- ಟೋಲ್ ವಿವಾದ ಸಂಬಂಧ ಜಿಲ್ಲಾಧಿಕಾರಿಗಳ ಪ್ರಾತಿನಿಧಿಕ ಸಭೆ ವಿಫಲ:
ಹೋರಾಟಕ್ಕೆ ಹೆಚ್ಚಿದ ನಾಗರಿಕ ಬೆಂಬಲ
ಕುಂಬಳೆ: ಕೇಂದ್ರ ಸರಕಾರದ ಘೋಷಿತ ನೀತಿಯನ್ನುಂಲ್ಲಘಿಸಿ ಕುಂಬಳೆಯಲ್ಲಿ ಪ್ರಾರಂಭಿಸಿದ ಟೋಲ್ ಗೇಟಿನ ವಿರುದ್ಧ ನಾಗರಿಕ ಪ್ರತಿಭಟನೆ ವ್ಯಾಪಕವಾಗುತ್ತಿರುವಂತೆಯೇ ಡಿವೖಎಫ್ಐ, ಎಸ್ಎಫ್ಐ ಯೂತ್ ಲೀಗ್ ಕಾರ್ಯಕರ್ತರು ನೇರಾ ನೇರಾ ಟೋಲ್ ಆಕ್ರಮಿಸಿ ಪ್ರತಿಭಟಿಸಿದ ಘಟನೆ ನಡೆದಿದೆ. ಆಕ್ರಮಣದಲ್ಲಿ ಟೋಲ್ ಗೇಟಿನ ಕ್ಯಾಮರಾ ಸಹಿತ ಎಲ್ಲವನ್ನೂ ಪ್ರತಿಭಟನಾ ಕಾರರು ಆಕ್ರಮಿಸಿ ಧ್ವಂಸಗೊಳಿಸಿದ್ದಾರೆ. ಟೋಲ್ ಪ್ಲಾಝಾದಲ್ಲಿ ರಾತ್ರಿ ನಡೆದ ಈ ಸಂಘರ್ಷ ಭರಿತ ವಾತಾವರಣವನ್ನು ನಿಯಂತ್ರಿಸಲಾಗದೇ ಪೋಲೀಸರು ಪೇಚಿಗೆ ಸಿಲುಕಿದರು.

- ಎಡರಂಗದ ಬೆನ್ನಲ್ಲೇ ಯೂತ್ ಲೀಗ್…
ಬುಧವಾರ ರಾತ್ರಿ 7.45 ರ ಸುಮಾರಿಗೆ ಕುಂಬಳೆ ಪೇಟೆಯಿಂದ ಎಡರಂಗದ ಪ್ರತಿಭಟನೆ ಹೊರಟಿತ್ತು. ಹೆದ್ದಾರಿಯಲ್ಲಿ ದೊಂದಿ ಹಿಡಿದು ಸಾಗಿದ ಪ್ರತಿಭಟನಾ ನಿರತರು ಟೋಲ್ ಪ್ಲಾಝ ತಲುಪಿದ ಬಳಿಕ ಯೂತ್ ಲೀಗ್ ಮೆರವಣಿಗೆಯೂ ತಲುಪಿತ್ತು. ಈ ಮೊದಲೇ ನಾನಾ ಕಡೆಯಿಂದ ಬಂದ ನಾಗರಿಕ ಬೆಂಬಲದಿಂದ ಟೋಲೊ ಪ್ಲಾಝಾ ಪರಿಸರ ಜಾತ್ರೆಯ ವಾತಾವರಣ ಸೃಷ್ಟಿಸಿತ್ತು. ಅಲ್ಲಿ ಯಾರಿಗೂ ಜಾಗವಿಲ್ಲದೇ ಹೆದ್ದಾರಿ ಸಂಚಾರವೇ ಬಂದ್ ಆಗುವ ಜನಜಾತ್ರೆ ನೆರೆದಿತ್ತು.
ಈ ಮಧ್ಯೆ ಬೇಡವೇ ಬೇಡ.. ಕುಂಬಳೆಯಲ್ಲಿ ಅನಧಿಕೃತ ಟೋಲ್ ಬೇಡ ಎಂಬ ಘೋಷಣೆಗಳೊಂದಿಗೆ ಆಕ್ರಮಣ ನಡೆಯಿತು.
ಜನಜಂಗುಳಿಯ ಪ್ರತಿಭಟನೆಯನ್ನು ಪೊಲೀಸರು ತಡೆಯಲು ವಿಫಲರಾದರು.

ಪ್ರತಿಭಟನೆ ಬೆಂಬಲಿಸಿ ಸಾಗರೋಪಾದಿ ಜನರಾಗಮಿಸುತ್ತಿದ್ದಾರೆ. ಇವರ ವಾಹನ ವಾಹನ ಪಾರ್ಕಿಂಗ್ ಒಳಗೊಂಡಂತೆ ಯಾವುದೇ ಸೌಕರ್ಯ ಗಳಿಲ್ಲದೇ ಜನತೆಗೆ ಹೇರಲ್ಪಟ್ಟ ಕುಂಬ್ಳೆ ಟೋಲ್ ಪ್ಲಾಝ ಈಗ ನಾಗರಿಕ ಹೋರಾಟದ ಜಾತ್ರಾ ರೂಪ ಪಡೆದಿದೆ.
- ಜಿಲ್ಲಾಧಿಕಾರಿ ಕರೆದ ಸಭೆ ವಿಫಲ, ಸತ್ಯಾಗ್ರಹ ಮುಂದುವರಿಕೆ
ಕುಂಬಳೆ ಸಮೀಪ ಆರಂಭಗೊಂಡ ನೂತನ ಟೋಲ್ ಪ್ಲಾಝಾ ವಿರುದ್ಧವಾಗಿ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಮುಂದಾಳ್ತನದಲ್ಲಿ ನಾಗರಿಕ ಕ್ರಿಯಾ ಸಮಿತಿ ಆರಂಭಿಸಿರುವ ಅನಿರ್ಧಿಷ್ಟಾವಧಿ ಪ್ರತಿಭಟನಾ ಸತ್ಯಾಗ್ರಹಕ್ಕೆ ವ್ಯಾಪಕ ಜನ ಬೆಂಬಲ ಪ್ರಕಟವಾಗುತ್ತಿರುವಂತೆಯೇ ಬುಧವಾರ ಜಿಲ್ಲಾಧಿಕಾರಿ ಸಮಕ್ಷಮ ನಡೆದ ಅಧಿಕೃತ ಸಭೆ ವಿಫಲವಾಗಿದೆ.
ಜಿಲ್ಲೆಯ ಎಲ್ಲಾ ಶಾಸಕರನ್ನು ಆಹ್ವಾನಿಸಿ ರಾ. ಹೆದ್ದಾರಿ ಪ್ರಾಧಿಕಾರದ ಪ್ರತಿನಿಧಿಗಳ ಸಮಕ್ಷಮ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳವರು ಮಾತುಕತೆ ನಡೆಸಿದ್ದರು.











