3K
ಕಾಸರಗೋಡು: ತನ್ನ ಮನೆಯ ವಿದ್ಯುತ್ ವಿಚ್ಛೇದಿಸಿದ ಕೆಎಸ್ ಇಬಿ ಕೃತ್ಯದಿಂದ ರೊಚ್ಚಿಗೆದ್ದು ನಗರದ ಹಲವು ಟ್ರಾನ್ಸ್ಫರ್ಮರ್ ಗಳಿಂದ ಫ್ಯೂಸ್ ತೆಗೆದು ಸಾವಿರಾರು ಮಂದಿಗಳಿಗೆ ತಾಸುಗಳ ಕಾಲ ಕತ್ತಲು ಕರುಣಿಸಿದಾತನನ್ನು ಬಂಧಿಸಲಾಗಿದೆ. ಕೂಡ್ಲು ಸೂರ್ಲು ಹೖಡ್ರೋಸ್ ಮಸೀದಿ ಬಳಿಯ ನಿವಾಸಿ ಪಿ. ಎಂ. ಮುಹಮ್ಮದ್ ಮುನವ್ವರ್ (35) ಬಂದಿತ ವ್ಯಕ್ತಿಯಾಗಿದ್ದಾನೆ.

ದುಬಾರಿ ವಿದ್ಯುತ್ ಶುಲ್ಕ ಪಾವತಿಸದೇ ಬಾಕಿ ಇದ್ದ ಕಾರಣ ಈತನ ಮನೆಯ ಸಂಪರ್ಕವನ್ನು ಕೆ. ಎಸ್. ಇ. ಬಿ ಸಿಬಂದಿಗಳು ವಿಚ್ಛೇದಿಸಿದ್ದರು. ಇದರಿಂದ ಸಿಟ್ಟಿಗೆದ್ದ ಈತ ವಿದ್ಯುತ್ ಕಚೇರಿಗೆ ತೆರಳಿ ಗಲಾಟೆ ಮಾಡಿದ್ದನು. ಬಳಿಕ ನೆಲ್ಲಿಕುಂಜೆ, ಕಾಸರಗೋಡು ವಿದ್ಯುತ್ ಸೆಕ್ಷನ್ ವ್ಯಾಪ್ತಿಯ 25ರಷ್ಟು ಕಡೆ ಫ್ಯೂಸ್ ತೆಗೆದಿದ್ದನು. ಈತನ ಕೃತ್ಯದಿಂದ ಟ್ರಾನ್ಸ್ಫೋರ್ಮರ್ ಗಳಿಗೆ ಹಾನಿಯಾಗಿ, ಸಾವಿರಾರು ಮನೆ, ನಗರದ ವಾಣಿಜ್ಯ ವ್ಯವಹಾರಕ್ಕೆ ತೊಂದರೆ ಉಂಟಾಗಿತ್ತು. ಕೆಎಸ್ ಇಬಿ ನೀಡಿದ ದೂರಿನಂತೆ ಕಾಸರಗೋಡು ನಗರ ಠಾಣೆಯ ಎಸ್. ಐ ಬಂಧಿಸಿದರು.









