- ಜಾಗತಿಕ ಬಂಟರ ಸಂಘದಲ್ಲಿ ಅಪಸ್ವರ: ತೇಜೋವಧೆಗೆ ಮನನೊಂದು ಸದಾಶಿವ ಶೆಟ್ಟಿ ನಿರ್ಧಾರ
ಮಂಗಳೂರು: ದಾನ ಧರ್ಮ ಕಾಯಕಗಳಿಂದ ಕಲಿಯುಗ ಕರ್ಣ ಎಂದೇ ಕರೆಯಲ್ಪಟ್ಟ ಕೊಡುಗೖ ದಾನಿ ಡಾ. ಕನ್ಯಾನ ಸದಾಶಿವ ಶೆಟ್ಟಿ ಅವರು ಸಮಾಜ ಸೇವಾ ದಾನ ಪ್ರವೃತ್ತಿಗೆ ವಿದಾಯ ಘೋಷಿಸಿದ್ದಾರೆ. ಜಾಗತಿಕ ಬಂಟರ ಸಂಘಕ್ಕೆ ಕೋಟ್ಯಾಂತರ ದಾನ ಮಾಡಿ ಬಳಿಕ ಲೆಕ್ಕ ಪತ್ರ ಕೇಳಿದನ್ನೇ ತಪ್ಪು ಎಂದು ಬಿಂಬಿಸಿ ತನ್ನ ತೇಜೋವಧೆ ನಡೆದಿದೆ ಎಂದು ಮನನೊಂದು ಈ ನಿರ್ಧಾರ ಕೖಗೊಂಡಿಯುವುದಾಗಿ ಮಂಗಳೂರಿನಲ್ಲವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಸಮಾಜಸೇವಾ ಕಾರ್ಯಗಳಿಗೆ ಅವರ ವಿದಾಯ ಘೋಷಣೆ ಕರಾವಳಿಯಲ್ಲಿ ಸಂಚಲನ ಮೂಡಿಸಿದೆ. ಜತೆಯಲ್ಲೇ ಜಾಗತಿಕ ಬಂಟರ ಸಂಘದಲ್ಲೂ ಅಪಸ್ವರ ಮೂಡಿಸಿದೆ.
ಕೋಲು ಕೊಟ್ಟು ಪೆಟ್ಟು ತಿನ್ನುವ ಪರಿಸ್ಥಿತಿ ಬಂದಿದೆ ಎಂದಿರುವ ಅವರು ದಾನ ಕೊಟ್ಟವರಿಗೆ ಲೆಕ್ಕ ಕೇಳುವ ಹಕ್ಕು ಇಲ್ಲವೇ ಎಂದು ಪ್ರಶ್ನಿಸಿದ್ದಾರೆ. ಕಳೆದ ಆರು ವರ್ಷಗಳಿಂದ ಕರಾವಳಿಯ ಧಾರ್ಮಿಕ, ಸಾಮಾಜಿಕ ರಂಗಕ್ಕೆ. ಕೋಟ್ಯಾಂತರ ರೂ ದಾನ ಮಾಡಿದ್ದ ತನಗದು ಆತ್ಮತೃಪ್ತಿ ನೀಡುತ್ತಿತ್ತು. ಆದರೆ ಜಾಗತಿಕ ಬಂಟರ ಸಂಘದ ಬೆಳವಣಿಗೆ ತನ್ನನ್ನ ಮಾನಸಿಕವಾಗಿ ಘಾಸಿ ಗೊಳಿಸಿದೆ ಎಂದಿದ್ದಾರೆ.
ತನ್ನ ವಿರುದ್ಧ ಮಾನಹಾನಿಕರ ಬರಹಗಳು ಜಾಲತಾಣದಲ್ಲಿ ಪ್ರಕಟವಾಗುತ್ತಿದ್ದು ಅದರ ವಿರುದ್ಧ ಕಾನೂನು ಕ್ರಮ ಕೖಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.








