ಬದಿಯಡ್ಕ: ಕುಂಬ್ಡಾಜೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಮಹಿಳೆಯ ಕೊಲೆ- ಆರೋಪಿ ಸೆರೆ

by Narayan Chambaltimar

ಕೊರಳಲ್ಲಿದ್ದ 4ಪವನ್ ತೂಕದ ಕರಿಮಣಿ ಸರ ಅಪಹರಣಕ್ಕೆ ಉಸಿರುಗಟ್ಟಿಸಿ ಕೊಲೆ

ಬದಿಯಡ್ಕ: ಇಲ್ಲಿನ ಕುಂಬ್ಡಾಜೆ ಪಂಚಾಯತಿನ ಮವ್ವಾರು ಆಜಿಲ ಎಂಬಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ವೖದ್ಧ ಮಹಿಳೆಯ ಸಾವು ಕೊಲೆಯೆಂದು ಮರಣೋತ್ತರ ಪರೀಕ್ಷಾ ವರದಿ ಬಂದ ಬೆನ್ನಲ್ಲೇ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಆಜಿಲ ನಿವಾಸಿ ಪುಷ್ಪಲತಾ ವಿ. ಶೆಟ್ಟಿ (65) ಗುರುವಾರ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಿಗಿದ್ದು, ಇವರ ಮುಖದಲ್ಲಿ ಉಗುರಿನಿಂದ ಪರಚಿದ ಗಿಯಗಳಿತ್ತು. ಅಲ್ಲದೇ ಮಹಿಳೆಯನ್ನು ಕತ್ತು ಹಿಡಿದು ಉಸಿರುಗಟ್ಟಿಸಿ ಕೊಲೆ ನಡೆಸಲಾಗಿದೆ ಎಂದು ಮರಣೋತ್ತರ ಪರೀಕ್ಷಾ ವರದಿ ಸೂಚಿಸಿತ್ತು. ಈ ಸಂಬಂಧ ಬದಿಯಡ್ಕ ಪೊಲೀಸರು ತನಿಖೆ ನಡೆಸಿ ಪೆರಡಾಲ ನಿವಾಸಿ ಪರಮೇಶ್ವರ ಯಾನೆ ರಮೇಶ (47) ಎಂಬಾತನನ್ನು ಬಂಧಿಸಿದ್ದಾರೆ.

ಮೃತ ಮಹಿಳೆಯ ಕೊರಳಲ್ಲಿದ್ದ ನಾಲ್ಕು ಪವನ್ ತೂಕದ ಚಿನ್ನದ ಕರಿಮಣಿ ಸರ ಅಪಹರಿಸಲು ಕೊಲೆ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮಧ್ಯರಾತ್ರಿ ಒಂಟಿ ಮಹಿಳೆಯ ಮನೆಗೆ ನುಗ್ಗಿ ಕರಿಮಣಿ ಅಪಹರಿಸುವ ಯತ್ನ ನಡೆದಾಗ ಮಹಿಳೆ ಪ್ರತಿರೋಧಿಸಿದ್ದು ಈ ವೇಳೆ ನಡೆದ ಕೊಸರಾಟದ ಗುರುತು ಮನೆಯಿಂದ ಪತ್ತೆಯಾಗಿತ್ತು.

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00