ಕಾಸರಗೋಡು: 1ಲಕ್ಷ ಸ್ಕ್ವೇರ್ ಫೀಟಿನ ನಾಲ್ಕಂತಸ್ತಿನ ಬೃಹತ್ ಮಳಿಗೆಯಲ್ಲಿ ಶೋಭಿಕಾ ವೆಡ್ಡಿಂಗ್ಸ್ ಆರಂಭ

by Narayan Chambaltimar
  • ಜಾತ್ರೆಯಂತೆ ಹರಿದು ಬಂದ ಜನ ಸಾಗರದ ಸಂಭ್ರಮದಲ್ಲಿ ಶೋಭಿಕಾ ವೆಡ್ಡಿಂಗ್ಸ್ ಉದ್ಘಾಟನೆ

ಕಾಸರಗೋಡು ನಗರದ ಎಂ. ಜಿ. ರಸ್ತೆಯಲ್ಲಿ 1ಲಕ್ಷ ಸ್ಕ್ವೇರ್ ಫೀಟಿನ ನಾಲ್ಕಂತಸ್ತಿನ ಬೃಹತ್ ಮಳಿಗೆಯಲ್ಲಿ ಇಂದು ಅತ್ಯುತ್ತರ ಕೇರಳದ ಪ್ರಸಿದ್ಧ ಜವುಳಿ ಮಳಿಗೆ ಶೋಭಿಕಾ ವೆಡ್ಡಿಂಗ್ಸ್ ಕಾರ್ಯಾರಂಭಗೊಂಡಿತು. ಬೃಹತ್ ಜನಸಂದೋಹದ ಜಾತ್ರೆಯಂತಹಾ ವಾತಾವರಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಸಯ್ಯದ್ ಪಾಣಕ್ಕಾಡ್ ಮುನವ್ವರಾಲಿ ಶಿಹಾಬ್ ತಂಙಳ್ ಶೋಭಿಕಾ ವೆಡ್ಡಿಂಗ್ಸ್ ನ ಏಳನೇ ಶಾಖೆ ಉದ್ಘಾಟಿಸಿ ಶುಭ ಹಾರೖಸಿದರು.

ಸಂಸ್ಥೆಯ ಸ್ಥಾಪಕ, ನಿರ್ದೇಶಕ ಇಂಬಿಚ್ಚಿ ಅಹ್ಮದ್ ಪ್ರಾಸ್ತಾವಿಕ ಮಾತನಾಡಿ ಒಂದು ದಶಕದಲ್ಲಿ ಏಳು ಶಾಖೆ ಹೊಂದಿ ಸಾವಿರಾರು ನೌಕರರಿಗೆ ಉದ್ಯೋಗ ನೀಡಿರುವ ಸಂಸ್ಥೆ ಸಹಕಾರಿ ಪರಿಕಲ್ಪನೆಯಲ್ಲಿ ಬೆಳೆದು ಬಂತೆಂದು ಹೇಳಿದರು.
ಅನಿವಾಸಿ ಉದ್ಯಮಿ ಲತೀಫ್ ಉಪ್ಪಳ ಹಾಗೂ ಮಾಜಿ ಶಾಸಕ ಸಿ. ಟಿ. ಅಹ್ಮದಾಲಿ,
ಶಾಸಕರಾದ ಎನ್. ಎ. ನೆಲ್ಲಿಕುನ್ನ್, ಸಿ. ಎಚ್. ಕುಂಞಂಬು, ಇ. ಚಂದ್ರಶೇಖರನ್, ಕಾಸರಗೋಡು ನಗರಸಭಾಧ್ಯಕ್ಷೆ ಷಾಹಿನಾ ಸಲೀಂ, ಉಪಾಧ್ಯಕ್ಷ ಕೆ. ಎಂ. ಹನೀಫ, ಕೇರಳ ವ್ಯಾಪಾರಿ ವ್ಯವಸಾಯಿ ಸಮನ್ವಯ ಸಮಿತಿ ರಾಜ್ಯ ಉಪಾಧ್ಯಕ್ಷ ಕೆ. ಅಹ್ಮದ್ ಷೆರೀಫ್, ಬಿಜೆಪಿ ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ ಮೊದಲಾದವರು ಪಾಲ್ಗೊಂಡು ವಿವಿಧ ವಿಭಾಗಗಳನ್ನು ಉದ್ಘಾಟಿಸಿದರು.
ಒಂದು ಲಕ್ಷ ಚದರಡಿಯ ನಾಲ್ಕಂತಸ್ತಿನ ಆಧುನಿಕ ಮಾದರಿಯ ವಿಶಾಲ ಶೋರೂಂ ಕಾಸರಗೋಡಿನಲ್ಲಿ ತಲೆ ಎತ್ತುವುದು ಇದೇ ಮೊದಲ ಬಾರಿಯಾಗಿದೆ.

ಕಾಸರಗೋಡೆಂದರೆ ಅತ್ಯಾಧುನಿಕ ಫ್ಯಾಷನ್ ಬಯಸುವ ನಾಡು. ಜೊತೆಗೆ ಇದು ಬಹು ಸಂಸ್ಕೃತಿಯ ಆಚಾರ ವಿವಿಧತೆಯ ಭಾಷಾ ಸಂಸ್ಕೃತಿಗಳ ಸಂಗಮ ಭೂಮಿ. ಈ ಹಿನ್ನೆಲೆಯಲ್ಲಿ ಎಲ್ಲಾ ವರ್ಗದ ಜನರ ಆಶೋತ್ತರಕ್ಕೆ ತಕ್ಕಂತ ವಸ್ತ್ರ ವೖವಿಧ್ಯ ನಮ್ಮಲ್ಲಿದೆ. ಇನ್ನು ಕಾಸರಗೋಡಿನ ಸಾಂಸ್ಕೃತಿಕ ಶ್ರೀಮಂತಿಕೆಗೆ ಶೋಭಿಕಾ ನವಶೋಭೆ ನೀಡಲಿದೆ.
ಇರ್ಷಾದ್ 

ಆಡಳಿತ ನಿರ್ದೇಶಕರು, ಶೋಭಿಕಾ ವೆಡ್ಡಿಂಗ್ಸ್

ಒಂದು ಮದುವೆಗೆ ಬೇಕಾದ ಸಮಗ್ರ ಉಡುಪುಗಳು ಸಹಿತ ಪೂರಕವಾದ ಎಲ್ಲಾ ವಸ್ತುಗಳು ಒಂದೇ ಕಡೆ ದೊರೆಯುವುದು ಶೋಭಿಕಾ ವೆಡ್ಡಿಂಗ್ಸ್ ನ ವಿಶೇಷತೆಯಾಗಿದೆ.
ಉದ್ಘಾಟನಾ ದಿನದಂದು ನಾಡಿನ ನಾನಾ ಕಡೆಗಳಿಂದ ಜನಸಾಗರವೇ ಹರಿದುಬಂದಿದ್ದು, ಹಬ್ಬದ ಕಳೆ ಮೂಡಿಸಿತ್ತು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00