55
ಮಂಜೇಶ್ವರ ಸಹಿತ ಗಡಿ ಪ್ರದೇಶದ ಪಂಚಾಯತುಗಳು ಕೇರಳ-ಕರ್ನಾಟಕದ ಉಭಯ ರಾಜ್ಯಕ್ಕೂ ಬೇಡದ ನಿರ್ಲಕ್ಷ್ಯ ಸ್ಥಿತಿಯಲ್ಲಿರಲು ಎಲ್ ಡಿ ಎಪ್ ಮತ್ತು ಯುಡಿಎಫ್ ಸಮಾನ ಕಾರಣವೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ ಆರೋಪಿಸಿದರು.
ಜಿಲ್ಲಾ ಪಂ. ನ ಮಂಜೇಶ್ವರ ಡಿವಿಜನ್ ಅಭ್ಯರ್ಥಿ ಜಯಂತಿ ಟಿ. ಶೆಟ್ಟಿ ಅವರ ಚುನಾವಣಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಂಜೇಶ್ವರದ ಉದ್ಯಾವರ ಮಾಡದಲ್ಲಿ ಚುನಾವಣಾ ಸಭೆ ನಡೆಯಿತು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮುರಳೀಧರ ಯಾದವ್, ಮಂಜೇಶ್ವರ ಮಂಡಲಾಧ್ಯಕ್ಷ ಆದರ್ಶ್ ಬಿ. ಎಂ, ರಾಜ್ಯ ಕೌನ್ಸಿಲ್ ಸದಸ್ಯ ಪದ್ಮನಾಭ ಕಡಪ್ಪರ, ಸಲಿಲ್ ಮಾಸ್ಟರ್ ಮಾತನಾಡಿದರು.








