IPL KKR ತಂಡಕ್ಕೆ ಆಘಾತ: ಬಾಂಗ್ಲಾ ವೇಗಿ ಮಸ್ತಾಫಿಜುರ್ ನನ್ನು ತಂಡದಿಂದ ಕೖ ಬಿಡಲು ಬಿಸಿಸಿಐ ಸೂಚನೆ

by Narayan Chambaltimar

ಗುವಾಹಟಿ: ಭಾರತ ಮತ್ತು ಬಾಂಗ್ಲಾದೇಶದ ನಡುವಣ ದ್ವಿಪಕ್ಷೀಯ ಸಂಬಂಧ ಹದಗೆಟ್ಟ ಹಿನ್ನೆಲೆಯಲ್ಲಿ ಐಪಿಎಲ್ ಕ್ರಿಕೆಟ್ ಲೀಗ್ ನಲ್ಲಿ ಕೋಲ್ಕತ್ತಾ ನೖಟ್ ರೖಡರ್ಸ್ ಪರ ಆಡಲು ಖರೀದಿಯಾಗಿದ್ದ ಬಾಂಗ್ಲಾ ವೇಗಿ ಮುಸ್ತಾಫಿಜುರ್ ರೆಹ್ಮಾನ್ ಅವರನ್ನು ತಂಡದಿಂದ ಕೖಬಿಡುವಂತೆ ಬಿಸಿಸಿಐ ಸೂಚಿಸಿದೆ.

ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ 2026ನೇ ಹರಾಜಿನಲ್ಲಿ ಚೆನ್ನೖ ಸೂಪರ್ ಕಿಂಗ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ಪ್ರಾಂಚೖಸಿಗಳ ನಡುವಣ ತೀವ್ರ ಪೖಪೋಟಿ ಯಿಂದ 2ಕೋಟಿ ರೂ ಮೂಲ ಬೆಲೆ ಹೊಂದಿದ್ದ ಮುಸ್ತಾಫಿಜುರ್ ರೆಹ್ಮಾನ್ ರನ್ನು
ರೂ. 9.20ಕೋಟಿಗೆ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ಖರೀದಿಸಿತ್ತು.

ಬಾಂಗ್ಲಾದೇಶದಲ್ಲಿ ಪ್ರಸ್ತುತ ಅರಾಜಕತೆ ಸೃಷ್ಟಿಯಾಗಿದ್ದು, ಅಲ್ಲಿ ಹಿಂದೂಗಳ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಐಪಿಎಲ್ ಟೂರ್ನಿಯಲ್ಲಿ ಆಡಲು ಮುಸ್ತಾಫಿಜುರ್ ಗೆ ಅವಕಾಶ ನೀಡಬಾರದೆಂದು ಹಿಂದೂಪರ ಸಂಘಟನೆಗಳು, ಕೆಲವು ಸ್ವಾಮೀಜಿಗಳು, ಬಿಜೆಪಿ ಮುಖಂಡರು ಬಹಿರಂಗ ಒತ್ತಡ ಹೇರಿದ್ದರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00