9.1K
ಮಂಜೇಶ್ವರ: ಮಂಜೇಶ್ವರ ಚೆಕ್ ಪೋಸ್ಟ್ ನಲ್ಲಿ ನಡೆಸಲಾದ ವಾಹನ ತಪಾಸಣೆಯಲ್ಲಿ ಸೂಕ್ತ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ
30ಲಕ್ಷ ರೂಗಳನ್ನು ಅಬಕಾರಿ ಅಧಿಕೃತರು ವಶಪಡಿಸಿದ್ದಾರೆ.
ಕೆಎಸ್ಸಾರ್ಟೀಸಿ ಬಸ್ಸಿನಲ್ಲಿ ಮಂಗಳೂರಿನಿಂದ ಕಾಸರಗೋಡು ಕಡೆಗೆ ಕಾಳಧನ ಸಾಗಿಸಲಾಗಿತ್ತು. ಈ ಸಂಬಂಧ ಕೇರಳದ ಪೆರಿಂದಲ್ ಮಣ್ಣ್ ತಾಲೂಕಿನ
ವಡಕ್ಕಾಂಗರ ಎರುಂಬತ್ತ್ ವೀಟಿಲ್ ಹಂಝ(64) ಎಂಬಾತನನ್ನು ಬಂಧಿಸಲಾಗಿದೆ.ಬಂಧಿತ ಆರೋಪಿ ಹಾಗೂ ವಶ ಪಡಿಸಿದ ಕಾಳಧನವನ್ನು ಮಂಜೇಶ್ವರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಅಬಕಾರಿ ದಳ ತಿಳಿಸಿದೆ.ಗುರುವಾರ ಬೆಳಿಗ್ಗೆ ಮಂಜೇಶ್ವರ ಚೆಕ್ ಪೋಸ್ಟಿನಲ್ಲಿ ಕಾರ್ಯಾಚರಣೆ ನಡೆಯಿತು.
ಕಾಳಧನಕ್ಕೆ ಸಂಬಂಧಿಸಿ ಸೂಕ್ತ ಮಾಹಿತಿ ದೊರೆತಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಂಗಳೂರು-ಕಾಸರಗೋಡು ರೂಟಲ್ಲಿ ಬಸ್ ಮೂಲಕ ಕಾಳಧನ ಸಾಗಾಟ ನಡೆಯುತ್ತಿರುವುದು ವ್ಯಾಪಕವಾಗಿದೆ. ಅಬಕಾರಿ ದಳ ಚೆಕ್ ಪೋಸ್ಟ್ ನಲ್ಲಿ ನಡೆಸುವ ಸಹಜ ತಪಾಸಣೆಯಲ್ಲಿ ಲಕ್ಷಾಂತರ ರೂಗಳ ಸಹಿತ ಹಲವರ ಬಂಧನವಾಗಿದೆ.









