ಕೇರಳ ರಾಜ್ಯ ಕಲೋತ್ಸವ: ಕನ್ನಡ ನುಡಿ ತೇರನ್ನೇರಿ ವಿಜಯಧ್ವಜ ಹಾರಿಸಿದ ಪೖವಳಿಕೆಯ ಖದೀಜಾಸಫಾ

by Narayan Chambaltimar
  • ರಾಷ್ಟ್ರಕವಿ ಗೋವಿಂದ ಪೖಗಳ ನಾಡಿಗೆ ಕನ್ನಡ ವಾಙ್ಮಯದಲ್ಲಿ ರಾಜ್ಯ ಮಟ್ಟದ ಅಂಗೀಕಾರ

ಕುಂಬಳೆ: ಕೇರಳದ ಸಾಂಸ್ಕೃತಿಕ ರಾಜಧಾನಿ ತ್ರಿಶ್ಶೂರಿನಲ್ಲಿ ನಡೆದ 63ನೇ ರಾಜ್ಯ ಮಟ್ಟದ ಶಾಲಾ ಕಲೋತ್ಸವದಲ್ಲಿ ಕಾಸರಗೋಡಿನ ಮಂಜೇಶ್ವರ ಉಪಜಿಲ್ಲೆಯ ಧರ್ಮತ್ತಡ್ಕ ಪ್ರೌಢ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಖದೀಜಾ ಸಫಾ ಕನ್ನಡದ ವಿಜಯಧ್ವಜ ಹಾರಿಸಿ ರಾಜ್ಯ ಮಟ್ಟದ ಅಗ್ರಶ್ರೇಣಿಯಾದ ಎಗ್ರೇಡ್ ಪಡೆದು ಗಡಿನಾಡಿಗೆ ಅಭಿಮಾನವಾಗಿದ್ದಾಳೆ.

ಶಾಲಾ ವಿದ್ಯಾರ್ಥಿಗಳೇ ಆದರೂ ಸ್ಪರ್ಧೆ ಪ್ರೌಢ ಮತ್ತು ಗಾಂಭೀರ್ಯವನ್ನು ಪಡೆದಿರುತ್ತದೆ. ನಿನ್ನೆ ‘ತುಂಬೆ ಹೂ’ ಹೆಸರಿನ ವೇದಿಕೆಯಲ್ಲಿ ನಡೆದ ಸ್ಪರ್ಧೆಯಲ್ಲಿ ರಾಜ್ಯದ 14 ಜಿಲ್ಲೆಗಳಿಂದ ಪಾಲ್ಗೊಂಡ 14 ಮಂದಿ ಸ್ಪರ್ಧಾಳುಗಳಿದ್ದರು. ಇವರಿಗೆ ಸ್ಪರ್ಧೆಗಿಂದ ಐದು ಮಿನಿಟು ಮುಂಚಿತ ವಿಷಯ ನೀಡಲಾಗುತ್ತದೆ. ಈ ಬಾರಿಯ ವಿಷಯ “ಶಿಕ್ಷಣದಲ್ಲಿ ಆಧುನಿಕ ಟೆಕ್ನಾಲಜಿ” ಎಂಬುದು.
ಸ್ವಾರಸ್ಯ ಎಂದರೆ ಕೇರಳದ 14ಮಂದಿ ಕನ್ನಡ ಭಾಷಣ ಸ್ಪರ್ಧಾಳುಗಳೆಲ್ಲರೂ ಮೂಲತಃ ಮಲಯಾಳಿ ಮನೆಮಾತಿನವರೇ! ಆದರೆ ಈ ಪೖಕಿ 11ಮಂದಿಯ ಕನ್ನಡಕ್ಕೂ ಬೆಂಗಳೂರಿನ ನಂಟಿದೆ. ಕೆಲವರು ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಕೇರಳಕ್ಕೆ ಬಂದವರಾದರೆ ಇನ್ನುಳಿದವರು ನಾನಾ ರೀತಿಯ ಕನ್ನಡ ನಂಟಿನವರು.
ಇವರೆಲ್ಲರ ಸಾಲಲ್ಲಿ ಮಂಜೇಶ್ವರ ಗೋವಿಂದ ಪೖಗಳ ನೆಲದಿಂದ ತೆರಳಿದ ವಿದ್ಯಾರ್ಥಿನಿ ಕು. ಖದೀಜಾ ಸಫಾ ಅರಳು ಹುರಿದಂತೆ ಕನ್ನಡದ ಚೆಲುನುಡಿಯಿಂದ ವೇದಿಕೆಯಲ್ಲಿ ಮಿಂಚಿದಳು. ಮಲಯಾಳಂ ಮಾಧ್ಯಮಗಳ ಮನಕದ್ದಳು. ಕಲೋತ್ಸವದಲ್ಲಿ ಕನ್ನಡದ ಚೆಲುನುಡಿಯೂ ವಿಶೇಷ ಸುದ್ದಿಯಾಯಿತು.
ಈಕೆ ಪೖವಳಿಕೆ ನಿವಾಸಿ ಕನ್ನಡ ಅಧ್ಯಾಪಕಿ ತಾಹಿರಾ ಟೀಚರ್-ಪೖವಳಿಕೆಯ ಸಾಮಾಜಿಕ ಕಾರ್ಯಕರ್ತ ಅಶ್ರಫ್ ಸೋಕೆ ದಂಪತಿಯ
ಪುತ್ರಿ. ಸಾಹಿತ್ಯ ಸಾಂಸ್ಕೃತಿಕ ಆಸಕ್ತಿಯ ಸೃಜನಶೀಲ ಪ್ರತಿಭೆಯಾದ ಈಕೆ ದ. ಕ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ ಗೌರವ ಪಡೆದವಳು.

