ಕಾಸರಗೋಡು: ಸರ್ವೇ ಆಫೀಸಿನ ನೌಕರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ

by Narayan Chambaltimar

ಕಾಸರಗೋಡು: ಕಾಸರಗೋಡು ಜಿಲ್ಲಾಧಿಕಾರಿ ಕಛೇರಿಯ ಸರ್ವೇ ಆಫೀಸಿನ ನೌಕರ ತನ್ನ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ನಡೆಸಿದ ಘಟನೆ ನಡೆದಿದೆ.
ಕಣ್ಣೂರು ಮುಯ್ಯಂ ಚೆಪ್ಪಿನ್ನೂರು ನಿವಾಸಿ ಎಂ. ಪಿ. ಜಯೇಶ್ (45) ಮೃತ ವ್ಯಕ್ತಿಯಾಗಿದ್ದಾರೆ. ಇವರು ಕಾಸರಗೋಡು ಸರ್ವೇ ಕಛೇರಿಯಲ್ಲಿ ಪ್ರಥಮ ದರ್ಜೆ ಡ್ರಾಫ್ಟ್ಸ್ ಮೇನ್ ಹುದ್ದೆ ನಿರ್ವಹಿಸುತ್ತಿದ್ದರು.

ಶನಿವಾರ ಬೆಳಿಗ್ಗೆ ತನ್ನ ಮನೆಯಲ್ಲಿವರು ಆತ್ಮಹತ್ಯೆ ನಡೆಸಿದ್ದರು. ತನ್ನ ಸಹೋದರಿಯ ಪತಿ ಇತ್ತೀಚೆಗೆ ಮೃತಪಟ್ಟ ಹಿನ್ನೆಲೆಯಲ್ಲಿ ತಾಯಿ ಸಹೋದರಿ ಮನೆಗೆ ತೆರಳಿದ್ದರು. ಮನೆಯಲ್ಲಿ ಇವರೊಬ್ಬರೇ ಇದ್ದಾಗ ಈ ಕೃತ್ಯ ಎಸಗಿದ್ದರು. ಶನಿವಾರ ಮನೆಯಲ್ಲಿ ಸಾರ್ವಜನಿಕ ದರ್ಶನ ನಡೆದ ಬಳಿಕ ಆದಿತ್ಯವಾರ ಬೆಳಿಗ್ಗೆ ಶವ ಸಂಸ್ಕಾರ ನಡೆಯಿತು.

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00