ಮೊಲೆ ಹಾಲು ಗಂಟಲಿಗೆ ಸಿಲುಕಿ ಎಂಟು ದಿನಗಳ ಹಾಲು ಹಸುಳೆ ಸಾವು

by Narayan Chambaltimar

ಕಾಸರಗೋಡು : ಮೊಲೆಹಾಲು ಗಂಟಲಲ್ಲಿ ಸಿಲುಕಿ ಕೇವಲ ಎಂಟು ದಿನಗಳ ಹಾಲುಹಸುಳೆ ಮೃತಪಟ್ಟ ಘಟನೆ ವರದಿಯಾಗಿದೆ. ಜಿಲ್ಲೆಯ ಕಿನಾನೂರ್ ಕರಿಂದಳಂ ಎಂಬಲ್ಲಿನ ಕಾಳಿಯಾನತ್ತ್ ನಿವಾಸಿ ಅಮೃತಾ ಎಂಬವರ ಮಗು ಮೃತಪಟ್ಟ ದುರ್ದೖವಿ. ಸೋಮವಾರ ಬೆಳಿಗ್ಗೆ ಎಂಟು ಗಂಟೆಗೆ ಈ ಘಟನೆ ಸಂಭವಿಸಿತು.

ಮೊಲೆ ಹಾಲು ಸೇವನೆ ಬಳಿಕ ಮಗುವಿಗೆ ಉಸಿರಾಟ ತೊಂದರೆ ಕಂಡು ಬಂದು ಕೂಡಲೇ ಕಾಞಂಗಾಡಿನ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅಷ್ಟರಲ್ಲಾಗಲೇ ಮಗು ಮೃತಪಟ್ಟಿತ್ತು. ಮಗುವಿಗೆ ಶ್ವಾಸಕೋಶ ಸಂಬಂಧವಾದ ಅಸೌಖ್ಯವಿದ್ದು, ಅದರ ಉಲ್ಬಣತೆಯಿಂದ ಉಸಿರಾಟ ಸಮಸ್ಯೆಯುಂಟಾಗಿ ಮಗು ಮರಣ ಹೊಂದಿರುವುದಾಗಿ ಮನೆಯವರು ಹೇಳಿದ್ದಾರೆಂದು ಪೊಲೀಸ್ ಪ್ರಕರಣ ದಾಖಲಾಗಿದೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00