235
ಉಪ್ಪಳ: ಕೇರಳದ ತಲಶ್ಶೇರಿಯ ಆಝಿಕ್ಕೋಡನ್ ಸ್ಮಾರಕ ವಾಚನಾಲಯ ಆಯೋಜಿಸಿದ ಅಖಿಲ ಭಾರತೀಯ ಮಟ್ಟದ ಮಹಿಳಾ ಕಬಡಿ ಟೂರ್ನಿಯಲ್ಲಿ ಕುಬಣೂರು ಯೂತ್ ಕೌನ್ಸಿಲ್ ಪ್ರಥಮ ಬಹುಮಾನದ ಟ್ರೋಫಿ ಎತ್ತಿಕೊಂಡಿದೆ.
ತಲಶ್ಶೇರಿಯ ಕುಂಞಾಲಿ ಸ್ಮಾರಕ ಮೖದಾನದಲ್ಲಿ ನಡೆದ ಪಂದ್ಯಾಟದಲ್ಲಿ ಬದ್ರುದ್ದೀನ್ ಎಂ. ಕೆ. ನೇತೃತ್ವದ ಕುಬಣೂರು ಯೂತ್ ಕೌನ್ಸಿಲ್ 10 ಸಾವಿರ ರೂ ನಗದು ಸಹಿತವಾದ ಪ್ರಥಮ ಬಹುಮಾನದ ಟ್ರೋಫಿ ತನ್ನದಾಗಿಸಿತು.
ಕುಬಣೂರು ಯೂತ್ ಕೌನ್ಸಿಲ್ ಪರವಾಗಿ ಕೋಯಿಕ್ಕೋಡ್ ನ ಯುವ ಕಬಡಿ ತಾರೆಗಳು ಆಟವಾಡಿದರು. ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಈ ತಂಡ ನಿರಂತರ ಬಹುಮಾನಗಳನ್ನು ಪಡೆಯುತ್ತಾ ಬಂದಿದೆ.










