- ದೇವಾಲಗಳಲ್ಲಿ ಮಾನವನ ವ್ಯಕ್ತಿ ಪ್ರತಿಷ್ಠೆಗಿಂತ ದೇವರ ಬಿಂಬ ಪ್ರತಿಷ್ಠೆಯೇ ಪ್ರಧಾನ: ಸಮಾರೋಪ ಸಭೆಯಲ್ಲಿ ಎಡನೀರು ಶ್ರೀ
ಮುಳ್ಳೇರಿಯ: ಮಿಂಚಿಪದವು ಶ್ರೀ ಕಾವೇರಿಯಮ್ಮ ಮಹಾಲಿಂಗೇಶ್ವರ ಕ್ಷೇತ್ರದ ನವೀಕರಣ ಪುನರ್ ಪ್ರತಿಷ್ಟಾ ಅಷ್ಟಬಂಧ ಬ್ರಹ್ಮ ಕಲಶೋತ್ಸವವು ಫೆ. 22ರಿಂದ ಮೊದಲ್ಗೊಂಡು ಷಟ್ದಿನಗಳ ಸಂಭ್ರಮದ ಆಚರಣೆಯೊಂದಿಗೆ ಫೆ. 27ರಂದು ಸಂಪನ್ನಗೊಂಡಿತು.
ಗ್ರಾಮೀಣ ಪ್ರದೇಶದಲ್ಲಿ ಪಕ್ಷ ರಾಜಕೀಯದ ತಾತ್ವಿಕ ಬೇಧ ಮರೆತು ಊರೊಂದಾಗಿ ಐಕ್ಯಮಂತ್ರ ಜಪಿಸಿದ ಪುಳಕದೊಂದಿಗೆ ಶ್ರೀ ಮಹಾಲಿಂಗೇಶ್ವರ ದೇವರ ಮತ್ತು ಶ್ರೀ ಕಾವೇರಿಯಮ್ಮನ ಪುನರ್ ಪ್ರತಿಷ್ಟಾ ಬ್ರಹ್ಮಕಲಶೋತ್ಸವ ಸಂಪನ್ನಗೊಂಡು ಸಮರಸತೆಯ ಸಂದೇಶ ಸಾರಿತು.
- ಮಾನವ ಪ್ರತಿಷ್ಠೆಗಿಂತ ದೇವರ
ಪ್ರತಿಷ್ಠೆ ಪ್ರದಾನ..
ಪುನರ್ ಪ್ರತಿಷ್ಟಾ ಬ್ರಹ್ಮಕಲಶೋತ್ಸವಗಳೆಂದರೆ ನಾಡಿನ ಶುದ್ಧೀಕಲಶವೂ ಹೌದು. ಅದರಲ್ಲಿ ತೊಡಗಿಸಿಕೊಳ್ಳುವವರೆಲ್ಲರೂ ತಮ್ಮ ವೖಯ್ಯಕ್ತಿಕ ಚಪಲಗಳ, ಸ್ವಾರ್ಥ ಪ್ರತಿಷ್ಠೆಗಳನ್ನು ಬದಿಗಿಟ್ಟು ಈಶನ ಚರಣದಾಸನಾಗಿ ದೇವಪ್ರತಿಷ್ಟೆಯೇ ಪ್ರದಾನ ಎಂದು ತೊಡಗಿಸಿಕೊಂಡರೆ ಸಮಾಜದಲ್ಲಿ ಸಮಸ್ಯೆಗಳೇ ಇಲ್ಲವಾಗುತ್ತದೆ. ದೇವಾಲಯಗಳು ಉಳ್ಳವನೂ, ಇಲ್ಲದವನೂ ಸಮಾನ ತಕ್ಕಡಿಯಲ್ಲಿ ತೂಗುವ ಜಾಗವಾಗಬೇಕೇ ಹೊರತು ಅದು ಮನುಷ್ಯರ ಈರ್ಷ್ಯೆ ಪ್ರತಿಷ್ಟೆಗಳ ಕೇಂದ್ರ ಅಲ್ಲವೇ ಅಲ್ಲ ಎಂದು ಶ್ರೀ ಮದೆಡನೀರು ಶ್ರೀ ಸಚ್ಛಿದಾನಂದ ಭಾರತಿ ಶ್ರೀ ಪಾದಂಗಳು ನುಡಿದರು. ಫೆ22ರಿಂದ 27ರ ತನಕ ನಡೆದ ಮಿಂಚಿಪದವು ಕ್ಷೇತ್ರದ ಪುನಃ ಪ್ರತಿಷ್ಟಾ ಬ್ರಹ್ಮಕಲಶೋತ್ಸವದ ಸಮಾರೋಪ ಧಾರ್ಮಿಕ ಸಭಾ ಸಮಾರಂಭದಂಗವನ್ನು ಶಿವಕಾವೇರಿ ವೇದಿಕೆಯಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.

ಶ್ರೀ ಕ್ಷೇತ್ರ ತಂತ್ರಿ ವರ್ಯರುಗಳಾದ ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಕ್ಷೇತ್ರದ ಆಡಳಿತ ಮೊಕ್ತೇಸರ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಮಿಂಚಿಪದವು
ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಂಗಳೂರಿನ ಉದ್ಯಮಿ ಮಧುಸೂಧನ ಆಯರ್ ಅಧ್ಯಕ್ಷತೆ ವಹಿಸಿದರು.
