ಬೇಳ ಪರಿಸರದಲ್ಲಿ 8ಮಂದಿ ಸಹಿತ ಜಾನುವಾರು, ಸಾಕುಪ್ರಾಣಿಗಳಿಗೆ ಹುಚ್ಚು ನಾಯಿ ಕಡಿತ

by Narayan Chambaltimar
  • ಬೇಳ ಪರಿಸರದಲ್ಲಿ 8ಮಂದಿ ಸಹಿತ ಜಾನುವಾರು, ಸಾಕುಪ್ರಾಣಿಗಳಿಗೆ ಹುಚ್ಚು ನಾಯಿ ಕಡಿತ

ಕುಂಬಳೆ : ಬೇಳ ಪರಿಸರದ ಕಿಳಿಂಗಾರು, ಬೇಳ, ಕೊಳಂಬೆ ಮತ್ತು ಕಟ್ಟತ್ತಂಗಡಿ ಪ್ರದೇಶದಲ್ಲಿ ಹುಚ್ಚುನಾಯಿಯೊಂದು ಎಂಟಕ್ಕೂ ಅಧಿಕ ಮಂದಿ ಹಾಗೂ ಜಾನುವಾರುಗಳ ಸಹಿತ ಆಡು, ಬೆಕ್ಕು ಮೊದಲಾದ ಪ್ರಾಣಿಗಳಿಗೆ ಕಚ್ಚಿದೆ. ಇಂದು ಮುಸ್ಸಂಜೆ ಈ ಘಟನೆ ನಡೆದಿದ್ದು, ನಾಯಿ ಕಚ್ಚಿದೆ ಎಂಟು ಮಂದಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಬೇಳ ಪರಿಸರದ ಸಿರಿಲ್ ಕ್ರಾಸ್ತ (50), ಸ್ಟೀವನ್ (40), ಶೆಬಿ (45), ಪ್ರಸನ್ನ (45), ಮೇರಿ (60), ಅನ್ವೀನ್ (13), ಅಜಿತ್ (8), ಸರಿತ (24) ಎಂಬಿವರು ಹುಚ್ಚು ನಾಯಿ ಕಡಿತಕ್ಕೊಳಗಾಗಿದ್ದು, ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಸಂಜೆ ಆರು ಗಂಟೆ ಬಳಿಕ ಹುಚ್ಚುನಾಯಿ ಅಟ್ಟಾಡಿಸಿ ಮನುಷ್ಯರ ಸಹಿತ ಇತರ ಜಾನುವಾರು, ಪ್ರಾಣಿಗಳನ್ನು ಕಚ್ಚಿದ ಹಿನ್ನೆಲೆಯಲ್ಲಿ ಬೇಳ ಪರಿಸರದ ಗ್ರಾಮೀಣರು ಆತಂಕಕ್ಕೆ ಒಳಗಾಗಿದ್ದಾರೆ. ಪೆರ್ಲ, ಕಾಸರಗೋಡು ನಗರ ಮತ್ತು ಕೋಳಿಯಡ್ಕದಲ್ಲಿ ಒಂದು ವಾರದ ಅಂತರದಲ್ಲಿ ನಾಗರಿಕರಿಗೆ ಹುಚ್ಚು ನಾಯಿ ಆಕ್ರಮಣ ನಡೆದಿತ್ತು. ಸ್ಥಳೀಯಾಡಳಿತ ಸಂಸ್ಥೆಗಳ ನಿರ್ಲಕ್ಷ್ಯವೇ ಹುಚ್ಚುನಾಯಿ ಪೀಡೆ, ಕಡಿತ ಮತ್ತು ಬೀದಿ ನಾಯಿಗಳ ಸಮಸ್ಯೆಗೆ ಕಾರಣ ಎಂದು ನಾಗರಿಕರು ದೂರಿದ್ದಾರೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00