149
ಕಾಸರಗೋಡು : ವಿದ್ಯಿನಗರ ನೆಲ್ಕಳ ಕಾಲನಿಯಲ್ಲಿ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ನಡೆಸಿದ ಘಟನೆ ವರದಿಯಾಗಿದೆ. ದಿ. ಚಂದ್ರ – ಸುಶೀಲ ದಂಪತಿಯ ಪುತ್ರ ಅಜಯನ್ (38)ಎಂಬವರು ಮೃತ ವ್ಯಕ್ತಿಯಾಗಿದ್ದಾರೆ.
ಇವರು ಧ್ವನಿ ಮತ್ತು ಬೆಳಕಿನ ಸಂಸ್ಥೆಯಲ್ಲಿ ದುಡಿಯುತ್ತಿದ್ದರು. ಸೋಮವಾರ ರಾತ್ರಿ ಆತ್ಮಹತ್ಯೆ ನಡೆಸಿದ್ದು, ಮಂಗಳವಾರ ಬೆಳಿಗ್ಗೆ ಮಲಗುವ ಕೋಣೆಯಲ್ಲಿ ಮೃತ ದೇಹ ಪತ್ತೆಯಾಯಿತು. ಕಾಸರಗೋಡು ಪೊಲೀಸರು ಅಸಹಜ ಮರಣಕ್ಕೆ ಕೇಸು ದಾಖಲಿಸಿದ್ದಾರೆ. ಮೃತರು ಅವಿವಾಹಿತರಾಗಿದ್ದು, ಸಹೋದರ ಸೋದರಿಯರನ್ನಗಲಿದ್ದಾರೆ.







