ಕೇರಳದಲ್ಲಿನ್ನು ಹಳೆ ವಾಹನ ಖರೀದಿ, ಮಾರಾಟ ನಡೆಸುವ ‘ಯೂಸ್ಡ್ ವೆಹಿಕಲ್’ ಉದ್ಯಮಕ್ಕೆ ಕಾನೂನು ನಿಬಂಧನೆಯ ಲೈಸನ್ಸ್ ಕಡ್ಡಾಯ

by Narayan Chambaltimar
  • ವಾಹನ ಖರೀದಿ-ಮಾರಾಟದ ಸಮಗ್ರ ಮಾಹಿತಿ ಸಾರಿಗೆ ಇಲಾಖೆ ಅರಿತೇ ನಡೆಯಬೇಕು
  • ಯಾವುದೇ ಕಾನೂನು ನಿಬಂಧನೆ ಪಾಲಿಸದೇ ನಡೆಯುವ ಹಳೆ ವಾಹನಗಳ ಮಾರಾಟ ಜಾಲಕ್ಕೆ ಸರಕಾರ ಕಾನೂನು ಬದ್ಧ ನಿಯಂತ್ರಣ ಹೇರಲು ಮುಂದಾಗಿದೆ.

ಕಾಸರಗೋಡು: ಹಳೆಯ ವಾಹನಗಳನ್ನು ಖರೀದಿಸಿ, ಗ್ರಾಹಕರಿಗೆ ಮಾರಾಟ ಮಾಡುವ used vehicle ಶೋ ರೂಂ ಗಳಿಗೆ ಲೈಸನ್ಸ್ ಕಡ್ಡಾಯಗೊಳಿಸಲಾಗುತ್ತಿದೆ. ಇದರೊಂದಿಗೆ ಹಳೆಯ ವಾಹನ ಮಾರಾಟ, ಖರೀದಿ ಸಂಪೂರ್ಣವಾಗಿ ಸರಕಾರಿ ನಿಬಂಧನೆಗಳೊಂದಿಗೆ ನಡೆಯಬೇಕಾಗಿದೆ. ಜತೆಗೆ ಎಲ್ಲಾ ವ್ಯವಹಾರಗಳೂ ಸರಕಾರಿ ನಿರೀಕ್ಷಣೆಯಲ್ಲಿ ನಡೆಯಲಿದೆ.

ಯೂಸ್ಡ್ ಸೆಕೆಂಡ್ಸ್ ವಾಹನ ಮಾರಾಟ ಮಾಡುವವರು ತಮ್ಮ ಶೋರೂಂಗಳಲ್ಲಿ ಎಷ್ಟು ವಾಹನಗಳ ದಾಸ್ತಾನು ಇರಿಸಿದ್ದಾರೆ ಮತ್ತು ಎಷ್ಟು ವಾಹನಗಳನ್ನು ಮಾರಾಟ ಮಾಡಿದ್ದಾರೆಂಬ ವಿವರಗಳನ್ನು ಮೋಟಾರು ವಾಹನ ಇಲಾಖೆಗೆ ಮತ್ತು ಆದಾಯ ತೆರಿಗೆ ಇಲಾಖೆಗೆ ತಿಳಿಯುವಂತೆ ಪೂರಕವಾಗಿ ಲೖಸನ್ಸ್ ನೀಡಲಾಗುತ್ತಿದೆ.