ನಾನು ಮಂಜೇಶ್ವರ ದ ಮೂಲಕ ಕಾಸರಗೋಡು ಜಿಲ್ಲೆಯನ್ನು ಸ್ಪರ್ಧೆಯಲ್ಲಿ ಪ್ರತಿನಿಧಿಸಿದ್ದೆ. ನಾನು ಕನ್ನಡ ಮಾಧ್ಯಮದಲ್ಲಿ ಕಲಿಯುವ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೖ ಗಳ ನಾಡಿನವಳು. ಈ ಊರಿಗೆ ಕೇರಳ ರಾಜ್ಯ ಮಟ್ಟದ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿ ತರಲು ಸಾಧ್ಯವಾದುದಕ್ಕೆ ಅಭಿಮಾನ, ಸಂತೋಷ ಎರಡೂ ಇದೆ. ಭಾಷೆಯನ್ನು ಸೊಗಸಾಗಿ ಬಳಸಿದರೆ ಎಲ್ಲ ಭಾಷೆಗೂ ಸೌಂದರ್ಯವಿದೆ..
-ಕು ಖದೀಜಾ ಸಫಾ
ಧರ್ಮತ್ತಡ್ಕ ಎಸ್. ಡಿ. ಎಚ್. ಎಸ್. ಎಸ್. ಶಾಲಾ ವಿದ್ಯಾರ್ಥಿನಿ

ಶಾಲಾ ಕಲೋತ್ಸವಕ್ಕೆ ಕುಟುಂಬ ಸಹಿತ ಹೋದಾಗ ಪ್ರತಿಭೆ ಖದೀಜಾ ಸಫಾ ಳ ತಾಯಿ ತಾಹಿರಾ ಟೀಚರ್ ಅವರಿಗೂ ದೃಶ್ಯವಾಹಿನಿ ಮೖಕ್ ಒಡ್ಡಿತು. ಆಗವರು ಮುಖ್ಯಮಂತ್ರಿಗಳ ಗಮನಕ್ಕೆ ತರಲು “ರಾಜ್ಯ ಮಟ್ಟದ ಕಲೋತ್ಸವದಲ್ಲಿ ಕನ್ನಡ ಕವಿತಾ ರಚನೆಯಂಥ ಭಾಷಿಕ ಸ್ಪರ್ಧೆಗಳಿಗೆ ಅವಕಾಶ ನೀಡಬೇಕು. ಪ್ರೌಢ ಶಿಕ್ಷಣ ವಿಭಾಗದಲ್ಲಿ ಕನ್ನಡಕ್ಕೆ ರಾಜ್ಯ ಮಟ್ಟದ ಸ್ಪರ್ಧಾವಕಾಶ ಇಲ್ಲದಿರುವುದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದರು. ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕರು ತೀರ್ಪು ನೀಡಿದರು.
ವಿಜೇತ ವಿದ್ಯಾರ್ಥಿನಿ ಖದೀಜಾ ಸಫಾಳನ್ನು ಅಭಿನಂಧಿಸಿ ಕಂದಾಯ ಸಚಿವ ಕೆ. ರಾಜನ್ ಬಹುಮಾನ ವಿತರಿಸಿದರು

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00