11.5K
ಕಾಸರಗೋಡು: ಚೆರುವತ್ತೂರಿನ ಲಾಡ್ಜೊಂದರಲ್ಲಿ ಮಹಿಳೆಯರನ್ನಿರಿಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದನ್ನು ಪತ್ತೆ ಹಚ್ಚಿದ ಪೋಲೀಸರು ಮುಳ್ಳೇರಿಯ ನಿವಾಸಿ ಮಹಿಳೆ ಸೇರಿದಂತೆ ದಂಧೆ ನಿರತ ತಂಡವನ್ನು ಬಂಧಿಸಿದ್ದಾರೆ.
ಚೆರುವತ್ತೂರಿನ ಮಲಬಾರ್ ಲಾಡ್ಜಿನಲ್ಲಿ ಆರ್ಥಿಕ ಲಾಭದ ಉದ್ದೇಶದಿಂದ ವೇತನಕ್ಕೆ ಮಹಿಳೆಯರನ್ನಿಟ್ಟು ಈ ದಂಧೆ ನಡೆಯುತಿತ್ತು.

ಜಿಲ್ಲೆಯ ಚಂದೇರ ಪೋಲೀಸರಿಗೆ ದೊರೆತ ಖಚಿತ ವರ್ತಮಾನದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಈ ಕಾರ್ಯಾಚರಣೆ ನಡೆದಿದೆ. ಲಾಡ್ಜಿಗೆ ನಡೆಸಿದ ಪೊಲೀಸ್ ಧಾಳಿಯಲ್ಲಿ ಮಾಲಕ ಮುಹ್ಮದ್ ಅಸೖನಾರ್, ಲಾಡ್ಜ್ ನೌಕರೆಯಾದ ಮುಳ್ಳೇರಿಯ ನಿವಾಸಿ ನಸೀಮ, ವೇಶ್ಯಾವೃತ್ತಿ ಮಾಡುತ್ತಿದ್ದ ನಾಲ್ವರು ಮಹಿಳೆಯರು ಮತ್ತು ಲೖಂಗಿಕತೆಗೆ ಬಂದಿದ್ದ ಇಬ್ಬರು ಪುರುಷರನ್ನು ಪೋಲೀಸರು ಬಂಧಿಸಿದ್ದಾರೆ. ಇವರ ವೀರುದ್ಧ ಕೇಸು ದಾಖಲಿಸಲಾಗಿದೆ.








