ಕುಂಬಳೆ ಭಾಸ್ಕರನಗರದ ನವೋದಯ ಕ್ಲಬ್ ಬಳಗದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

by Narayan Chambaltimar
  • ಮಹಿಳೆ ಮತ್ತು ದಿನಾಚರಣೆಯ ಬಣ್ಣಗಳ ಕುರಿತು ವಿಚಾರಮಂಥನ, ಸನ್ಮಾನ

ಕುಂಬಳೆ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ 2026ರ ಅಂಗವಾಗಿ ಕುಂಬಳೆಯ ಭಾಸ್ಕರ ನಗರದ ನವೋದಯ ಗ್ರಂಥಾಲಯ ಮತ್ತು ವಾಚನಾಲಯ, ನವೋದಯ ಫ್ರೆಂಡ್ಸ್ ಕ್ಲಬ್ ಹಾಗೂ ನವೋದಯ Women’s Wing ಘಟಕಗಳ ಸಂಯುಕ್ತ ಆಶ್ರಯದಲ್ಲಿ ವಿಶೇಷ ಮಹಿಳಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಾಷ್ಟ್ರೀಯ ಮಾಯಾಜಾಲ ಪ್ರಶಸ್ತಿ ವಿಜೇತೆ ಹಾಗೂ ‘ಕಲಾಸೃಷ್ಟಿ’ ವರೈಟಿ ಎಂಟರ್ಟೈನ್‌ಮೆಂಟ್ ತಂಡದ ನಿರ್ದೇಶಕಿ ಪ್ರೊ. ಮುಬೀನಾ ಪರ್ವೀನ್ ತಾಜ್ (ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಂಗಳೂರು) ಮಹಿಳಾ ದಿನಾಚರಣೆಯ ‘ಥೀಮ್ ಬಣ್ಣಗಳ ಮಹತ್ವ’ ವನ್ನು ವಿವರಿಸಿದರು. ಇನ್ನೊಬ್ಬರು ಅತಿಥಿ
ಅಂತಾರಾಷ್ಟ್ರೀಯ ಜಾದೂ ಪ್ರಶಸ್ತಿ ವಿಜೇತೆ ಹಾಗೂ ಕಲಾಸೃಷ್ಟಿ ತಂಡದ ನಿರ್ದೇಶಕಿ ಕು. ಶಮಾ ಪರ್ವೀನ್ ತಾಜ್ ಇವರು ಸಮಾಜದಲ್ಲಿ ಸಮಾನತೆ ಮತ್ತು ಬಾಲಕಿಯರ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ಬೆಂಬಲದ ಮಹತ್ವವನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರೊ. ಮುಬೀನಾ ಪರ್ವೀನ್ ತಾಜ್ ಮತ್ತು ಕು. ಶಮಾ ಪರ್ವೀನ್ ತಾಜ್ ಅವರನ್ನು ನವೋದಯ ಮಹಿಳಾ ಘಟಕದ ವತಿಯಿಂದ ಸನ್ಮಾನಿಸಲಾಯಿತು

ವೇದಿಕೆಯಲ್ಲಿ ನವೋದಯ ಗ್ರಂಥಾಲಯ ಮತ್ತು ವಾಚನಾಲಯದ ಅಧ್ಯಕ್ಷ ಅನೂಪ್ ರಾಜ್, ಕಾರ್ಯದರ್ಶಿ ಪೂಜಾ ರತೀಶ್, ಕುಂಬಳೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಬಾಲ್ಕಿಸ್, ನವೋದಯ ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾ ನವೀನ್, ಕಾರ್ಯದರ್ಶಿ ಅನ್ನಪೂರ್ಣ, ಹಿರಿಯ ಕಾರ್ಯಕಾರಿ ಸದಸ್ಯೆ ಗೀತಾ, ಹಾಗೂ ನವೋದಯ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರಾದ ಸಂದೀಪ್ ಡಿ’ಸೋಜಾ ಉಪಸ್ಥಿತರಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ‘ಮಹಿಳೆಯರಿಗಾಗಿ ಇಂದ್ರಜಾಲ’ ಎಂಬ ವಿಶೇಷ ಮನರಂಜನಾ ಕಾರ್ಯಕ್ರಮದಲ್ಲಿ ಕಲಾಸೃಷ್ಟಿ ತಂಡದ ಮಹಿಳಾ ಜಾದೂಗಾರಿಣಿಯರಾದ ಮುಬೀನಾ ಹಾಗೂ ಶಮಾ ಜಂಟಿಯಾಗಿ ಮಹಿಳಾ ಸಬಲೀಕರಣವನ್ನು ಪ್ರತಿಬಿಂಬಿಸುವ ಜಾದೂ ಪ್ರದರ್ಶನ ನೀಡಿದರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00