10.6K
- ಮಂಜೇಶ್ವರದ ಸೊಸೆ ಮುಂಬಯಿ ಮನಪಾ ಸದಸ್ಯೆ.

ಮಂಜೇಶ್ವರ: ಮುಂಬಯಿ ಕಾಂದಿವಲಿ ಪೂರ್ವ ಠಾಕೂರ್ ವಿಲೇಜ್ 25 ನೇ ವಾರ್ಡನಿಂದ ಮರಾಠಿ ಚಲನಚಿತ್ರ ಹಾಗೂ ಕಿರುತೆರೆ ನಟಿ ನಿಶಾ ಪರುಳೇಕರ್ – ಬಂಗೇರ ಅವರು ಬಿಜೆಪಿ ಪಕ್ಷದಿಂದ ಮುಂಬಯಿಯ ಮಹಾನಗರ ಪಾಲಿಕೆಗೆ ಆಯ್ಕೆಯಾಗಿದ್ದಾರೆ. ತನ್ನ ಪ್ರತಿಸ್ಪರ್ಧಿ ಶಿವಸೇನೆಯ ಯೋಗೇಶ್ ಬೋಹಿರ್ ಅವರನ್ನು 5100 ಮತಗಳ ಅಂತರದಿಂದ ಸೋಲಿಸಿದ್ದಾರೆ. ಚಲನಚಿತ್ರ, ಕಿರುತೆರೆ ನಟಿಯಾಗಿ ಖ್ಯಾತಿ ಪಡೆದಿರುವ ಇವರು ಕಳೆದ ದಶಕದಿಂದ ರಾಜಕೀಯದಲ್ಲಿ ಕ್ರೀಯಾಶೀಲರಾಗಿದ್ದು, ಸಮಾಜ ಸೇವೆಯಲ್ಲಿ ತೊಡಗಿದ್ದು ಜನಪ್ರಿಯರಾಗಿದ್ದಾರೆ. ಇವರು ಮಂಜೇಶ್ವರ ಮೂಲದ ಮುಂಬಯಿಯ ಉದ್ಯಮಿ ತೀಯಾ ಸಮುದಾಯದವರಾದ ಸುರೇಶ್ ಬಂಗೇರ ಇವರ ಪತ್ನಿ., ಮಗಳು ಮಯೂರಿ ಸುರೇಶ್ ಬಂಗೇರ ಅವರು ಕೂಡಾ ಸಕ್ರಿಯ ರಾಜಕೀಯದಲ್ಲಿದ್ದಾರೆ.








