ಪೆರ್ಲ ನಿರಂತರ ಬಯಲಾಟ, ಹಿರಿಯ ಕಲಾವಿದರಿಗೆ ಪ್ರಶಸ್ತಿ ಪ್ರದಾನದ ಜತೆ ಪಡ್ರೆ ಚಂದು ಸ್ಮಾರಕ ಯಕ್ಷಗಾನ ಕೇಂದ್ರದ 21 ವಾರ್ಷಿಕ ಸಂಪನ್ನ

by Narayan Chambaltimar
  • ಮುಂದಿನ ಪೀಳಿಗೆ ರೂಪಿಸುವ ದೃಷ್ಟಿಯಿಂದ ಎಳೆಯ ಮಕ್ಕಳಲ್ಲಿ ಕಲಾಭಿರುಚಿ ಮೂಡಿಸಬೇಕು: ಎಡನೀರು ಸ್ವಾಮೀಜಿ

ಪೆರ್ಲ: ಎಳೆಯ ಪೀಳಿಗೆಗೆ ಯಕ್ಷಗಾನದ ಆಸಕ್ತಿ ಮೂಡಿಸುವ ಕೆಲಸದಲ್ಲಿ ಹಿರಿಯರು ಕಾಳಜಿ ವಹಿಸಬೇಕು. ಯಕ್ಷಗಾನದಿಂದ ಮನುಷ್ಯರಿಗೆ ನೈತಿಕ ಸಂಸ್ಕಾರ ಸಿಗುತ್ತದೆ. ಸಮಾಜಕ್ಕೂ ಸಾಂಸ್ಕೃತಿಕ ಸಂಸ್ಕಾರ ದೊರೆಯುತ್ತದೆ. ಆದ್ದರಿಂದ ಮುಂದಿನ ಪೀಳಿಗೆ ರೂಪಿಸುವ ದೃಷ್ಟಿಯಿಂದ ಮಕ್ಕಳಲ್ಲಿ ಕಲಾಭಿರುಚಿ ರೂಪಿಸಬೇಕಾದುದು ಅನಿವಾರ್ಯ ಎಂದು ಶ್ರೀಮದೆಡನೀರು ಮಠಾಧೀಶ ಸಚ್ಛಿದಾನಂದ ಭಾರತೀ ಶ್ರೀಪಾದಂಗಳು ನುಡಿದರು.
ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ತರಬೇತಿ ಕೇಂದ್ರದ 21ನೇ ವಾರ್ಷಿಕೋತ್ಸವ ಉದ್ಘಾಟಿಸಿ,
ಕೇಂದ್ರದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಸಭಾಭವನದ ನಿಧಿ ಸಂಗ್ರಹಕ್ಕೆ
ಚಾಲನೆ ಇತ್ತು ಅವರು ಮಾತನಾಡಿದರು.


ಗಡಿನಾಡು ಕಾಸರಗೋಡಿನ ಪೆರ್ಲದಲ್ಲಿ ಯಕ್ಷಗಾನ ಕೇಂದ್ರ
ಸ್ಥಾಪಿಸಿ, ನೂರಾರು ಶಿಷ್ಯರ ಮೂಲಕ ಕಲಾ ಜಗತ್ತು ವಿಸ್ತರಿಸಲು ಕೊಡುಗೆ ಇತ್ತ ಕೇಂದ್ರದ ನಾಟ್ಯಾಚಾರ್ಯ ಸಬ್ಬಣಕೋಡಿ ರಾಮಭಟ್ ಅವರಲ್ಲಿ ಕಲಾ ಬದ್ಧತೆ ಇದೆ. ಕಾಸರಗೋಡಿನ ಕಲಾ ಚರಿತ್ರೆಯಲ್ಲಿ ಅವರ ಕೊಡುಗೆ ಪ್ರಮುಖವಾಗಿ ಉಲ್ಲೇಖಿಸಬೇಕಾದ ಸಾಧನೆ ಎಂದು ಶ್ರೀಗಳವರು ಶ್ಲಾಘಿಸಿದರು.
ಡಾ. ಎಸ್. ಎನ್. ಭಟ್ ಪೆರ್ಲ ಅಧ್ಯಕ್ಷತೆ ವಹಿಸಿದರು.

