43
ಮಂಜೇಶ್ವರ ಮಂಡಲ ವಿಧಾನಸಭಾ ಕ್ಷೇತ್ರ ಯುಡಿಎಫ್ ಅಭ್ಯರ್ಥಿ ಸಂಗಮದಲ್ಲಿ ಭಾಗಿ
ಕುಂಬಳೆ : ಎಐಸಿಸಿ ಪ್ರಧಾನ ಕಾರ್ಯದರ್ಶಿ
ಕೆ.ಸಿ ವೇಣುಗೋಪಾಲ್ ಡಿ.3 ರಂದು ಕುಂಬಳೆಗೆ ಆಗಮಿಸಲಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ಕುಂಬಳೆ ರಾಯಲ್ ಕ್ಯೂಬ ಡೈನ್ ರೆಸ್ಟೋರೆಂಟ್ ನಲ್ಲಿನಡೆಯುವ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯ ಮಂಜೇಶ್ವರ ವಿಧಾನಸಭಾ ಕ್ಷೇತ್ರ ಆಭ್ಯರ್ಥಿಗಳ ಸಭೆಯಲ್ಲಿ ಭಾಗವಹಿಸುವ ವೇಣುಗೋಪಾಲ್ ಆವರು, ಬಳಿಕ 3 ಗಂಟೆಗೆ ಕುಂಬಳೆ ಪೇಟೆಯಲ್ಲಿಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದಾರೆ.
ಸ್ಥಳೀಯಾಡಳಿತ ಚುನಾವಣಾ ಪೂರ್ವಭಾವಿ ಅಭ್ಯರ್ಥಿಗಳನ್ನು ಮತ್ತು ಕಾರ್ಯಕರ್ತರನ್ನು ಹುರಿದುಂಬಿಸುವ ಪಕ್ಷದ ಕಾರ್ಯಯೋಜನೆಯಂತೆ ಕೆ. ಸಿ. ಆಗಮಿಸುತ್ತಿರುವುದಾಗಿ ಹೇಳಲಾಗಿದೆ.








