ಮಂಜೇಶ್ವರ : ಬಸ್ಸಿನಲ್ಲಿ ಸಾಗಿಸುತ್ತಿದ್ದ 67.5ಲಕ್ಷ ರೂ ಕಾಳಧನ ಸಹಿತ ಯುವಕನ ಸೆರೆ

by Narayan Chambaltimar

ಮಂಜೇಶ್ವರ : ಕರ್ನಾಟಕದಿಂದ ಕೇರಳಕ್ಕೆ ಬಸ್ಸಿನಲ್ಲಿ ಸಾಗಿಸಲು ಯತ್ನಿಸಿದ 67.5ಲಕ್ಷ ರೂ ಕಾಳಧನ ಸಹಿತ ಓರ್ವನನ್ನು ಬಂಧಿಸಲಾಗಿದೆ. ವಾಮಂಜೂರು ಚೆಕ್ ಪೋಸ್ಟ್ ಬಳಿ ಅಬಕಾರಿ ಅಧಿಕಾರಿಗಳು ಬಸ್ ತಡೆದು ನಡೆಸಿದ ಕಾರ್ಯಾಚರಣೆಯಲ್ಲಿ ದಾಖಲೆ ರಹಿತವಾಗಿ ಸಾಗಿಸುತ್ತಿದ್ದ ಹಣ ವಶಪಡಿಸಲಾಗಿದೆ. ಈ ಸಂಬಂಧ ತಳಿಪರಂಬ ಚೇಲೇರಿಮುಕ್ಕ್ ನಿವಾಸಿ ಸಮೀರ್ (41)ಎಂಬಾತನನ್ನು ಬಂಧಿಸಲಾಗಿದೆ.

ಮಂಗಳವಾರ ಬೆಳಿಗ್ಗೆ 11ರ ವೇಳೆಗೆ ಅಬಕಾರಿ ಇನ್ಸ್ ಪೆಕ್ಟರ್ ಸಂತೋಷ್ ಕುಮಾರ್ ನೇತೃತ್ವದಲ್ಲಿ ಸಿಬಂದಿಗಳು ಕಾರ್ಯಾಚರಣೆ ನಡೆಸಿದರು. ನಗದು ವಶಪಡಿಸಿಕೊಂಡ ಅಬಕಾರಿ ಅಧಿಕಾರಿಗಳಲ್ಲಿ ಆರೋಪಿಯು ಕೇಸು ದಾಖಲಿಸದಂತೆ ವಿನಂತಿಸಿ 10ಲಕ್ಷ ರೂ. ಗಳ ತನಕ ಲಂಚದ ಓಫರ್ ನೀಡಿದ್ದನೆಂದು ಹೇಳಲಾಗಿದೆ. ಆರೋಪಿಯ ಸಹಿತ ಸಮೀಪದ ಹೊಸಬೆಟ್ಟು ಯೂನಿಯನ್ ಬೇಂಕಿನಲ್ಲಿ ಹಣವನ್ನು ಎಣಿಸಿ, ಬಳಿಕ ಮಂಜೇಶ್ವರ ಪೋಲೀಸರಿಗೆ ಹಸ್ತಾಂತರಿಸಲಾಯಿತು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00