ಕುಂಬಳೆ: ಆರಿಕ್ಕಾಡಿ ಟೋಲ್ ಪ್ಲಾಝ ವ್ಯಾಪ್ತಿ ಸುತ್ತಲಿನ 5 ಕಿ. ಮೀ. ಪ್ರದೇಶದ ವಾಹನಗಳಿಗೆ ಟೋಲ್ ಉಚಿತವಾಗಿಸಿ ಕೇಸು ಇತ್ಯರ್ಥ ಗೊಳಿಸಲು ಹೆದ್ದಾರಿ ಪ್ರಾಧಿಕಾರ ಒಡಂಬಡಿಕೆಗೆ ತಯಾರು!!

by Narayan Chambaltimar

ಕೇಸು ಮುಗಿಸಿ ಅತಿ ಶೀಘ್ರ ಟೋಲ್ ವಸೂಲಿಗೆ ಯೋಚನೆ : ಬುಧವಾರ ಟೋಲ್ ಕುರಿತಾಗಿ ಹೖಕೋರ್ಟು ತೀರ್ಪು

Kanipura Exclussive

ಕುಂಬಳೆ : ರಾ. ಹೆದ್ದಾರಿಯ ಕುಂಬಳೆ ಆರಿಕ್ಕಾಡಿಯಲ್ಲಿ ಸ್ಥಾಪಿಸಲಾದ ಟೋಲ್ ಪ್ಲಾಝಾ ದಲ್ಲಿ ಸ್ಥಳೀಯ ಪ್ರದೇಶ ವಾಸಿಗಳಿಗೆ ಉಚಿತ ಸಂಚಾರ ಸೌಲಭ್ಯ ಒದಗಿಸಿ ಪ್ರತಿಭಟನೆಯನ್ನು ಸ್ಥಗಿತಗೊಳಿಸಲು ಮತ್ತು ಹೖಕೋರ್ಟು ವ್ಯಾಜ್ಯಕ್ಕೆ ಇತ್ಯರ್ಥ ಮಾಡಲು ರಾ. ಹೆದ್ದಾರಿ ಪ್ರಾಧಿಕಾರ ಒಪ್ಪಂದಕ್ಕೆ ಮುಂದಾಗಿದೆ. ರಾ. ಹೆದ್ದಾರಿ ಪ್ರಾಧಿಕಾರವು ಟೋಲ್ ಪ್ಲಾಝಾ ಗುತ್ತಿಗೆ ಪಡೆದಿರುವ
ಸ್ಕೖ ಲಾರ್ಕ್ ಇನ್ಫ್ರಾ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿದ್ದು, ಈ ಮೂಲಕ ವಿವಾದಕ್ಕೆ ಪರಿಹಾರ ಕಾಣಲು ಮುಂದಾಗಿದೆಯೆಂಬ ಖಚಿತ ವರ್ತಮಾನ ಬೆಳಕಿಗೆ ಬಂದಿದೆ.

 

ಆರಿಕ್ಕಾಡಿ ಟೋಲ್ ಪ್ಲಾಝಾ ಸಂಬಂಧವಾದ ಹೖಕೋರ್ಟು ಅಂತಿಮ ತೀರ್ಪು ಪ್ರಕಟವಾಗದೇ ಇದ್ದು, ಅದಕ್ಕೂ ಮುನ್ನ ಒಪ್ಪಂದದ ಮೂಲಕ ಇತ್ಯರ್ಥಕ್ಕೆ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಟೋಲ್ ವಸೂಲಿ ಗುತ್ತಿಗೆ ಪಡೆದಿರುವ ಸಂಸ್ಥೆ ಸ್ಥಳೀಯ ಐದು ಕಿ. ಮೀ. ವ್ಯಾಪ್ತಿಯ ನಿವಾಸಿಗಳ ವಾಹನಕ್ಕೆ ಉಚಿತ ಸಂಚಾರ ಸೌಲಭ್ಯ ಒದಗಿಸುವ ಭರವಸೆ ಒಪ್ಪಂದ ವ್ಯವಸ್ಥೆಯಾಗಿದೆ. ಈ ಮೂಲಕ ಟೋಲ್ ವಸೂಲಿ ವಿಳಂಬಿಸದೇ ಅತ್ಯಂತ ಬೇಗ ಆರಂಭಿಸುವುದು ಉದ್ದೇಶವಾಗಿದೆ. ಈ ಉಚಿತ ಸೌಲಭ್ಯ ಟೋಲ್ ಪ್ಲಾಝಾ ಕಾರ್ಯಾಚರಿಸುವವರೆಗೂ ಒದಗಿಸಿ ಹೋರಾಟವನ್ನು ಮಣಿಸಿ, ವಿವಾದದ ಕೇಸು ಇತ್ಯರ್ಥ ಮಾಡುವುದು ಹೆದ್ದಾರಿ ಪ್ರಾಧಿಕಾರದ ಉದ್ದೇಶವಾಗಿದೆ.

ಸ್ಥಳೀಯ ವಾಹನವೆಂದು ನಿರ್ಣಯಿಸುವುದು ಹೇಗೆ??

