ರಾಜಭವನ್ ಇನ್ನು ಲೋಕಭವನ್ :ಅದು ಕಾಲನಿ ಆಡಳಿತ ಸಂಕೇತವಲ್ಲ, ಪ್ರಜಾಪ್ರಭುತ್ವದ ಸಂಕೇತ

by Narayan Chambaltimar

ತಿರುವನಂತಪುರ : ಕೇರಳದ ರಾಜ್ಯಪಾಲರ ರಾಜಭವನ ಇನ್ನು ಮುಂದೆ ಔದ್ಯೋಗಿಕವಾಗಿ ಲೋಕ್ ಭವನ ಎಂದು ಪರಿಷ್ಕೃತವಾಗಲಿದೆ. ದೇಶವ್ಯಾಪಕ ಎಲ್ಲಾ ರಾಜ್ಯಗಳಲ್ಲೂ ರಾಜಭವನ ಈಹೆಸರಿಗೆ ಬದಲಾಗುವುದರ ಅಂಗವಾಗಿ ಕೇರಳದಲ್ಲೂ ಹೆಸರಿನ ಬದಲಾವಣೆ ನಡೆಯುತ್ತಿದೆ. ಗೃಹಖಾತೆಯ ಆದೇಶದಂತೆ ಈ ಬದಲಾವಣೆ ನಡೆದಿದೆ.

ಕೊಲೋನಿಯಲ್ ಆಡಳಿತದ ಮನೋಭಾವದಿಂದ ಭಾರತೀಯ ಪ್ರಜಾಪ್ರಭುತ್ವ ಮನೋಭಾವದೆಡೆಗಿನ ಸುಪ್ರಧಾನವಾದ ಬದಲಾವಣೆಯ ಹೆಜ್ಜೆ ಇದೆಂದು ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಆರ್ಲೇಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬದಲಾಗುವ ಕಾಲಘಟ್ಟಕ್ಕನುಸಾರವಾಗಿ ಈ ನೂತನ ಪರಿಷ್ಕಾರವನ್ನು ಒಳಗೊಳ್ಳಲು ತಯರಾದ ಕೇರಳೀಯ ಜನತೆಯನ್ನು ರಾಜ್ಯಪಾಲರು ಅಭಿನಂಧಿಸಿದರು.

ಕೇರಳ ರಾಜ್ಯಪಾಲರಾದ ರಾಜೇಂದ್ರ ಆರ್ಲೇಕರ್ ಅವರು ಹಿಂದೆ 2002ರಲ್ಲ ಣಬಿಹಾರ ರಾಜ್ಯಪಾಲರಾಗಿದ್ದಾಗ ನಡೆದ ದೇಶದ ರಾಜ್ಯಪಾಲರ ಸಮಾವೇಶದಲ್ಲಿ ರಾಜ ಭವನಗಳನ್ನು ಲೋಕಭವನವನ್ನಾಗಿಸುವ ಬೇಡಿಕೆ ಮಂಡಿಸಿದ್ದರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00