  • ಹತ್ತು ಮಂದಿ ಸಾಧಕ ಕಲಾವಿದರಿಗೆ ಪ್ರಶಸ್ತಿ ಪ್ರದಾನ

ಕಾರ್ಯಕ್ರಮದಲ್ಲಿ ಪಡ್ರೆ ಚಂದು ಸ್ಮಾರಕ ಪ್ರಶಸ್ತಿಯನ್ನು ಪ್ರಸಿದ್ಧ ಹಿರಿಯ ಕಲಾವಿದ ಬೆಳ್ಳಾರೆ ಮಂಜುನಾಥ ಭಟ್, ತೆಂಕಬೖಲು ಪ್ರಶಸ್ತಿಯನ್ನು ಪ್ರಸಿದ್ಧ ಭಾಗವತ, ಗುರು ಮೋಹನ ಬೖಪಡಿತ್ತಾಯ, ಚೇವಾರು ಪ್ರಶಸ್ತಿಯನ್ನು ಹಿರಿಯ ಮದ್ಲೆಗಾರ ಲಕ್ಷ್ಮೀಶ ಅಮ್ಮಣ್ಣಾಯ, ಪುಂಡಿಕಾಯಿ ಪ್ರಶಸ್ತಿಯನ್ನು ಹಿರಿಯ ಕಲಾವಿದ ಎಂ. ಕೆ. ರಮೇಶ ಆಚಾರ್ಯ, ತಲೆಂಗಳ ಭಾಗವತ ಪ್ರಶಸ್ತಿಯನ್ನು ಮದ್ಲೆಗಾರ ಪೆರುವಾಯಿ ಕೃಷ್ಣ ಭಟ್, ಅಡ್ಕಸ್ಥಳ ಪ್ರಶಸ್ತಿಯನ್ನು ಹಿರಿಯ ಕಲಾವಿದ ಕೆ. ಎಚ್. ದಾಸಪ್ಪ ರೖ, ಮಾಯ್ಲೆಂಗಿ ಪ್ರಶಸ್ತಿಯನ್ನು ಹಿರಿಯ ಕಲಾವಿದ ಮಾಡಾವು ಕೊರಗಪ್ಪ ರೖ, ದೇವಕಾನ ಪ್ರಶಸ್ತಿಯನ್ನು ಪ್ರಸಾದನ ಕಲಾವಿದ ಜನಾರ್ಧನ ಬದಿಯಡ್ಕ ಅವರಿಗೆ ನೀಡಿ ಗೌರವಿಸಲಾಯಿತು.


ಇದೇ ಸಂದರ್ಭ ಕೇಂದ್ರದ ಶಾರದಾ ಪೂಜೆಯ ರಜತ ಸಂಭ್ರಮ ದ ಪ್ರಶಸ್ತಿಯನ್ನು ಯಕ್ಷಗಾನ ಕಲಾವಿದರಾದ ಗುಂಡ್ಯಡ್ಕ ಈಶ್ವರ ಭಟ್, ಬೆಳ್ಳಾರೆ ರಾಮ ಜೋಯಿಸ ಅವರಿಗೆ ನೀಡಿ ಗೌರವಿಸಲಾಯಿತು.
ಹಿರಿಯ ಕಲಾವಿದ ಕೋಟೆ ರಾಮಭಟ್, ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ವಿ. ಜಿ. ಭಟ್, ಉಪನ್ಯಾಸಕ ಜಯಪ್ರಕಾಶ ಎ. ನಾಕೂರು,
ಚೇವಾರು ಶಂಕರ ಕಾಮತ್, ಶಾಂತಾ ಕುಂಟಿನಿ, ಕಲಾವಿದೆ ಸಾಯಿ ಸುಮಾ ನಾವುಡ, ರಾಜೇಂದ್ರ ಪ್ರಸಾದ ಪುಂಡಿಕಾಯಿ ಅಭ್ಯಾಗತರಾಗಿ ಪಾಲ್ಗೊಂಡು ಶುಭ ಹಾರೖಸಿದರು.
ಯಕ್ಷಗಾನ ಕೇಂದ್ರ ಸ್ಥಾಪಕ ನಾಟ್ಯಾಚಾರ್ಯ ಸಬ್ಬಣಕೋಡಿ ರಾಮ ಭಟ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕೇಂದ್ರದ ವಕ್ತಾರ ಡಾ. ವಿಷ್ಣು ಪ್ರಸಾದ ಬರೆಕೆರೆ ವಂದಿಸಿದರು. ಜ್ಯೋತ್ಸ್ನಾ ಟೀಚರ್ ಕಡಂದೇಲು ನಿರೂಪಿಸಿದರು.

ದ್ವಿದಿನ ಕಾರ್ಯಕ್ರಮ ಕೇಂದ್ರದ ಪೂರ್ವ ವಿದ್ಯಾರ್ಥಿಗಳ ಮತ್ತು ಹಾಲಿ ವಿದ್ಯಾರ್ಥಿಗಳ ನಿರಂತರ ಯಕ್ಷಗಾನ ಪ್ರದರ್ಶನದೊಂದಿಗೆ ಕಳೆಯೇರಿತು. ಫೆ. 28ರಂದು ಬೆಳಗ್ಗೆ 9ಕ್ಕೆ ಮಹಾಗಣಪತಿ ಹೋಮ, ಭಜನೆಯೊಂದಿಗೆ ಆರಂಭಗೊಂಡಿತ್ತು. ಅನಂತರ ವಿದ್ಯಾರ್ಥಿಗಳ ಗಾನವೖಭವ, ಪೂರ್ವರಂಗ, ನಿರಂತರ ಬಯಲಾಟ, ದುರ್ಗಾಪೂಜೆ ನಡೆಯಿತು. ಎರಡನೇ ದಿನವಾದ ಇಂದೂ ಕೂಡಾ ಅಪರಾಹ್ನ ನಿರಂತರ ಬಯಲಾಟ ಜರುಗಿತು.

ಚಿತ್ರಗಳು: ಉದಯ ಕಂಬಾರ್, ‘ವರ್ಣ’ ನೀರ್ಚಾಲು

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00