ಹಾರಿ ಬಂದು ರಿಕ್ಷಾ ಚಾಲಕನ ಹೆಗಲಲ್ಲಿ ಕುಳಿತ ಗೂಬೆ!

ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಬಡಿದ ಆಟೋ ರಿಕ್ಷಾ

by Narayan Chambaltimar

ಕಾಸರಗೋಡು: ಆಟೋ ರಿಕ್ಷಾ ಚಲಾಯಿಸುತ್ತಿರುವಂತೆಯೇ ಚಾಲಕನ ಹೆಗಲ ಮೇಲೆ ಗೂಬೆಯೊಂದು ಹಾರಿ ಬಂದು ಕುಳಿತಿತು. ಕಕ್ಕಾಬಿಕ್ಕಿಯಾದ ಚಾಲಕನ ದಿಗ್ಭ್ರಮೆಯಿಂದ ರಿಕ್ಷಾ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಬಡಿಯಿತು. ಸೋಮವಾರ ರಾತ್ರಿ ಎಂಟೂವರೆ ಗಂಟೆ ವೇಳೆಗೆ ಚಟ್ಟಂಚಾಲ್ -ದೇಳಿ ರಸ್ತೆಯ ಬಂಡಿಚ್ಚಾಲ್ ನಲ್ಲಿ ಈ ಘಟನೆ ನಡೆದಿದೆ. ಗಾಯಾಳು ಚಾಲಕ ತಳಂಗರೆ ನಿವಾಸಿ ಯೂಸುಫ್ (50) ಚೇತರಿಸಿದ್ದಾರೆ.

ಕಾಸರಗೋಡಿನಿಂದ ಬಂಡಿಚ್ಚಾಲ್ ಗೆ ಪ್ರಯಾಣಿಕರೊಬ್ಬರನ್ನು ಬಿಟ್ಟು ಮರಳುವ ದಾರಿ ಮಧ್ಯೆ ಈ ಘಟನೆ ಸಂಭವಿಸಿದೆ. ಗೂಬೆ ಹೆಗಲಲ್ಲಿ ಕುಳಿತಾಗ ಉಂಟಾದ ವಿಭ್ರಾಂತಿಯಿಂದ ಆಟೋ ವಿದ್ಯುತ್ ಕಂಬಕ್ಕೆ ಬಡಿದಿದ್ದು, ಅದರ ಮುಂಭಾಗ ನಜ್ಜುಗುಜ್ಜಾಗಿದೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00