ಅಯೋಧ್ಯೆ ಶ್ರೀರಾಮ ಕ್ಷೇತ್ರ ಪೂರ್ಣತೆಯ ಸಂಕೇತ : ತ್ರಿಕೋನಾಕೃತ ಕೇಸರಿ ಧ್ವಾಜಾರೋಹಣ ನಡೆಸಿದ ಪ್ರಧಾನಿ

by Narayan Chambaltimar

ಅಯೋಧ್ಯೆ : ಆಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಕೇಸರಿ ಧ್ವಜಾರೋಹಣ ನಡೆಸಿದರು. ಶ್ರೀರಾಮ ಮಂದಿರ ನಿರ್ಮಾಣದ ಔಪಚಾರಿಕ ಪೂರ್ಣತೆಯ ಸಂಕೇತವಾಗಿ ಧ್ವಜಾರೋಹಣ ನಡೆಸಲಾಯಿತು.

10ಅಡಿ ಎತ್ತರ ಮತ್ತು 20ಅಡಿ ಉದ್ದದ ತ್ರಿಕೋನಾಕೃತ ಧ್ವಜದಲ್ಲಿ ಪ್ರಕಾಶಮಾನವಾದ ಸೂರ್ಯ, ಓಂ ಸಂಕೇತ ಮತ್ತು ಕೋವಿದಾರ ವೃಕ್ಷವನ್ನು ಒಳಗೊಂಡಿದೆ. ಹಿಂದೂಗಳು ಶುಭವೆಂದು ಪರಿಗಣಿಸುವ ಗ್ರಹ ನಕ್ಷತ್ರವಾದ “ಅಭಿಜಿತ್” ಮುಹೂರ್ತದಲ್ಲಿ ಧ್ವಜಾರೋಹಣ ನಡೆಸಲಾಯಿತೆಂದು ಅಯೋಧ್ಯೆ ದೇವಾಲಯ ಪ್ರತಿನಿಧಿಗಳು ತಿಳಿಸಿದ್ದಾರೆ.

ಅಯೋಧ್ಯೆಯ ಪ್ರಧಾನ ಗೋಪುರದ ಮೇಲೆ ಧ್ವಜ ರಾರಾಜಿಸುತ್ತಿದೆ.
ಆರ್. ಎಸ್. ಎಸ್. ಮೇಧಾವಿ ಮೋಹನ್ ಭಾಗವತ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಮೊದಲಾದ ಪ್ರಮುಖರು ಸಮಾರಂಭದಲ್ಲಿ ಪಾಲ್ಗೊಂಡರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00