ಪೊಸಡಿಗುಂಪೆ ನಿಸರ್ಗಧಾಮದಲ್ಲಿ ಎರಡು ದಿನಗಳ ಡಾ. ಎಸ್. ಎಲ್ ಭೖರಪ್ಪ ಕೃತಿಗಳ ವಿಚಾರ ಸಂಕಿರಣ ಮತ್ತು ಸಂಸ್ಮರಣೆ ಸಂಪನ್ನ

by Narayan Chambaltimar

ಶಂಪಾ ಪ್ರತಿಷ್ಠಾನ ಬೆಂಗಳೂರು ಇದರ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಮತ್ತು ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಸಹಯೋಗದೊಂದಿಗೆ ಪೊಸಡಿಗುಂಪೆಯ ನಿಸರ್ಗಧಾಮದಲ್ಲಿ ನಡೆದ ಡಾ. ಎಸ್. ಎಲ್ ಭೈರಪ್ಪನವರ ಸಂಸ್ಮರಣೆ ಹಾಗೂ ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಸಂಪನ್ನಗೊಂಡಿತು.

ಮುಂಬೈ ವಿಶ್ವ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ, ಸಂಶೋಧಕ ಡಾ. ತಾಳ್ತಜೆ ವಸಂತಕುಮಾರ್ ಸಮಾರೋಪ ಭಾಷಣ ಮಾಡಿದರು. ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ ಡಾ. ರಮಾನಂದ ಬನಾರಿ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಆಕಾಶವಾಣಿಯ ನಿವೃತ್ತ
ಕಾರ್ಯಕ್ರಮ ನಿರ್ದೇಶಕ ಡಾ. ವಸಂತಕುಮಾರ್ ಪೆರ್ಲ ಮುಖ್ಯ ಅತಿಥಿಯಾಗಿದ್ದರು. ವಿಶ್ರಾಂತ ಪ್ರಾಧ್ಯಾಪಕಿ, ವಿಮರ್ಶಕಿ ಡಾ.ಯು. ಮಹೇಶ್ವರಿ ಕಾರ್ಯಕ್ರಮದ ಅವಲೋಕನ ಮಾಡಿದರು.
ಹಿರಿಯ ಸಾಹಿತಿ ,ವೈದ್ಯ ಡಾ. ರಮಾನಂದ ಬನಾರಿಯವರನ್ನು ಹಾಗೂ ಡಾ.ಪ್ರಮೀಳಾ ಮಾಧವ್ ಮತ್ತು ಮಾಧವ ದಂಪತಿಯರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ನಿವೃತ್ತ ಪ್ರಾಂಶುಪಾಲ ಡಾ ಎಸ್ .ಎಲ್ ಮಂಜುನಾಥ್ ಬೆಂಗಳೂರು, ಮಂಜುನಾಥ್ ಡಿ.ಎಸ್ ಬೆಂಗಳೂರು ಉಪಸ್ಥಿತರಿದ್ದರು. ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯಾಧ್ಯಕ್ಷ ಪ್ರೊ. ಪಿ. ಎನ್ ಮುಡಿತ್ತಾಯ ಸ್ವಾಗತಿಸಿದರು. ಶಂಪಾ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಡಾ. ಶಾರದಾ ಬೆಂಗಳೂರು ಧನ್ಯವಾದ ಸಮರ್ಪಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು.

ಭೈರಪ್ಪ ವಿಶ್ವಮಾನ್ಯ ಕಾದಂಬರಿಕಾರ :ತಾಳ್ತಜೆ
ಭೈರಪ್ಪನವರು ಪ್ರತಿಯೊಂದು ಕಾದಂಬರಿ ಬರೆಯುವ ಮೊದಲು ಸಾಕಷ್ಟು ತಯಾರಿ, ವ್ಯಾಪಕ ಅಧ್ಯಯನ, ತಿರುಗಾಟ, ಸಂಶೋಧನೆ ಮಾಡಿರುತ್ತಾರೆ. ಅವರು ಆಳವಾದ ಅಧ್ಯಯನ ಮತ್ತು ಜೀವನಾ ನುಭವಗಳನ್ನು ತಮ್ಮ ಕಾದಂಬರಿಗಳಲ್ಲಿ ಕಟ್ಟಿಕೊಡುತ್ತಾರೆ. ಆದುದರಿಂದಲೇ ಭೈರಪ್ಪನವರ ಕಾದಂಬರಿಗಳು ಇಂಗ್ಲಿಷ್ ಮತ್ತು ಭಾರತದ ವಿವಿಧ ಭಾಷೆಗಳಿಗೆ ಅನುವಾದಗೊಂಡು ಅವರನ್ನು ವಿಶ್ವಮಾನ್ಯರನ್ನಾಗಿ ಮಾಡಿದೆ.(ಸಮಾರೋಪ ಭಾಷಣದಲ್ಲಿ ಡಾ.ತಾಳ್ತಜೆ ವಸಂತ ಕುಮಾರ್)

ಸಮಾರೋಪಕ್ಕೆ ಮುನ್ನ ಡಾ .ಎಸ್. ಎಲ್ ಬೈರಪ್ಪನವರ ಕೃತಿಗಳ ಕುರಿತು ವಿಚಾರ ಸಂಕಿರಣ ನಡೆಯಿತು. ಬೆಂಗಳೂರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಅಜಕ್ಕಳ ಗಿರೀಶ್ ಭಟ್ (ಅನ್ವೇಷಣ), ಪೆರಿಯ ಕೇಂದ್ರೀಯ ವಿ.ವಿಯ ಕನ್ನಡ ಪ್ರಾಧ್ಯಾಪಕಿ ಡಾ.ಸೌಮ್ಯಾ.ಹೆಚ್ (ಮತದಾನ), ಬೆಟ್ಟಂಪಾಡಿ ಸರಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ (ತಬ್ಬಲಿಯು ನೀನಾದೆ ಮಗನೆ), ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ.ಸುಜಾತಾ.ಎಸ್( ದಾಟು), ಕಾಸರಗೋಡು ಸರಕಾರಿ ಕಾಲೇಜಿನ ಸಹಪ್ರಾಧ್ಯಾಪಕಿ ಡಾ. ಸವಿತಾ .ಬಿ (ಗ್ರಹಣ), ಲೇಖಕಿ ಪ್ರಸನ್ನ .ವಿ ಚೆಕ್ಕೆಮನೆ (ಧರ್ಮಶ್ರೀ),ಕುಂಜತ್ತೂರು ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಕವಿತಾ ಕೂಡ್ಲು(ಕವಲು), ರಂಗ ಕಲಾವಿದ ಒ. ಆರ್ ಪ್ರಕಾಶ್(ಭೀಮಕಾಯ),ಸಂಶೋಧನಾ ವಿದ್ಯಾರ್ಥಿ ಶಶಾಂಕ್ ಎಚ್.ವಿ(ಭಿತ್ತಿ), ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಮೋಹನ ಕುಂಟಾರು(ಇತರ ಭಾಷೆಗಳಲ್ಲಿ ಭೈರಪ್ಪನವರಅನುವಾದಿತ ಕೃತಿಗಳು)ಡಾ.ಪಿ ನಾಗರಾಜು ಚನ್ನಪಟ್ಟಣ,ಸೋಮ ನಿಂಗ ಹಿಪ್ಪರಗಿ ಪಾಲ್ಗೊಂಡರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00