- ನಾಲ್ಕು ಅಂತಸ್ತಿನ ಬೃಹತ್ ಮಳಿಗೆಯಲ್ಲಿ ಅತ್ಯಾಧುನಿಕ ಉಡುಪು ಸಂಕಲ್ಪಗಳ ವಿನೂತನ ಸಂಸ್ಥೆ
ಕಾಸರಗೋಡು: ಕೇರಳದ ಜವುಳಿ ಉದ್ಯಮದಲ್ಲಿ ಜನಪ್ರಿಯತೆಯ ಪರಂಪರೆಯುಳ್ಳ ಪ್ರಸಿದ್ಧ ಶೋಭಿಕಾ ವೆಡ್ಡಿಂಗ್ಸ್ ನ ಏಳನೇ ಶಾಖೆ ಕಾಸರಗೋಡಿಗೆ ಕಾಲೂರುತ್ತಿದೆ. ನೂತನ ಶಾಖೆ ಫೆ. 7ರಂದು (ನಾಳೆ) ಬೆಳಿಗ್ಗೆ 10.30ಕ್ಕೆ ನಗರದ ಎಂ. ಜಿ. ರೋಡಿನಲ್ಲಿ ಸಯ್ಯದ್ ಪಾಣಕ್ಕಾಡ್ ಮುನವ್ವರಾಲಿ ಶಿಹಾಬ್ ತಂಙಳ್ ಉದ್ಘಾಟನೆ ನೆರವೇರಿಸುವರು.

ಸಂಸದ ರಾಜಮೋಹನ್ ಉಣ್ಣಿತಾನ್, ಶಾಸಕರಾದ ಎನ್. ಎ. ನೆಲ್ಲಿಕುನ್ನ್, ಸಿ. ಎಚ್. ಕುಂಞಂಬು, ಎ. ಕೆ. ಎಂ. ಅಶ್ರಫ್, ಎಂ. ರಾಜಗೋಪಾಲನ್, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಕರ್ನಾಟಕ ವಿಧಾನಸಭಾಧ್ಯಕ್ಷ ಯು. ಟಿ. ಖಾದರ್, ಕಾಸರಗೋಡು ನಗರಸಭಾಧ್ಯಕ್ಷೇ ಷಾಹಿನ ಸಲೀಂ, ಉಪಾಧ್ಯಕ್ಷ ಕೆ. ಎಂ. ಹನೀಫ, ವಾರ್ಡು ಸದಸ್ಯ ರಾಜೇಶ್ ಅಮೖ, ಕೇರಳ ವ್ಯಾಪಾರಿ ವ್ಯವಸಾಯಿ ಸಮನ್ವಯ ಸಮಿತಿ ರಾಜ್ಯ ಉಪಾಧ್ಯಕ್ಷ ಕೆ. ಅಹ್ಮದ್ ಷೆರೀಫ್ ಪಾಲ್ಗೊಳ್ಳುವರು.
1ಲಕ್ಷ ಚದರಡಿಯ ನಾಲ್ಕು ಮಹಡಿಗಳುಳ್ಳ ವಿಶಾಲ ಶೋರೂಂ ಇದಾಗಿದ್ದು, ಕಾಸರಗೋಡಿನ ಸಾಂಪ್ರದಾಯಿಕ ಉಡುಪುಗಳೊಂದಿಗೆ ಆಧುನಿಕ ಟ್ರೆಂಡಿಂಗ್ ನ ವಿಫುಲವಾದ ಉಡುಪುಗಳ ಶೇಖರಣೆ ಇಲ್ಲಿದೆ.
ಬ್ರೖಡಲ್ ಝೋನ್, ಲೆಹಂಗ, ವೖವಿಧ್ಯ ಸೀರೆಗಳು, ಮೆನ್ಸ್ ವೆಡ್ಡಿಂಗ್, ಸಲ್ವಾರ್, ಪಾರ್ಟಿ ವೇರ್, ಮೆನ್ಸ್ ವೇರ್, ಲೇಡೀಸ್ ವೇರ್, ಕಿಡ್ಸ್ ಏಂಡ್ ನ್ಯೂ ಬೋರ್ನ್, ಫುಟ್ವೇರ್, ಫ್ಯಾನ್ಸಿ, ಹೋಮಾ ಡೆಕೋರ್, ವಾಚ್ ಗಳು, ಸುಗಂಧ ದ್ರವ್ಯ ಸೇರಿದಂತೆ ಎಲ್ಲಾ ರೀತಿಯ ಉಡುಪುಗಳ ಅತ್ಯಪಾರ ಸಂಗ್ರಹ ಇಲ್ಲಿದೆ.
ಗ್ರಾಹಕರಿಗೆ ಸೌಕರ್ಯಪ್ರದವಾಗಿ ಮನದಿಚ್ಛೆಯಂತೆ ಉಡುಪುಗಳನ್ನು ಖರೀದಿಸುವ ಸೌಕರ್ಯ ಒದಗಿಸಲಾಗಿದೆ.
ಉದ್ಘಾಟನಾ ದಿನದಂದು ಪ್ರತ್ಯೇಕ ಅದೃಷ್ಟ ಚೀಟಿ ಆಯ್ಕೆ ನಡೆಯಲಿದ್ದು, ಅದೃಷ್ಟ ಶಾಲಿಗಳಿಗೆ ತಲಾ 25ಸಾವಿರದಂತೆ ನಾಲ್ವರಿಗೆ, ದ್ವಿತೀಯ ಬಹುಮಾನ ಡಯಮೆಂಡ್ ನೆಕ್ಲೇಸ್ ಲಭಿಸಲಿದೆ. ಉಧ್ಘಾಟನೆಯಂಗವಾಗಿ ಸಂಜೆ 6ರಿಂದ ಅಕ್ಬರ್ ಖಾನ್ ಮತ್ತು ತಂಡದ ಮ್ಯೂಸಿಕ್ ನೖಟ್ ಜರಗಲಿದೆ ಎಂದು ಶೋಭಿಕಾ ನಿರ್ದೇಶಕರು ತಿಳಿಸಿದ್ದಾರೆ.








