ರಾ. ಹೆದ್ದಾರಿಯಲ್ಲಿ ಚಕ್ರ ಸಿಡಿದು ಮಗುಚಿದ ಮೀನು ಸಾಗಾಟ ಲಾರಿ : ಚಾಲಕ ಪಾರು, ತಾಸುಗಳ ಕಾಲ ಹೆದ್ದಾರಿ ಸಂಚಾರ ಮೊಟಕು

by Narayan Chambaltimar

ಕುಂಬಳೆ: ರಾ. ಹೆದ್ದಾರಿಯ ಮೊಗ್ರಾಲ್ ಪುತ್ತೂರಿನಲ್ಲಿ ಮೀನು ಸಾಗಾಟದ ಲಾರಿ ಮಗುಚಿ ತಾಸುಗಳ ಕಾಲ ಹೆದ್ದಾರಿಯ ವಾಹನ ಸಂಚಾರ ಮೊಟಕುಗೊಂಡ ಘಟನೆ ನಡೆದಿದೆ. ಅಪಘಾತದಲ್ಲಿ ಲಾರಿ ಚಾಲಕ ವಡಗರ ನಿವಾಸಿ ವಿಜಿನ್ ಕುಮಾರ್ (35) ಗಾಯಗಳೊಂದಿಗೆ ಪಾರಾಗಿದ್ದಾರೆ.
ಕೋಝಿಕ್ಕೋಡ್ ನಿಂದ ಹಸಿ ಮೀನು ಹೇರಿ ಉಳ್ಳಾಲದ ಫ್ಯಾಕ್ಟರಿಗೆ ಸಾಗಿಸುತ್ತಿದ್ದ ವೇಳೆ ಗುರುವಾರ ರಾತ್ರಿ ಅಪಘಾತ ಸಂಭವಿಸಿದೆ.

ಚಲಿಸುತ್ತಿದ್ದ ಲಾರಿಯ ಚಕ್ರ ಸಿಡಿದು, ವಾಹನ ನಿಯಂತ್ರಣ ಕಳೆದುಕೊಂಡು ರಸ್ತೆಗಡ್ಡವಾಗಿ ಮಗುಚಿ ರಸ್ತೆ ತಡೆ ಉಂಟಾಯಿತು. ಬಳಿಕ ನಾಗರಿಕರು ನೀಡಿದ ಮಾಹಿತಿಯಂತೆ ಅಗ್ನಿಶಾಮಕ ದಳ ತಲುಪಿ ಮೀನುಗಳನ್ನು
ಇನ್ನೊಂದು ಲಾರಿಗೆ ಹೇರಿದರು.
ಅನಂತರ ಯು. ಎಲ್. ಸಿ. ಸಿ ಯ ಕ್ರೇನ್ ತಂದು ಲಾರಿಯನ್ನು ಬದಿಗೆ ಸರಿಸಲಾಯಿತು. ರಸ್ತೆಯನ್ನು ತೊಳೆದು ಶುಚೀಕರಿಸಿ ರಾತ್ರಿ 11ರ ವೇಳೆಗೆ ಸಂಚಾರ ಸುಗಮಗೊಳಿಸಲಾಯಿತು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00