ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಖಲೀದಾ ಜಿಯಾ ನಿಧನ

by Narayan Chambaltimar

ಢಾಕಾ: ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಮಂತ್ರಿ ಖಲೀದಾ ಜಿಯಾ (80) ಮಂಗಳವಾರ ಬೆಳಿಗ್ಗೆ ನಿಧನರಾದರು.
1991ರಲ್ಲಿ ಖಲೀದಾ ಜಿಯಾ ಬಾಂಗ್ಲಾ ದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ಆಯ್ಕೆಯಾಗಿದ್ದರು.
ಬಾಂಗ್ಲಾದೇಶದ ನ್ಯಾಷನಲ್ ಪಕ್ಷದ ಅಭ್ಯರ್ಥಿಯಾಗಿದ್ದ ಅವರು ಮುಂಬರುವ ಚುನಾವಣೆಯಲ್ಲಿ ವಿಜಯ ಸಾಧಿಸಿ ಮರಳಿ ಪ್ರಧಾನಿಯಾಗುವ ಕನಸು ಕಂಡಿದ್ದರು.

ಖಲೀದಾ ಅವರ ನಿಧನ ಸುದ್ದಿ ಪ್ರಕಟಿಸಿರುವ ಪಕ್ಷ ಮಂಗಳವಾರ ಬೆಳಿಗ್ಗೆ ಆರು ಗಂಟೆಗೆ ಅವರು ಅಸುನೀಗಿದರೆಂದು ತಿಳಿಸಿದೆ. ಖಲೀದಾ ಅವರು ಯಕೃತ್ತಿನ ಸಮಸ್ಯೆ, ಸಂಧಿವಾತ, ಮಧುಮೇಹ, ಹೃದಯ ಸಮಸ್ಯೆಗಳಿಂದ ಬಳಲುತ್ತಿದ್ದರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00