- ಡಾ. ನರಹರಿ ಅವರ ಸಂಯೋಜಿತ ಚಿಕಿತ್ಸಾ ಕ್ರಾಂತಿಯ ಕೃತಿ ಇಂಗ್ಲೀಷಿಗೆ ಅನುವಾದಗೊಂಡು ಜಗತ್ತಿಗೆ ಮುಟ್ಟಬೇಕು: ಡಾ. ಗುರುಪ್ರಸಾದ್ ಐತಾಳ್
ಕಾಸರಗೋಡು: ಆನೆಕಾಲು ರೋಗಕ್ಕೆ ತುತ್ತಾದವರ, ಲೈಂಗಿಕ ಕಾರ್ಯಕರ್ತೆಯರ, ಅಲೆಮಾರಿ ಮಕ್ಕಳ ಬದುಕಿಗೆ ಬೆಳಕಾದ ಡಾ. ನರಹರಿ ಅವರ ಮಾನವೀಯ ಕಾಳಜಿ ,ಸಾಮಾಜಿಕ ಸೇವೆ ಅನುಪಮವಾದದ್ದು ,ಸ್ತುತ್ಯರ್ಹ
ವಾದದ್ದು ಎಂದು ಇಂಗ್ಲೆಂಡಿನ ನಾಟಿಂಗ್ ಹ್ಯಾಂ ವಿಶ್ವವಿದ್ಯಾಲಯದ ಹೆಪಟಾಲಜಿ ವಿಭಾಗದ ಪ್ರೊಫೆಸರ್ ಡಾ.ಗುರುಪ್ರಸಾದ ಐತಾಳ್ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಕಾಸರಗೋಡಿನ ಐಎಂಎ ಹಾಲಿನಲ್ಲಿ ನಡೆದ ಆನೆಕಾಲಿಗೆ ಅಂಕುಶ ,ಸಂಯೋಜಿತ ಚಿಕಿತ್ಸೆಯ ಹರಿಕಾರ ಡಾ.ನರಹರಿ ಮತ್ತು ಐಎಡಿ ಎಂಬ ಕೃತಿಯ ಕುರಿತು ನಡೆದ ಸಂವಾದ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಡಾ .ನರಹರಿ ಮತ್ತು ಐ ಎ ಡಿ ಕೃತಿಯು ಇಂಗ್ಲೀಷ್, ಹಿಂದಿ ಸೇರಿದಂತೆ ಇತರ ಭಾಷೆಗಳಿಗೆ ಭಾಷಾಂತರಗೊಂಡು ಡಾ.ನರಹರಿಯವರು ಕಾಸರಗೋಡಿನಲ್ಲಿ ಮಾಡಿದ ಈ ಕ್ರಾಂತಿ ವಿಶ್ವಕ್ಕೆ ತಿಳಿಯುವಂತಾಗಬೇಕು ಎಂದು ಅವರು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಕವಿ ,ಪತ್ರಕರ್ತ ರಾಧಾಕೃಷ್ಣ ಕೆ .ಉಳಿಯತ್ತಡ್ಕ,ಡಾ. ಶ್ರೀಪತಿ ಕಜಂಪಾಡಿ, ಪ್ರಾಧ್ಯಾಪಕ ಡಾ. ಧನಂಜಯ ಕುಂಬಳೆ, ಕಥೆಗಾರ್ತಿ ಸ್ನೇಹಲತಾ ದಿವಾಕರ, ತಾಳಮದ್ದಳೆ ಅರ್ಥಧಾರಿ ಜಬ್ಬಾರ್ ಸಮೋ ಸಂಪಾಜೆ, ಪತ್ರಕರ್ತ ವಿ.ಜಿ ಕಾಸರಗೋಡು, ಗಣೇಶ್ ಭಟ್ ವಾರಣಾಸಿ ,ಬ್ರಿಜೇಶ್ ಕಾಸರಗೋಡು ಮಾತನಾಡಿದರು.
ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯಾಧ್ಯಕ್ಷ ಪ್ರೊ .ಪಿ .ಎನ್ ಮೂಡಿತ್ತಾಯ, ಗಮಕ ಕಲಾ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ತೆಕ್ಕೇಕೆರೆ ಶಂಕರನಾರಾಯಣ ಭಟ್ ,ಶ್ರದ್ಧಾ ನಾಯರ್ಪಳ್ಳ,ಶಂಪಾ ಪ್ರತಿಷ್ಠಾನ ಬೆಂಗಳೂರು ಅಧ್ಯಕ್ಷೆ ಡಾ. ಪ್ರಮೀಳಾ ಮಾಧವ ,ಡಾ.ಕೆ. ಎಸ್ ಪ್ರಸನ್ನ ನರಹರಿ ,ಜಯನಾರಾಯಣ ತಾಯನ್ನೂರು, ಡಾ.ಗುರುಪ್ರಸಾದ ಅಗ್ಗಿತ್ತಾಯ,ಕೆ.ಜಯಲಕ್ಷ್ಮೀ ಕಾರಂತ, ವಿಜಯಲಕ್ಷ್ಮಿ ಶಾನುಭೋಗ್ ,ಪೆರ್ಮುಖ ಈಶ್ವರ ಭಟ್ ,ಶಶಿಕಲಾ .ಎಂ, ಗಣೇಶ್ ಪ್ರಸಾದ್ ಪಾಣೂರು, ಕೆ .ಸುಬ್ಬಣ್ಣ ಶೆಟ್ಟಿ,ಡಾ. ಬಾಲಕೃಷ್ಣ ಹೊಸಂಗಡಿ, ಸೌಮ್ಯ ಪ್ರವೀಣ ಮೊದಲಾದವರು ಸಂವಾದದಲ್ಲಿ ಪಾಲ್ಗೊಂಡರು.
ಮುಖ್ಯ ಅತಿಥಿ ಡಾ.ಗುರುಪ್ರಸಾದ್ ಐತಾಳ್, ಕೃತಿಗಾರ್ತಿ ಡಾ .ಯು .ಮಹೇಶ್ವರಿ,ಡಾ.ನರಹರಿ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ವತಿಯಿಂದ ಶಾಲುಹೊದೆಸಿ ಸನ್ಮಾನಿಸಲಾಯಿತು .
ರಚನಾ ಫಡ್ಕೆ ಪ್ರಾರ್ಥನೆ ಹಾಡಿದರು. ಕ.ಸಾ.ಪ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿದರು. ಸಾಹಿತಿ, ಪ್ರಾಧ್ಯಾಪಕ ಡಾ .ರಾಧಾಕೃಷ್ಣ ಬೆಳ್ಳೂರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.











