- ಜಿದ್ದಾ ಜಿದ್ದಿನ ಗ್ರಾ. ಪಂ. ಚುನಾವಣೆ ನಡುವೆ ಒಂದು ಅನ್ಯ ಮತೀಯ ಪ್ರೇಮ ಕಹಾನಿ!
ಕಾಸರಗೋಡು : ಸ್ಥಳೀಯಾಡಳಿತ ಚುನಾವಣೆಗೆ ಇನ್ನೊಂದು ದಿನವಷ್ಟೇ ಉಳಿದಿರುವಾಗ ಯು. ಡಿ. ಎಫ್ ನ ಮುಸ್ಲಿಂ ಲೀಗ್ ಅಭ್ಯರ್ಥಿಯೊಬ್ಬಳು ಬಿಜೆಪಿ ಕಾರ್ಯಕರ್ತನ ಜತೆ ಪರಾರಿಯಾಗಿ ನಾಪತ್ತೆಯಾದ ಘಟನೆ ವರದಿಯಾಗಿದೆ.
ಕಣ್ಣೂರು ಚೋಕ್ಲಿ ಗ್ರಾಮ ಪಂ. ನಲ್ಲಿ ಈ ಘಟನೆ ನಡೆದಿದ್ದು, ನಾಪತ್ತೆಯಾದ ಅಭ್ಯರ್ಥಿ ಮೆಜಿಸ್ಟ್ರೇಟ್ ಮುಂಭಾಗ ಹಾಜರಾಗಿದ್ದು ಬಳಿಕ ಪ್ರಿಯತಮನೊಡನೆ ಮರಳಿದಳು.

ಕಣ್ಣೂರಿನ ಚೋಕ್ಲಿ ಗ್ರಾ. ಪಂ. ನ 9ನೇ ವಾರ್ಡಿನ ಮುಸ್ಲಿಂಲೀಗ್ ಅಭ್ಯರ್ಥಿಯಾದ ಟಿ. ಪಿ. ಅರುವ (29)ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದರು. ಚುನಾವಣಾ ಕಣದಲ್ಲಿ ಸಕ್ರಿಯವಾಗಿ ಗೃಹ ಸಂಪರ್ಕ ನಡೆಸಿ ಮತದಾರರನ್ನು ಖುದ್ದು ಭೇಟಿಯಾಗುತ್ತಿದ್ದ ಇವರು ಪ್ರಬಲ ಸ್ಪರ್ಧೆ ಒಡ್ಡಿದ್ದರು. ಈ ಮಧ್ಯೆ ದಿಢೀರ್ ಅಭ್ಯರ್ಥಿಯೇ ನಾಪತ್ತೆಯಾದಾಗ ಈಕೆಯನ್ನು ಸಿಪಿಎಂ ನವರು ಅಪಹರಿಸಿ ದಿಗ್ಬಂಧನದಲ್ಲಿಟ್ಟಿದ್ದಾರೆಂದು ಆರೋಪಿಸಿ ಯುಡಿಎಫ್ ರಂಗಕ್ಕಿಳಿದಿತ್ತು. ಈ ಸಂಬಂಧ ಈಕೆಯ ತಾಯಿ ಪೋಲೀಸರಿಗೆ ದೂರು ನೀಡಿದ್ದರು. ಆದರೆ ಘಟನೆಯಲ್ಲಿ ತಮಗೆ ಯಾವುದೇ ನಂಟಿಲ್ಲವೆಂದು ಸಿಪಿಐಎಂ ಸ್ಪಷ್ಟನೆ ನೀಡಿತ್ತು.
ಈ ನಡುವೆ ಪೊಲೀಸರು ತನಿಖೆ ನಡೆಸುವಾಗ ಪ್ರಕರಣಕ್ಕೆ ಟ್ವಿಸ್ಟ್ ಆಗಿದ್ದು, ಆಕೆ ಸಕ್ರಿಯ ಬಿಜೆಪಿ ಕಾರ್ಯಕರ್ತ ನಾದ ಗೆಳೆಯನೊಂದಿಗೆ ತೆರಳಿರುವುದಾಗಿ ತಿಳಿದುಬಂತು. ಇದರಂತೆ ಇಂದು ಅಪರಾಹ್ನ ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.








