ಕುಂಬಳೆ : ಸ್ಥಳೀಯಾಡಳಿತ ಚುನಾವಣಾ ಹಿನ್ನೆಲೆಯಲ್ಲಿ ಜಾಲತಾಣಗಳ ಮೇಲೆ ಹದ್ದಿನ ಕಣ್ಣಿರಿಸಲು ಪೋಲೀಸ್ ಇಲಾಖೆ ನಿರ್ಧರಿಸಿದೆ. ಇದರಂಗವಾಗಿ ಕೇರಳದ ಎಲ್ಲಾ ಪೋಲೀಸ್ ಠಾಣೆಗಳಲ್ಲೂ ಸೋಷ್ಯಲ್ ಮೀಡಿಯಾ ಪೆಟ್ರೋಲಿಂಗ್ ವಿಂಗ್ ರೂಪೀಕರಿಸಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಪಕ್ಷದ ಪರವಾದ ಪ್ರಚಾರದ ಹೆಸರಲ್ಲಿ ನಡೆಯುವ
ವಿಕೃತಿಗಳು ಮತ್ತು ಮತೀಯ ಧ್ವೇಷದ ಕಪೋಲಕಲ್ಪಿತ ಸುದ್ದಿಗಳ ಮೇಲೆ ಪೋಲೀಸ್ ಪೆಟ್ರೋಲಿಂಗ್ ವಿಂಗ್ ವಿಶೇಷ ಗಮನ ಹರಿಸಿ, ಹದ್ದಿನ ಕಣ್ಣಿಡಲಿದೆ.ಈ ರೀತಿಯ ಕಾನೂನು ವ್ಯವಸ್ಥೆಯ ಉಲ್ಲಂಘನೆ ಮತ್ತು ಶಾಂತಿ ಭಂಗ ಯತ್ನ ಕಂಡು ಬಂದಲ್ಲಿ ತಕ್ಷಣವೇ ಕೇಸು ದಾಖಲಿಸಲಾಗುವುದೆಂದು ಪೋಲೀಸರು ತಿಳಿಸಿದ್ದಾರೆ. ರಾಜ್ಯದಲ್ಲಿ ಡಿಐಜಿ ನೇತೃತ್ವದಲ್ಲಿ ಈ ಸಂಬಂಧ ಸ್ಕ್ವಾಡ್ ರಚಿಸಲಾಗಿದೆ.
ಇದರಂತೆ ವಾಟ್ಸಪ್ ಗ್ರೂಪ್, ಫೇಸ್ಬುಕ್, ಇನ್ಸ್ಟಾಗ್ರಾಂ, ಯುಟ್ಯೂಬ್ ಎಂಬಿವುಗಳ ಪೋಸ್ಟ್ ಗಳನ್ನು ಪೊಲೀಸರು ಗಮನಿಸುವರು. ಸಾಮಾಜಿಕ ಜಾಲತಾಣಗಳ ದುರುಪಯೋಗ ಮತ್ತು ಪ್ರಚೋದನಾತ್ಮಕ ಸುಳ್ಳು ಸಂದೇಶಗಳು ವಿಪರೀತವಾಗುವ ಹಿನ್ನೆಲೆಯಲ್ಲಿ ಈ ಕ್ರಮ ಕೖಗೊಳ್ಳಲಾಗಿದೆ. ರಾಜ್ಯದಲ್ಲಿ ದೖನಂದಿನ ಸಾವಿರಕ್ಕೂ ಅಧಿಕ ಪ್ರಚೋದನಕಾರಿ ಪೋಸ್ಟ್ ಗಳು ಬಿತ್ತರವಾಗುವುದು ಗಮನಕ್ಕೆ ಬಂದಿದೆ ಎಂದು ರಾಜ್ಯ ಪೋಲೀಸ್ ದಳದ ಮೀಡಿಯ ಮೋನಿಟರಿಂಗ್ ಏಂಡ್ ಅನಾಲಿಸಿಸ್ ಘಟಕ ತಿಳಿಸಿದೆ.








