79
- ಎರಡು ಕಡೆಗಳ ಚುನಾವಣೆ ಮುಂದೂಡಿಕೆ
ತಿರುವನಂತಪುರ: ವಿಧಾನಸಭಾ ಚುನಾವಣೆಯ ಪೂರ್ವಭಾವಿಯಾಗಿ ನಡೆಯುತ್ತಿರುವ ಸ್ಥಳೀಯಾಡಳಿತ ಚುನಾವಣೆಯಲ್ಲಿ ಕೇರಳದ ಏಳು ಜಿಲ್ಲೆಗಳಲ್ಲಿ ಇಂದು ಮೊದಲ ಹಂತದ ಮತದಾನ ಆರಂಭಗೊಂಡಿದೆ. ತಿರುವನಂತಪುರ ಮತ್ತು
ಕೊಲ್ಲಂ, ಪಟ್ಟಣಂತಿಟ್ಟ, ಆಲಪ್ಪುಯ, ಕೋಟಯಂ, ಇಡುಕ್ಕಿ, ಎರ್ನಾಕುಳಂ ಜಿಲ್ಲೆಗಳಲ್ಲಿಂದು ಮತದಾನ ನಡೆಯುತ್ತಿದೆ. ಕಾಸರಗೋಡು ಸಹಿತ ಮಲಬಾರಿನ ಉಳಿದ ಏಳು ಜಿಲ್ಲೆಗೆ ಡಿ. 11ರಂದು ಮತದಾನ ನಡೆಯಲಿದೆ.

ತಿರುವನಂತಪುರ ನಗರಪಾಲಿಕೆಯ ವಿಳಿಂಜಂ ವಾರ್ಡಿನ ಚುನಾವಣೆ ಮತ್ತು ಮಲಪ್ಪುರಂ ಮುತ್ತೇಡಂ ಪಂ. ಏಳನೇ ವಾರ್ಡಿನ ಚುನಾವಣೆ ಮುಂದೂಡಲಾಗಿದೆ. ಇಲ್ಲಿನ ಅಭ್ಯರ್ಥಿಗಳ ನಿಧನದ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಲ್ಪಟ್ಟಿದೆ. ರಾಜ್ಯಯದ 595ಸ್ಥಳೀಯಾಡಳಿತ ಸಂಸ್ಥೆಗಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಬೆಳಿಗ್ಗೆ ಏಳರಿಂದ ಸಂಜೆ ಆರರ ತನಕ ಮತದಾನದ ಅವಕಾಶವಿದೆ.
ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸ್ಥಳೀಯಾಡಳಿತ ಕದನಕ್ಕೆ ಮಹತ್ವ ಹೆಚ್ಚಿದೆ. ಮತದಾನದ ಮೊದಲ ಹಂತದಲ್ಲೇ ಜನರಿಂದ ಆವೇಶ ಭರಿತ ಸ್ಪಂದನ ಕಂಡುಬಂದಿದೆ.