ಕೇರಳದಲ್ಲಿ ಒಟ್ಟು ಸರಿಸುಮಾರು 10 ಸಾವಿರಕ್ಕೂ ಅಧಿಕ ಹಳೆ ವಾಹನ ಮಾರಾಟ ಸಂಸ್ಥೆಗಳಿವೆಯೆಂದು ಅಂದಾಜಿಸಲಾಗಿದೆ. ಆದರೆ ಕೇವರ 555 ಸಂಸ್ಥೆಗಳಷ್ಟೇ ಪ್ರಸ್ತುತ ಪರವಾನಿಗೆ ಹೊಂದಿರುತ್ತವೆ. ಅಧಿಕೃತವಾಗಿ ಪರವಾನಿಗೆ ಹೊಂದದೇ ಹಳೆಯ ವಾಹನ ಮಾರಾಟ ನಡೆದರೆ ಇನ್ನು ಮುಂದೆ ಅವಕ್ಕೆ ನೋಂದಣಿ ಲಭಿಸದೇ, ಕಪ್ಪುಪಟ್ಟಿಗೆ ಒಳಪಡಲಿದೆ. ಹೀಗಾದ ವಾಹನಗಳನ್ನು ಮಾರಾಟ ಮಾಡಲಿಕ್ಕಾಗಲೀ, ಕೖ ವಶ ಇರಿಸಿಕೊಳ್ಳಲಿಕ್ಕಾಗಲೀ ಸಾಧ್ಯವಿಲ್ಲ. ಇದು 2024ರಲ್ಲೇ ಚಾಲ್ತಿಗೆ ಬರಬೇಕಾಗಿದ್ದ ಕಾನೂನಾದರೂ, ಕೆಲವು ಪ್ರಭಾವಿಗಳ ಒತ್ತಡದಿಂದ ಕಾನೂನು ಪಾಲನೆ ಆಗಿರಲಿಲ್ಲ. ಇದೀಗ ವಿರೋಧಗಳನ್ನೆಲ್ಲಾ ಕಡೆಗಣಿಸಿ ಸಾರಿಗೆ ಇಲಾಖೆ ಕಾನೂನು ಅನುಷ್ಟಾನಕ್ಕೆ ಮುಂದಾಗಿದೆ.
ಹಳೆಯ ವಾಹನಗಳ ಮಾರಾಟದಲ್ಲಿ ಭಾರೀ ಪ್ರಮಾಣದ ಆರ್ಥಿಕ ಅವ್ಯವಹಾರ ಮತ್ತು ಜಿಎಸ್ ಟಿ ವಂಚನೆ ನಡೆಯುತ್ತಿದೆಯೆಂದು ಜಿ. ಎಸ್. ಟಿ ತನಿಖೆಯಲ್ಲಿ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಸಾರಿಗೆ ಇಲಾಖೆ ಮುಂದಾಗಿದೆ.

ಮಾರಾಟಕ್ಕಿರಿಸುವ ವಾಹನವನ್ನು ಖರೀದಿಸುವಾಗಲೇ ವಾಹನದ ಸಂಪೂರ್ಣ ಮಾಹಿತಿಯನ್ನು ವಾಹನ್ ವೆಬ್ಸೈಟ್ ನಲ್ಲಿ ನೋಂದಾಯಿಸಬೇಕು. ಈ ಮೂಲಕ ವಾಹನದ ತಾತ್ಕಾಲಿಕ ಓನರ್ ಶಿಪ್ ಯೂಸ್ಡ್ ವೆಹಿಕಲ್ ಸಂಸ್ಥೆ ನಡೆಸುವವರಿಗೆ ಲಭಿಸಲಿದೆ. ಬಳಿಕ ವಾಹನವನ್ನು ಗ್ರಾಹಕರು ಖರೀದಿಸುವಾಗ ಓನರ್ ಶಿಪ್ ಬದಲಾಯಿಸಿಕೊಡಲಾಗುತ್ತದೆ.

ಇದರಿಂದಾಗುವ ಪ್ರಯೋಜನ?

  • ವಾಹನದ ಓನರ್ ಶಿಪ್ ಹಸ್ತಾಂತರ ಖಚಿತವಾಗುತ್ತದೆ ಮತ್ತು ಸರಳವಾಗುತ್ತದೆ.
  • ವಾಹನ ಖರೀದಿಸುವ ಬಳಕೆದಾರರೊಂದಿಗೆ ಮಧ್ಯವರ್ತಿ ಹಸ್ತಕ್ಷೇಪಗಳಿಲ್ಲದ ಕಾನೂನು ಬದ್ಧ, ಮಾನದಂಡ ವಿಧೇಯ ವ್ಯವಹಾರ ನಡೆಯುತ್ತದೆ.
  • ಅಂತರಾಜ್ಯ ಮಟ್ಟದಲ್ಲಿ ನಡೆಯುವ ವಾಹನ ಕಳ್ಳತನ ದಂಧೆಯಲ್ಲಿ ಕದ್ದು ತಂದಿರಿಸಿ ನಡೆಯುವ ವಾಹನ ಮಾರಾಟ ತಡೆಯಲಾಗುತ್ತದೆ.
  • ಹಳೆ ವಾಹನಗಳ ಮಾರಾಟದ ಮರೆಯಲ್ಲಿ ನಡೆಯುವ ಕಾಳಧನ ವ್ಯವಹಾರಕ್ಕೆ ಬ್ರೇಕ್ ಹಾಕಲು ಸಾಧ್ಯ.

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00