ಸ್ಥಳೀಯ ವಾಹನಗಳನ್ನು ನೋಂದಾವಣೆ ನಂಬ್ರ ಪರಿಶೀಲಿಸಿ ದೃಢೀಕರಿಸುವುದು ಉದ್ದೇಶವಾಗಿದೆ. ಇತರ ಕಡೆಯ ನೋಂದಾವಣಿಯಾದರೆ ವಾಹನ ಮಾಲಕರ ಮನೆ ನಂಬ್ರ, ವಿದ್ಯುತ್ ಬಿಲ್ ತೋರಿಸಿ ಉಚಿತ ಸಂಚಾರ ಸೌಲಭ್ಯ ನೀಡಲು ಹೆದ್ದಾರಿ ಪ್ರಾಧಿಕಾರ ಯೋಚಿಸಿದೆ.
ಟೋಲ್ ಪ್ಲಾಝಾ ಸಂಪೂರ್ಣ ಸಿದ್ಧವಾಗಿದ್ದು, ಯಾವ ಕಾರಣಕ್ಕೂ ವಿಳಂಬಿಸದೇ ಟೋಲ್ ವಸೂಲಿ ಕಾರ್ಯಾರಂಭಿಸುವ ಉದ್ದೇಶದಿಂದ ಹೆದ್ದಾರಿ ಪ್ರಾಧಿಕಾರ ಈ ಒಡಂಬಡಿಕೆಗೆ ಮುಂದಾಗಿದೆ ಎಂಬ ಮಾಹಿತಿ ಇದೆ.

ಇದೇ ವೇಳೆ ಟೋಲ್ ಪ್ಲಾಝಾ ಸಂಬಂಧವಾಗಿ ಅಂತಿಮ ಹೖಕೋರ್ಟು ತೀರ್ಪು ಬುಧವಾರ (ನ.18) ಕ್ಕೆ ವಿಸ್ತರಿಸಲಾಗಿದೆ. ತೀರ್ಪು ಬರುವ ತನಕ ಕಾದರೆ ಈ ಸೌಲಭ್ಯ ನೀಡದಿರಲು ಕೂಡಾ ಹೆದ್ದಾರಿ ಪ್ರಾಧಿಕಾರ ನಿರ್ಣಯಿಸಿದೆ.
ಕುಂಬಳೆ ಪರಿಸರವಾಸಿಗಳಷ್ಟೇ ಟೋಲ್ ಪ್ಲಾಝಾಕ್ಕೆ ಪ್ರತಿಭಟನೆ ನಡೆಸಿದ್ದರಿಂದ ಅವರನ್ನು ಮಣಿಸಿ, ಉಚಿತ ಸೌಲಭ್ಯ ಒದಗಿಸಿ ಟೋಲ್ ಶುಲ್ಕ ವಸೂಲಿ ಮಾಡುವ ಒಪ್ಪಂದ ಇದಾಗಿದೆ. ತಲಪ್ಪಾಡಿಯಿಂದ 60ಕಿ. ಮೀ ದೂರದ, ಹೆದ್ದಾರಿಯ ಎರಡನೇ ರೀಚ್ ನ ಚಾಲಿಂಗಾಲ್ ನಲ್ಲಿ ಟೋಲ್ ಪ್ಲಾಝಾ ಸ್ಥಾಪಿಸಿ ಶುಲ್ಕ ವಸೂಲಿ ಮಾಡುವ ತನಕವಷ್ಟೇ ಕುಂಬಳೆಯ ಆರಿಕ್ಕಾಡಿಯ ತಾತ್ಕಾಲಿಕ ಟೋಲ್ ವಸೂಲಿ ಎಂದು ಹೆದ್ದಾರಿ ಇಲಾಖೆ ಸ್ಪಷ್ಟಪಡಿಸಿದೆ. ಇದನ್ನೇ ಹೖಕೋರ್ಟಲ್ಲೂ ಮಂಡಿಸಲಿದೆ.

ತಲಪ್ಪಾಡಿ ಟೋಲ್ ಗೇಟಿನಿಂದ ಕೇವಲ 22 ಕಿ. ಮೀ ದೂರದ ಕುಂಬಳೆ ಆರಿಕ್ಕಾಡಿಯಲ್ಲಿ ಎರಡನೇ ಟೋಲ್ ಪ್ಲಾಝಾ ಆರಂಭಿಸುವುದು ಹೆದ್ದಾರಿ ಪ್ರಾಧಿಕಾರವೇ ಘೋಷಿಸಿದ ನಿಯಮಾವಳಿಯ ಉಲ್ಲಂಘನೆ. ಕಾಸರಗೋಡು ಜಿಲ್ಲೆಯಲ್ಲಿ ಹೆದ್ದಾರಿ ಕಾಮಗಾರಿ 60 ಕಿ. ಮೀ ಪೂರ್ಣವಾಗದೇ ಇರುವುದು ಮತ್ತು ಟೋಲ್ ಪ್ಲಾಝಾ ನಿರ್ಮಾಣ ಆಗದೇ ಇರುವುದು ನಾಡಿನ ಜನತೆಯ ಅಪರಾಧವಲ್ಲ ತಾನೇ?
ಈ ಕಾರಣದಿಂದ ಕಾಸರಗೋಡು, ಮಂಜೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜನತೆ ವಿನಾ ಕಾರಣ ಟೋಲ್ ಪಾವತಿಸಲೇಬೇಕು ಎಂದಾದರೆ ಇದು ನ್ಯಾಯೋಚಿತವೇ..?
ಇದು ಜನರ ತೆರಿಗೆ ಪಡೆದ ಸರಕಾರದ ಕೊಡುಗೆಯೇ ಎಂಬ ನಾಗರಿಕ ಪ್ರಶ್ನೆಯಲ್ಲೂ ಔಚಿತ್ಯ ಇದೆಯಲ್ಲವೇ..???

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00