ಎಸ್. ಐ. ಆರ್ ತುರ್ತು ಸ್ಥಗಿತಗೊಳಿಸಲು ಒತ್ತಾಯ : ಮುಸ್ಲಿಂ ಲೀಗಿನಿಂದ ಸುಪ್ರೀಂ ಕೋರ್ಟಿಗೆ ಅರ್ಜಿ

by Narayan Chambaltimar

ದೆಹಲಿ : ಕೇರಳದಲ್ಲಿ ನಡೆಯುತ್ತಿರುವ ಎಸ್. ಐ. ಆರ್ ಮತದಾರರ ಪಟ್ಟಿಯ ನವೀಕರಣ ಪ್ರಕ್ರಿಯೆ ತಕ್ಷಣ ರದ್ದು ಪಡಿಸಬೇಕೆಂದು ಒತ್ತಾಯಿಸಿ ಮುಸ್ಲಿಂ ಲೀಗ್ ಪಕ್ಷ ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಿದೆ.

ಎಸ್. ಐ. ಆರ್ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಸರಕಾರಿ ನೌಕರರು ಕರ್ತವ್ಯದ ಒತ್ತಡ ತಾಳಲಾಗದೇ ಆತ್ಮಹತ್ಯೆ ನಡೆಸುತ್ತಿದ್ದಾರೆ. ನೌಕರರಿಗೆ ಕೆಲಸದ ಒತ್ತಡ ತಾಳಲಾಗುತ್ತಿಲ್ಲ ಎಂದುಲ್ಲೇಖಿಸಿ ಸುಪ್ರೀಂಗೆ ಅರ್ಜಿ ಸಲ್ಲಿಸಲಾಗಿದೆ. ಮುಸ್ಲಿಂ ಲೀಗ್ ನಾಯಕ ಪಿ. ಕೆ. ಕುಂಞಾಲಿಕುಟ್ಟಿ ಅವರ ಪರವಾಗಿ ನ್ಯಾಯವಾದಿ ಹಾಗೂ ರಾಜ್ಯಸಭಾ ಸದಸ್ಯ ಹಾರಿಸ್ ಬೀರಾನ್ ಈ ಅರ್ಜಿ ಕೋರ್ಟಿನಲ್ಲಿ ದಾಖಲಿಸಿದರು.
ಎಸ್. ಐ. ಆರ್ ಅಪ್ರಾಯೋಗಿಕ ಎಂಬುದು ಲೀಗ್ ನಿಲುವಾಗಿದೆ. ಸ್ಥಳೀಯಾಡಳಿತ ಚುನಾವಣೆಯ ನಡುವೆ ಎಸ್. ಐ. ಆರ್ ನಡೆಯುವುದರಿಂದ ಸರಕಾರಿ ಆಡಳಿತ ವ್ಯವಸ್ಥೆ ಮೊಟಕುಗೊಳ್ಳುತ್ತಿದೆ ಎಂದಾರೋಪಿಸಿ ಸರಕಾರವೂ ಸುಪ್ರೀಂ ಕೋರ್ಟನ್ನು ಸಮೀಪಿಸಿದೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00