ಪುತ್ತೂರು : ನಿಲ್ಲಿಸಿದ್ದ ಲಾರಿಯಿಂದ 21ಲಕ್ಷ ರೂ ಮೌಲ್ಯದ 80ಚೀಲ ಕಾಫಿ ಕಳವು :ಆಟೋ, ಗೂಡ್ಸ್ ಟೆಂಪೋ ಸಹಿತ ಐವರ ಬಂಧನ

by Narayan Chambaltimar

ಪುತ್ತೂರು : ನಿಲ್ಲಿಸಿದ್ದ ಲಾರಿಯಿಂದ ರಾತ್ರಿ ವೇಳೆ 21ಲಕ್ಷ ಮೌಲ್ಯದ 80ಚೀಲ ಕಾಫಿ ಕಳವುಗೖದ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ.
ಪುತ್ತೂರು ನಗರ ಠಾಣಾ ಪೊಲೀಸರು ನಡೆಸಿದ ತನಿಖೆಯಂತೆ ಆರೋಪಿ ಆಶ್ಲೇಷ್ ಭಟ್ ಹಾಗೂ ಸಹಚರರಾದ ನಾರಾಯಣ ಶೆಟಿಗಾರ್, ಮಿಥುನ್ ಕುಮಾರ್, ವಿಜಯ ಶೆಟ್ಟಿ, ಮುಹ್ಮದ್ ಅಶ್ರಫ್ ಎಂಬಿವರನ್ನು ಬಂಧಿಸಲಾಗಿದ್ದು, ಕೃತ್ಯಕ್ಕೆ ಬಳಸಿದ ಎರಡು ಆಟೋ, ಒಂದು ಗೂಡ್ಸ್ ಟೆಂಪೋ ಮತ್ತು ಕಳವಾದ 60ಕೆ. ಜಿ. ತೂಕದ 80ಚೀಲ ಕಾಫಿಗಳನ್ನು ವಶಪಡಿಸಲಾಗಿದೆ.

ಪುತ್ತೂರು ಕಬಕ ನಿವಾಸಿ ತೃತೇಶ್ ನೀಡಿದ ದೂರಿನಂತೆ ಇವರನ್ನು ಬಂಧಿಸಲಾಗಿದೆ. ತೃತೇಶ್ ಮಾಲಕ ಮತ್ತು ಚಾಲಕನಾಗಿರುವ ಲಾರಿಯಲ್ಲಿಶಕಳೆದ ಡಿ. 3ರಂದು ಪಿರಿಯಾಪಟ್ಟಣದ ಕಾಫಿ ಕ್ಯೂರಿಂಗ್ ಕಂಪೆನಿಯಿಂದ ತಲಾ 60ಕೆಜಿಯ 320ಚೀಲ ಕಾಫಿ ಹೇರಿಕೊಂಡು ಮಂಗಳೂರಿಗೆ ಬರಲಾಗಿತ್ತು. ರಾತ್ರಿ ವೇಳೆ ಪುತ್ತೂರಿನ ಕಬಕ ನೆಹರೂನಗರದಲ್ಲಿ ಲಾರಿ ನಿಲ್ಲಿಸಲಾಗಿತ್ತು. ಮರುದಿನ ಲಾರಿಯನ್ನು ಮಂಗಳೂರಿನ ಬಂದರಿಗೆ ಮಧ್ಯಾಹ್ನ ತಲುಪಿಸಿದಾಗ, ಲಾರಿಯ ಹಿಂಬಂದಿಯ ಲೋಡಿಂಗ್ ಸೀಲ್ ಒಡೆದದ್ದು ಕಂಡುಬಂತು. ಪರಿಶೀಲಿಸಿದಾಗ 21, 44,000ರೂ ಮೌಲ್ಯದ 80ಚೀಲಗಳು ಕಳವುಗೖಯಲ್ಪಟ್ಟದ್ದು ಪತ್ತೆಯಾಗಿತ್ತು. ಈ ಬಗ್ಗೆ ಲಾರಿ ಚಾಲಕ ತೃತೇಶ್ ಪುತ್ತೂರು ನಗರ ಠಾಣೆಗೆ ನೀಡಿದ ದೂರಿನಂತೆ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಯಿತು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00