ಇಲ್ಲವೆಂದು ನಾಗರಿಕರು ದೂರುತ್ತಾರೆ. ಮೆಡಿಕಲ್ ಕಾಲೇಜು ಪೂರ್ಣಪ್ರಮಾಣದಲ್ಲಿ ಕಾರ್ಯಾರಂಭಗೊಳ್ಳದೇ ಇರುವುದರಿಂದ ಪ್ರಸ್ತುತ ಇಲ್ಲಿ ಕಾವಲುಗಾರರೋ, ವಿಚಾರಕರೋ ಯಾರೂ ಇಲ್ಲದ ಸ್ಥಿತಿ ಇದೆ. ಈ ಸನ್ನಿವೇಶವನ್ನು ಬಳಸೀಕೊಂಡು ಆವರಣದಿಂದ ಮರ ಕಡಿದು ಸಾಗಿಸಲಾಗಿದೆಯೆಂದು ತಿಳಿದುಬಂದಿದೆ.

ಇತ್ತೀಚಿನ ಭಾನುವಾರ ಐವರು ಕಾರ್ಮಿಕರನ್ನಿರಿಸಿ ಇಲ್ಲಿಂದ ಮರ ಕಡಿದು ಸಾಗಿಸಲಾಗಿದೆ. ಇದನ್ನು ಮೆಡಿಕಲ್ ಕಾಲೇಜ್ ಸೆಕ್ಯೂರಿಟಿ ಕಂಡೂ ಕಾಣದಂತೆ ನಟಿಸಿರುವುದಾಗಿ ನಾಗರಿಕರು ಆಕ್ಷೇಪಿಸಿದ್ದಾರೆ. ಮೆಡಿಕಲ್ ಕಾಲೇಜ್ ಕೌಪೌಂಡಿನೊಳಗಿಂದಲೇ ಮರ ಕಡಿದಿರುವುದು ಸ್ಪಷ್ಟವಾಗಿದ್ದು, ಇದರಲ್ಲಿ ಯಾರ ಕೖವಾಡ ಇದೆಯೆಂಬುದು ಬೆಳಕಿಗೆ ಬರಲು ತನಿಖೆಯಾಗಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ. ಈ ಕುರಿತು ನಾಗರಿಕರ ದೂರು ದೊರೆತಿದೆ ಎಂದು ಮೆಡಿಕಲ್ ಕಾಲೇಜಿನ ಉಸ್ತುವಾರಿ ಡಾಕ್ಟರ್ ಅರುಣ್ ಕುಮಾರ್ ದೃಢೀಕರಿಸಿದ್ದಾರೆ.






