- ಕಾಸರಗೋಡು ಜಿಲ್ಲೆಯ 48ಸ್ಥಳೀಯಾಡಳಿತ ಸಂಸ್ಥೆಗಳಿಗೆ ಡಿ. 11ರಂದು ಮತದಾನ :ಜಿಲ್ಲೆಯಲ್ಲಿ 1370ಮತಗಟ್ಟೆ
ಕಾಸರಗೋಡು ಸಹಿತ ಮಲಬಾರ್ ಕೇರಳದ ಏಳು ಜಿಲ್ಲೆಗಳಲ್ಲಿ ನಡೆಯಲಿರುವ ಸ್ಥಳೀಯಾಡಳಿತ ಚುನಾವಣೆಯ ಬಹಿರಂಗ ಪ್ರಚಾರದಬ್ಬರಗಳಿಗೆ ಮಂಗಳವಾರ ಸಂಜೆ ಆರಕ್ಕೆ ಮಂಗಲವಾಯಿತು. ಎರಡನೇ ಹಂತದ ಏಳು ಜಿಲ್ಲೆಗಳ ಚುನಾವಣೆಗೆ ಬುಧವಾರ ಒಂದೇ ದಿನ ಬಾಕಿ. ಡಿ. 11 ಗುರುವಾರ ಬೆಳಿಗ್ಗೆ 7ರಿಂದ ಸಂಜೆ 6ರ ತನಕ ಮತದಾನ ನಡೆಯಲಿದೆ. ಮತದಾನಕ್ಕೆ ಮತಗಟ್ಟೆಗಳು ಸಿದ್ಧವಾಗಿದ್ದು, ತ್ರಿಸ್ತರ ಪಂ. ಭವಿಷ್ಯ ನಿರ್ಣಯಕ್ಕೆ ಇನ್ನು ಕ್ಷಣಗಣನೆಯ ತಾಸುಗಳಷ್ಟೇ ಬಾಕಿ ಇದೆ.

ವಾಡಿಕೆಯಂತೆ ಪ್ರಚಾರ ಕೋಲಾಹಲಗಳ ಅಂತಿಮ ಹಂತದ ಆವೇಶದಬ್ಬರದ ಆಘೋಷಕ್ಕೆ ಈ ಬಾರಿ ಪೋಲೀಸ್ ಅನುಮತಿ ನೀಡಿಲ್ಲ. ಪರಿಣಾಮ ರಾಜಕೀಯ ಪಕ್ಷಗಳು ಮೖಕ್ ಪ್ರಚಾರ, ಸೋಷ್ಯಲ್ ಮೀಡಿಯಾಗಳನ್ನಷ್ಟೇ ಬಳಸಿ ಅಲೆ ಸೃಷ್ಟಿಗೆ ಯತ್ನಿಸಿದರು.
ಪ್ರತಿಯೊಂದು ಪಂಚಾಯತಿನಲ್ಲೂ ವಿಭಿನ್ನ ವಿಷಯಗಳ ತರ್ಕ, ಸಮಸ್ಯೆಗಳೊಂದಿಗೆ ಚುನಾವಣೆ ನಡೆಯುತ್ತಿದ್ದರೂ ಪಕ್ಷಗಳೆಲ್ಲವೂ ನಿರೀಕ್ಷೆ ಇರಿಸಿಕೊಂಡಿವೆ.
ಕಾಸರಗೋಡು ಜಿಲ್ಲೆಯಲ್ಲಿ 38 ಗ್ರಾ. ಪಂ ಮತ್ತು ಮೂರು ನಗರಸಭೆ ಹಾಗೂ ಆರು ಬ್ಲಾಕ್ ಪಂ. ಹಾಗೂ ಒಂದು ಜಿಲ್ಲಾ ಪಂಚಾಯತಿಗೆ ಚುನಾವಣೆ ನಡೆಯಲಿದೆ. ಒಟ್ಟು 48 ಸ್ಥಳೀಯಾಡಳಿತ ಸಂಸ್ಥೆಗಳಿವೆ. ಈ ಪೖಕಿ ಗ್ರಾ. ಪಂ. ನ 725 ವಾರ್ಡುಗಳಿಗೆ 1242 ಮತಗಟ್ಟೆ ಸಜ್ಜೀಕರಿಸಲಾಗಿದೆ.ನಗರಸಭಾ ವ್ಯಾಪ್ತಿಗಳಲ್ಲಿ 120ವಾರ್ಡುಗಳಿಗೆ 128ಮತಗಟ್ಟೆಗಳಿವೆ. ಒಟ್ಟು 1370ಮತಗಟ್ಟೆಗಳು ಜಿಲ್ಲೆಯಲ್ಲಿವೆ.