ದ. ಕ. ಜಿಲ್ಲೆಯ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಮುಖ್ಯ ಅತಿಥಿಯಾಗಿ ಪಾಲ್ಗೊಂಡರು. ಈ ಸಂದರ್ಭ ಮಾತನಾಡಿದ ಅವರು ಕೋಟ್ಯಾಂತರ ಖರ್ಚಿನ ದೊಡ್ಡ, ದೊಡ್ಡ ಬ್ರಹ್ಮ ಕಲಶಗಳು ನಡೆಯುವ ನಾಡೇ ನಮ್ಮ ಕರಾವಳಿ. ಆದರೆ ಅಲ್ಲೆಲ್ಲಾ ಒಂದಲ್ಲೊಂದು ಆಂತರಿಕ ಸಂಘರ್ಷ, ಸಮಸ್ಯೆ ಇದ್ದೇ ಇರುತ್ತದೆ. ಆದರೆ ಕೇರಳ-ಕರ್ನಾಟಕ ಗಡಿಯ ಪುಟ್ಟ ಕುಗ್ರಾಮ ಮಿಂಚಿಪದವಿನ ಬ್ರಹ್ಮಕಲಶ ಎಡ-ಬಲ ಚಿಂತನೆಗಳನ್ನೊಂದಾಗಿಸಿದ ಅಪರೂಪದ ಐಕ್ಯತೆಯ ಸಂದೇಶ ನೀಡಿದ ಅತ್ಯಪೂರ್ವ ಬ್ರಹ್ಮಕಲಶ ಎಂದರು. ನಾಡಿನಲ್ಲಿ ಈ ಸತ್ಪರಂಪರೆ ಮುಂದುವರಿಯಬೇಕು. ಇದು ಇತರೆಲ್ಲಡೆ ಉಲ್ಲೇಖಿಸಬೇಕಾದ ಮಾದರಿ ಎಂದು ಪ್ರಶಂಸಿಸಿದರು.

ವಾಸ್ತು ಶಿಲ್ಪಿ ಮಹೇಶ್ ಮುನಿಯಂಗಳ,
ಉದ್ಯಮಿ ಕೃಷ್ಣ ಕಾಮತ್, ಪದ್ಮಶ್ರೀ ಸತ್ಯನಾರಾಯಣ ಬೆಳೇರಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ನ್ಯಾಯವಾದಿ ದಾಮೋದರ ಎಂ, ಪ್ರಭಾಕರ ಕಲ್ಲೂರಾಯ ಬನದಗದ್ದೆ, ಕಾನತ್ತೂರು ನಾಲ್ವರ್ ದೖವಸ್ಥಾನದ ಅಧ್ಯಕ್ಷ ಗೋಪಿನಾಥನ್ ನಾಯರ್, ಕಾಟುಕುಕ್ಕೆ ದೇವಳದ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಅಖಿಲ ಕೇರಳ ಯಾದವ ಸಭಾ ಕಾಸರಗೋಡು ಘಟಕದ ಅಧ್ಯಕ್ಷ ಬಾಬು ಮಾಣಿಯೂರು, ನೆಟ್ಟಣಿಗೆ ಮಹಾಲಿಂಗೇಶ್ವರ ಕ್ಷೇತ್ರ ಅಧ್ಯಕ್ಷ ಶಿವಪ್ರಸಾದ್ ನಾಕೂರು, ಮಿಂಚಿಪದವು ಶಿವಕಾವೇರಿ ಆರ್ಟ್ಸ್, ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಕುಂಞಿರಾಮ ಮಣಿಯಾಣಿ ಮೊದಲಾದವರು ಅತಿಥಿಗಳಾಗಿ ಪಾಲ್ಗೊಂಡರು.
ಇದೇ ಸಂದರ್ಭ ಸಮಾಜದ ಸಾಧಕರಾದ ಪದ್ಮಶ್ರೀ ಸತ್ಯನಾರಾಯಣ ಬೆಳೇರಿ, ವಿದ್ವಾನ್ ಬೆಳ್ಳಿಗೆ ನಾರಾಯಣ ಮಣಿಯಾಣಿ, ತಂಬಾನ್ ಪಣಿಕ್ಕರ್ ಪಿಲಿಕ್ಕೋಡ್, ಈಶ್ವರ ಚಂದ್ರ ಕಟೀಲು, ಶಶಿಧರನ್ ತಚ್ಚಂಗಾಡ್, ಸುಧೀರ್ ಕುಮಾರ್ ಮಿಂಚಿಪದವು, ರಾಮಚಂದ್ರ ಎನ್ ಮಿಂಚಿಪದವು, ಯಕ್ಷಗಾನ ಕಲಾವಿದ ಅಪ್ಪಕುಂಞಿ ಮಣಿಯಾಣಿ, ಡಾ. ಯತೀಶ್ ರೖ ಮುಳ್ಳೇರಿಯ, ಸಂತೋಷ್ ಕಬ್ಬಿನಹಿತ್ಲು, ಕಾರ್ತಿಕೇಯನ್, ಸದಾನಂದ ಬಾಳೆಲು, ಕು. ಶಿಯ, ಕು. ವೖಷ್ಣವಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮಧುಸೂಧನ ಆಯರ್ ಅವರನ್ನು ಶ್ರೀಗಳವರು ಮಂತ್ರಾಕ್ಷತೆ ಇತ್ತು, ತಂತ್ರಿ ವರ್ಯರು ಸನ್ಮಾನಿಸಿ ಗೌರವಿಸಿದರು.
ಚಿದಾನಂದ ಕೆದಿಲಾಯ ಸ್ವಾಗತಿಸಿದರು. ಡಾ. ಯತೀಶ್ ಕುಮಾರ್ ರೖ ನಿರೂಪಿಸಿದರು. ಶಿವರಾಮ ಮಣಿಯಾಣಿ ಎಂ. ಎನ್. ವಂದಿಸಿದರು.








