ಕುಂಬಳೆ: ರಾ. ಹೆದ್ದಾರಿಯ ಕುಂಬಳೆ ಟೋಲ್ ಪ್ಲಾಝಾ ವಿರೋಧಿಸಿ ಕ್ರಿಯಾ ಸಮಿತಿ ನೀಡಿದ ಹೖಕೋರ್ಟಿಗೆ ಸಲ್ಲಿಸಿದ
ರಿಟ್ ಅರ್ಜಿಯ ಅಂತಿಮ ವಾದ ಆಲಿಸುವಿಕೆ ಮತ್ತು ತೀರ್ಪನ್ನು ಜನವರಿ 21ಕ್ಕೆ ಮುಂದೂಡಲಾಗಿದೆ. ನಿನ್ನೃ ಸಂಜೆ 5.30ಕ್ಕೆ ಅರ್ಜಿಯನ್ನು ಪರಿಗಣಿಸಲಾಗಿತ್ತು. ಆದರೆ ಸಮಯ ವಿಳಂಬ ಕಾರಣ ಕೇಸನ್ನು 21ರಂದು ಪರಿಗಣಿಸಲು ನಿರ್ಧರಿಸಲಾಯಿತು.
ಕುಂಬಳೆ ಟೋಲ್ ಪ್ಲಾಝ ನಿರ್ಮಾಣ ಕಾಮಗಾರಿಯನ್ನು
ಹೖಕೋರ್ಟಿನ ಏಕಸದಸ್ಯಪೀಠ ಮಧ್ಯಂತರ ಆದೇಶದ ಮೂಲಕ ತಡೆಯಾಜ್ಞೆ ನೀಡಿ ತಡೆದಿತ್ತು. ಬಳಿಕ ಅಂತಿಮ ತೀರ್ಪು ಪ್ರಕಟವಾದಾಗ ರಾ. ಹೆದ್ದಾರಿ ಇಲಾಖೆಗೆ ಟೋಲ್ ಪ್ಲಾಝ ಕಾಮಗಾರಿ ಮುಂದುವರಿಸಬಹುದೆಂದು ತೀರ್ಪು ನೀಡಲಾಗಿತ್ತು.ಇದನ್ನು ಪ್ರಶ್ನಿಸಿ ಟೋಲ್ ವಿರೋಧಿ ಕ್ರಿಯಾಸಮಿತಿ ಡಿವಿಷನ್ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.
ಇದರಂತೆ ಹೆದ್ದಾರಿ ಪ್ರಾಧಿಕಾರಕ್ಕೆ. ಟೋಲ್ ವಸೂಲಾತಿಗೆ ಕೇಂದ್ರ ಸರಕಾರ ಅನುಮತಿ ನೀಡಿಲ್ಲ ಎಂಬುದನ್ನು ಮಧ್ಯಂತರ ಆದೇಶದ ಮೂಲಕ ಹೖಕೋರ್ಟು ಉಲ್ಲೇಖಿಸಿತ್ತು.
ಈ ಕುರಿತಾದ ಅಂತಿಮ ತೀರ್ಪು ನೀಡಲು ನಿನ್ನೆ ಕೇಸು ಪರಿಗಣಿಸಲ್ಪಟ್ಟಿತ್ತಾದರೂ ಕೋರ್ಟಿನ ಸಮಯ ವಿಳಂಬ ಕಾರಣ 21ಕ್ಕೆ ಮುಂದೂಡಲಾಗಿದೆ.











