- ಊರಿಗೆ ಉಪಟಳ ಕೊಟ್ಟ ಹುಚ್ಚುನಾಯಿ ಆಕ್ರಮಣದಿಂದ ಪಾರಾಗಲು ನಡೆಸಿದ ಹತ್ಯೆಯಿಂದ ಪೇಚಿಗೆ ಸಿಲುಕಿದ ಅಭ್ಯರ್ಥಿ
ಕಾಸರಗೋಡು : ಕೇರಳ ವ್ಯಾಪಕ ಬೀದಿ ನಾಯಿ ಮತ್ತು ಹುಚ್ಚುನಾಯಿ ಕಾಟ ವಿಪರೀತವಾಗಿದೆ. ಎಲ್ಲೆಡೆಗಳಿಂದಲೂ ನಾಯಿ ಮನುಷ್ಯರನ್ನು ಆಕ್ರಮಿಸುವ ವರದಿಗಳಾಗುತ್ತಿವೆ. ಈ ಮಧ್ಯೆ ನಾಗರಿಕರಿಗೆ ಕಚ್ಚಿ ಗಾಯಗೊಳಿಸಿ, ಊರಲ್ಲಿ ಭೀತಿಯ ಭಯಾತಂಕ ಸೃಷ್ಟಿಸಿದ ಹುಚ್ಚುನಾಯಿಯೊಂದನ್ನು ಹೊಡೆದು ಕೊಂದ ಅಭ್ಯರ್ಥಿಯ ಪೊಲೀಸ್ ಕೇಸಿಗೆ ಸಿಲುಕಿ ಪೇಚಿಗೊಳಗಾಗಿದ್ದಾರೆ.

ಈ ಘಟನೆ ನಡೆದಿರುವುದು ಕೇರಳದ ಕೊಲ್ಲಂ ಜಿಲ್ಲೆಯಲ್ಲಿ. ಇಲ್ಲಿನ ಶಾಸ್ತಾಂಕೋಟ್ ಪಡಿಂಞಾರ್ ಕಲ್ಲಡ ಕಾರಾಳಿಮುಕ್ಕ್ ಟೌನ್ ವಾರ್ಡಿನಲ್ಲಿ ಯು. ಡಿ. ಎಫ್ ಅಭ್ಯರ್ಥಿಯಾಗಿ ಸ್ಥಳೀಯಾಡಳಿತ ಚುನಾವಣೆಗೆ ಸ್ಪರ್ಧಿಸುವ ಸುರೇಶ್ ಚಂದ್ರನ್ ವಿರುದ್ಧ ಪ್ರಾಣಿದಯಾ ಸಂಘದ ಕಾರ್ಯಕರ್ತನ ದೂರಿನಂತೆ ಪೊಲೀಸರು ಕೇಸು ದಾಖಲಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ವಾರ್ಡಿನಲ್ಲಿ ಬೀದಿ ನಾಯಿಯೊಂದು ಅನೇಕರನ್ನು ಕಚ್ಚಿತ್ತು. ಓರವ ಯುವತಿ, ಮತ್ತೋರ್ವ ವೃದ್ಧನಿಗೆ ಗಂಭೀರ ಗಾಯವಾಗಿತ್ತು. ಇದರಂತೆ ನಾಗರಿಕರು ನಾಯಿಯನ್ನು ಸೆರೆ ಹಿಡಿಯಲು ಸರಕಾರಿ ವ್ಯವಸ್ಥೆಗಳ ಮೊರೆ ಹೋಗಿ ನಾನಾ ರೀತಿ ಪ್ರಯತ್ನಿಸಿದರೂ ಫಲ ಉಂಟಾಗಿರಲಿಲ್ಲ. ಇದರಂತೆ ವಾರ್ಡಿನ ಅಭ್ಯರ್ಥಿಯೇ ನಾಗರಿಕ ಸಹಾಯದಿಂದ ನಾಯಿ ಭೇಟೆಗಿಳಿದರು. ಹುಡುಕಾಡಿದಾಗ ನಾಯಿ ಪತ್ತೆಯಾದರೂ ಅದು ಆಕ್ರಮಣವೆಸಗಲು ಧಾಳಿ ಮಾಡಿತು. ಈ ವೇಳೆ ನಾಯಿ ಕಡಿತಕ್ಕೊಳಗಾಗದಿರಲು ನಾಯಿಗೆ ಹೊಡೆದಾಗ ಅದು ಮೃತಪಟ್ಟಿತು. ಬಳಿಕ ಅವರು ನಾಯಿಯನ್ನು ಜಿಲ್ಲಾ ಮೃಗಾಸ್ಪತ್ರೆಗೆ ಕೊಂಡೊಯ್ದಾಗ ನಾಯಿಗೆ ರೇಬಿಸ್ ರೋಗ ತಗುಲಿತ್ತೆಂದು ದೃಢವಾಯಿತು.
ಆದರೆ ಈ ನಡುವೆ ಪ್ರಾಣಿದಯಾ ಸಂಘದ ಹೆಸರಿನಲ್ಲಿ ಪೊಲೀಸರಿಗೆ ದೂರು ದೊರೆತು, ಜಿಲ್ಲಾಧಿಕಾರಿ ಘಟನೆಯ ಸ್ಪಷ್ಟತೆ ಕೋರಿದರು. ಅಧಿಕಾರಿಗಳು ಸ್ಥಳ ಸಂದರ್ಶಿಸಿ ಮಾಹಿತಿ ಕಲೆ ಹಾಕಿದರು. ಪ್ರಾಣಿಯೊಂದನ್ನು ಕ್ರೂರವಾಗಿ ಹೊಡೆದು ಕೊಂದದ್ದಕ್ಕೆ ಬಿಎನ್ಎಸ್ 325 ಕಾಯ್ದೆಯಂತೆ ಪೊಲೀಸರು ಕೇಸುದಾಖಲಿಸಿದರು.








