ಕ್ಯಾಂಪ್ಕೋ ಅಧ್ಯಕ್ಷರಾಗಿ ಎಸ್. ಆರ್ ಸತೀಶ್ಚಂದ್ರ, ಉಪಾಧ್ಯಕ್ಷರಾಗಿ ಬದಿಯಡ್ಕದ ಪದ್ಮರಾಜ ಪಟ್ಟಾಜೆ ಆಯ್ಕೆ

by Narayan Chambaltimar

ಮಂಗಳೂರು:ಕರ್ನಾಟಕ ಹಾಗೂ ಕೇರಳ ರಾಜ್ಯದ ಕೃಷಿಕರ ಅಂತಾರಾಜ್ಯ ಸಂಸ್ಥೆ ಕ್ಯಾಂಪ್ಕೊದ ನೂತನ ಅಧ್ಯಕ್ಷರಾಗಿ ಎಸ್‌. ಆರ್‌.ಸತೀಶ್ಚಂದ್ರ ಹಾಗೂ ಉಪಾಧ್ಯಕ್ಷರಾಗಿ ಪದ್ಮರಾಜ ಪಟ್ಟಾಜೆ ಅವರು ಆಯ್ಕೆಯಾಗಿದ್ದಾರೆ.

ಡಿ.2ರಂದು ನಡೆದ ನಿರ್ದೇಶಕರ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.ಸತೀಶ್ಚಂದ್ರ ಅವರು ಕ್ಯಾಂಪ್ಕೊ ಅಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಎರಡನೇ ನಿರ್ದೆಶಕರಾದ ಪದ್ಮರಾಜ ಪಟ್ಟಾಜೆಯವರು ಪ್ರಥಮ ಬಾರಿಗೆ ಉಪಾಧ್ಯಕ್ಷರಾಗಿದ್ದಾರೆ.ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.19 ನಿರ್ದೇಶಕರ ಪೈಕಿ ಕೇರಳದ 9 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರೆ, ಕರ್ನಾಟಕದ 10 ನಿರ್ದೇಶಕರಲ್ಲಿ 4 ಮಂದಿ ಅವಿರೋಧವಾಗಿ ಮತ್ತು 6 ಮಂದಿ ಚುನಾವಣೆಯ ಮೂಲಕ ಆಯ್ಕೆಯಾಗಿದ್ದರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00