- ನವೀಕೃತ ಹೋಟೆಲ್ ವಹಿವಾಟಿಗೆ ಪ್ರಸಾದ್ ಗ್ರೂಪ್ ಛೇರ್ಮೆನ್, ಹೋಟೆಲುದ್ಯಮಿ
ರಾಂಪ್ರಸಾದ್ ಚಾಲನೆ
ಕಾಸರಗೋಡು : ಸ್ವಾದಿಷ್ಟ ತಿಂಡಿ ತಿನಿಸುಗಳಿಗೆ ಹೆಸರಾಂತ ಹೋಟೆಲ್ ಎಂದೆನಿಸಿದ್ದ ನಗರದ ಜನಪ್ರಿಯ ಹೋಟೆಲ್ ಉಡುಪಿ ಆರ್ಯಭವನ ಸ್ಥಳಾಂತರಗೊಂಡಿದೆ. ಕಾಸರಗೋಡಿನ ಹೆದ್ದಾರಿಯ ಅಶ್ವಿನಿ ನಗರದ ಬಿಂದು ಆರ್ಕೇಡ್ ನಲ್ಲಿ ಕಾರ್ಯಾಚರಿಸುತ್ತಿದ್ದ ಹೋಟೆಲ್ ಇದೀಗ ಅದರ ನೇರ ಮುಂಭಾಗದ ಕೆ. ಸಿ. ಕಾಂಪ್ಲೆಕ್ಸಿಗೆ ಸ್ಥಳಾಂತರಗೊಂಡು, ನವೀಕೃತವಾಗಿ ಕಾರ್ಯಾರಂಭಗೊಂಡಿದೆ.
ಹೋಟೆಲ್ ಉದ್ದಿಮೆಯಲ್ಲಿ ನಾಲ್ಕು ದಶಕದ ಪರಿಚಯ ಮತ್ತು ಗ್ರಾಹಕರ ಒಲುಮೆ ಪಡೆದ ಪ್ರಾವೀಣ್ಯತೆಯ ಹಿನ್ನೆಲೆಯುಳ್ಳ ಹೋಟೆಲ್ ಪ್ರಸಾದ್ ಗ್ರೂಪಿನ ಅಂಗಸಂಸ್ಥೆಯಾದ ಹೋಟೆಲ್ ಉಡುಪಿ ಆರ್ಯಭವನದ ನೂತನ ವಿನ್ಯಾಸದ ಹೋಟೆಲನ್ನು ಪ್ರಸಾದ್ ಗ್ರೂಪ್ ಚೇರ್ ಮೆನ್, ಹೋಟೆಲ್ ಉಡುಪಿ ಗಾರ್ಡನ್ ಮಾಲಿಕ ರಾಂಪ್ರಸಾದ್ ಉದ್ಘಾಟಿಸಿದರು.

ನಗರದ ಧಾರ್ಮಿಕ ಮುಂದಾಳು ವೆಂಕಟ್ರಮಣ ಹೊಳ್ಳ, ಹೋಟೆಲ್ ಪ್ರಸಾದ್ ಗ್ರೂಪಿನ ಪಾಲುದಾರರಾದ ವಸಂತಕುಮಾರ್, ಮಹೇಶ್, ಲಕ್ಷ್ಮೀಶ, ಉಡುಪಿ ಆರ್ಯಭವನದ ಪಾಲುದಾರ ಶ್ರೇಯಸ್ ಮೊದಲಾದವರಿದ್ದರು. ಕಳೆದ ಎರಡೂವರೆ ದಶಕಗಳಿಂದ ಕಾಸರಗೋಡಿಗೆ ಕರಾವಳಿಯ ತಿನಿಸು ಮತ್ತು ಆಧುನಿಕ ಸಸ್ಯಾಹಾರಿ ಹೋಟೆಲ್ ಸಂಸ್ಕೃತಿಯ ಪರಿಚಯವನ್ನಿತ್ತು, ಜನಾಕರ್ಷಣೆ ಪಡೆದ ಹೋಟೆಲ್ ಉಡುಪಿ ಆರ್ಯಭವನದ ಮಾಲಕ ಶ್ರೀನಿವಾಸ್ ಸ್ವಾಗತಿಸಿದರು.

ನೂತನ ಹೋಟೆಲ್ ನಲ್ಲಿ ಅತ್ಯಾಧುನಿಕ ಸೌಕರ್ಯ, ಸೌಲಭ್ಯ ಮತ್ತು ವಾಹನ ಪಾರ್ಕಿಂಗ್ ಗೆ ವಿಶೇಷ ಸೌಲಭ್ಯಗಳಿವೆ. ರಾ. ಹೆದ್ದಾರಿ ಅಗಲೀಕರಣದಿಂದ ಪಾರ್ಕಿಂಗ್ ಸೌಕರ್ಯ ವಂಚಿತವಾದ ಕಾರಣ ಹೋಟೆಲ್ ಸ್ಥಳಾಂತರಿಸಲಾಗಿದೆ.

ವರ್ತಮಾನದಲ್ಲಿ ಹೋಟೆಲ್ ಎಂದರೆ ತಿಂಡಿತಿನಿಸು ಸೇವಿಸುವ ಜಾಗವಷ್ಟೇ ಅಲ್ಲ. ಅದೊಂದು ಆಹಾರ ಸಂಸ್ಕೃತಿಯ ಸ್ವಚ್ಛ ಕೇಂದ್ರ. ಅದಕ್ಕೊಂದು ಸಂಸ್ಕಾರವಿದೆ. ಈ ಹಿನ್ನೆಲೆಯಲ್ಲಿ ಕಾಸರಗೋಡಿಗೆ ಗುಣಮಟ್ಟದ ಸಸ್ಯಾಹಾರಿ ಹೋಟೆಲುದ್ಯಮ ಪರಿಚಯಿಸಿದ ನಮ್ಮ ಬಳಗಕ್ಕೆ ನಾಗರಿಕ ಸಮಾಜದ ಬೆಂಬಲವೇ ಶ್ರೀರಕ್ಷೆಯಾಗಿದೆ. ಪ್ರಸ್ತುತ ಸ್ಥಳಾಂತರದೊಂದಿಗೆ ನಮ್ಮ ಸಂಸ್ಕಾರಯುತ ಉದ್ಯಮ ಹೊಸ ಮಜಲಿಗೆ ತೆರೆದುಕೊಂಡು ಮುಂದುವರಿಯುತ್ತಿದೆ. ತಲೆಮಾರುಗಳಿಂದ ನಮ್ಮಲ್ಲಿ ಆಹಾರೋತ್ಪನ್ನ ಸೇವಿಸುತ್ತಲೇ ಬಂದ ನಾಗರಿಕರ ಬೆಂಬಲ ಮುಂದುವರಿಯಬಹುದೆನ್ನುವುದೇ ನಮ್ಮ ನಂಬಿಕೆ.
-ಶ್ರೀನಿವಾಸ್ ಕೆ. ಎಂ.
ಹೋಟೆಲ್ ಉಡುಪಿ ಆರ್ಯಭವನ





