ಮಂಗಳೂರು – ನವಿ ಮುಂಬಯಿ ನಡುವೆ ದೖನಂದಿನ ಹೊಸ ವಿಮಾನಯಾನ : ಡಿ. 25ರಿಂದ ಆರಂಭ

by Narayan Chambaltimar

ಮಂಗಳೂರು : ಮಂಗಳೂರು ಮತ್ತು ಮುಂಬಯಿ ನಗರ ನಡುವಣ ಸಂಪರ್ಕಕ್ಕೆ ಮತ್ತಷ್ಟು ಪೂರಕವಾಗಿ ಡಿಸೆಂಬರ್ 25 ರಿಂದ ಮಂಗಳೂರಿನಿಂದ ಮುಂಬಯಿಗೆ ದೖನಂದಿನ ವಿಮಾನ ಸರ್ವೀಸ್ ಆರಂಭವಾಗಲಿದೆ. ಬಜಪೆಯ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂಂದ ನವಿ ಮುಂಬಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದೖನಂದಿನ ವಿಮಾನ ಸರ್ವೀಸ್ ಕಾರ್ಯಾರಂಭಗೊಳ್ಳುವುದು ವ್ಯಾಪಾರ, ವಾಣಿಜ್ಯ ವಲಯದಲ್ಲಿ ನಿರೀಕ್ಷೆ ಮೂಡಿಸಿದೆ.

ಇಂಡಿಗೊ ವಿಮಾನ ಯಾನ ಸಂಸ್ಥೆಯ ವಿಮಾನಗಳು ದಿನಕ್ಕೆ ನಾಲ್ಕು ಬಾರಿ ಮತ್ತು ಏರ್ ಇಂಡಿಯಾ ಎಕ್ಸ್ ಪ್ರೆಸ್ ನ ಒಂದು ವಿಮಾನ ದಿನಕ್ಕೊಮ್ಮೆ ಸಂಚಾರ ನಡೆಸಲಿದೆ ಎಂದು ವಿಮಾನ ನಿಲ್ದಾಣದ ಔದ್ಯೋಗಿಕ ಪ್ರಕಟಣೆ ತಿಳಿಸಿದೆ.

ವಿಮಾನ ಸಮಯವೆಷ್ಟು..?

ನವಿ ಮುಂಬಯಿಯಿಂದ ಬೆಳಿಗ್ಗೆ ಮಂಗಳೂರಿಗೆ (6ಇ 865) ಸಮಯ 10.40ಕ್ಕೆ ಬಂದಿಳಿಯುವ ವಿಮಾನ ಮಧ್ಯಾಹ್ನ 12.10ಕ್ಕೆ ನವಿ ಮುಂಬೖಗೆ ತೆರಳಲಿದೆ. ಸೋಮವಾರ ಮತ್ತು ಗುರುವಾರ ನವಿ ಮುಂಬಯಿಯಿಂದ ಮಂಗಳೂರಿಗೆ ಸಂಜೆ 4.05ಕ್ಕೆ ಬಂದಿಳಿಯುವ ವಿಮಾನ ಅನಂತರ 5.45ಕ್ಕೆ ಮುಂಬಯಿಗೆ ಮರಳಲಿದೆ.
ಮಂಗಳ, ಬುಧ, ಶುಕ್ರ, ಶನಿ, ಭಾನುವಾರಗಳಂದು ಮಧ್ಯಾಹ್ನ 12.40ಕ್ಕೆ ಬಂದಿಳಿಯುವ ವಿಮಾನ ಬಳಿಕ 2.40ಕ್ಕೆ ಮುಂಬಯಿಗೆ ಮರಳಲಿದೆ.

ಹೊಸ ವಿಮಾನ ಸೇವೆಯಿಂದ ವ್ಯಾಪಾರಿ ವಾಣಿಜ್ಯ ವಲಯ ಮತ್ತು ಪ್ರವಾಸಿಗರ ಸಂಚಾರಕ್ಕೆ ಅನುಕೂಲ ಹೆಚ್ಚಿದೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00