ಕುಂಬಳೆ :ಕಾಸರಗೋಡು ಜಿಲ್ಲೆಯಲ್ಲಿ ಶಿಶುರೋಗ ತಜ್ಞರಾಗಿ ಪ್ರಸಿದ್ಧರಾದ ಖ್ಯಾತ ವೖದ್ಯ ಡಾ. ಬಿ. ನಾರಾಯಣ ನಾಯ್ಕ್ ಅವರ ಶುಶ್ರೂಷಾ ಸೌಲಭ್ಯ ಇನ್ನು ಮುಂದೆ ಕುಂಬಳೆಯಲ್ಲೂ ದೊರೆಯಲಿದೆ. ಶಿಶು ಪರಿಪಾಲನಾ ಚಿಕಿತ್ಸಾ ರಂಗದಲ್ಲಿ ದಶಕಗಳ ಅನುಭವ ಮತ್ತು ಹಿರಿಮೆಯ ಖ್ಯಾತಿಯುಳ್ಳ ಅವರ ಸೇವೆ ಕುಂಬಳೆಯಲ್ಲಿ ನೂತನವಾಗಿ ತೆರೆಯಲ್ಪಟ್ಟ ವೆಲ್ ನೆಸ್ಟ್ ಕ್ಲಿನಿಕ್ ನಲ್ಲಿ ದೖನಂದಿನ ದೊರೆಯಲಿದೆ.

ಕುಂಬಳೆ ಪೇಟೆಯ ಬದಿಯಡ್ಕ ರಸ್ತೆಯ ಅನಿಲ್ ಕುಂಬ್ಳೆ ರಸ್ತೆ ಸಮೀಪದ ಎಂ. ಎಚ್ ಕಾಂಪ್ಲೆಕ್ಸ್ ನಲ್ಲಿ ವೆಲ್ ನೆಸ್ಟ್ ಕ್ಲಿನಿಕ್ ನ. 14ರಂದು ಶಿಶುದಿನಾಚರಣೆಯ ದಿನ ಕಾರ್ಯಾರಂಭಗೊಂಡಿತು. ಪತ್ರಕರ್ತ, ಲೇಖಕ ಎಂ. ನಾ. ಚಂಬಲ್ತಿಮಾರ್ ಕ್ಲಿನಿಕ್ ಉದ್ಘಾಟಿಸಿದರು. ನಾಡಿನ ಹಿರಿಯ, ಮತ್ತು ಪ್ರಸಿದ್ಧ ವೖದ್ಯರುಗಳಾದ ಡಾ. ದಿವಾಕರ ರೖ, ಡಾ. ಜಿತಿನ್ ಶುಭಾಸಂಶನೆ ಮಾಡಿದರು.

ಶಿಶುಗಳ ಆರೖಕೆ, ಆರೋಗ್ಯದ ನಿರೀಕ್ಷಣೆಯೊಂದಿಗೆ ಪ್ರತಿರೋಧ ಚುಚ್ಚುಮದ್ದು, ವ್ಯಾಕ್ಸಿನೇಷನ್ ಸಂಬಂಧಿತ ಮಾರ್ಗದರ್ಶನ, ಮಕ್ಕಳ ಪೋಷಕಾಹಾರ ಮತ್ತು ಆಹಾರದ ಕುರಿತಾಗಿ ಕೌನ್ಸಿಲಿಂಗ್, ಮಕ್ಕಳ ಬಾಲ್ಯಕಾಲ ಅನಾರೋಗ್ಯಗಳ ನಿರ್ವಹಣೆ, ಎಳೆ ಶಿಶುಗಳ ಬೆಳವಣಿಗೆ ಕುರಿತು ಖಚಿತವಾದ ನಿರ್ಣಯಿಸುವಿಕೆ ಮತ್ತು ಶಿಶುಗಳ ಹೆತ್ತವರಿಗೆ ಮಾರ್ಗದರ್ಶನದೊಂದಿಗೆ ಕೌನ್ಸಿಲಿಂಗ್ ಕೂಡಾ ಇಲ್ಲಿ ಲಭ್ಯವಿದೆ. ದೖನಂದಿನ ಬೆಳಿಗ್ಗೆ 11ರಿಂದ ಮಧ್ಯಾಹ್ನ 2ರ ತನಕ ವೖದ್ಯರ ಸೇವೆ ಇಲ್ಲಿ ಲಭ್ಯವಿದೆ.
ಎಳೆ ಶಿಶುಗಳ ಬೆಳವಣಿಗೆಯ ಪ್ರತಿ ಹಂತದಲ್ಲೂ ವಿಶೇಷ ಪರಿಚರಣೆ, ಕಾಳಜಿ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ನುರಿತ, ತಜ್ಞ ವೖದ್ಯರ ಪರಿಚರಣೆಯೊಂದಿಗಿನ ಮಾರ್ಗದರ್ಶನ ಅಗತ್ಯವಾಗಿದೆ. ಈ ಕಾಳಜಿಯೊಂದಿಗೆ ಕುಂಬಳೆಯಲ್ಲಿ ಚಿಕಿತ್ಸಾಲಯ ಆರಂಭಿಸಲಾಗಿದೆ.
-ಅವಿನಾಶ್ ಎಂ.
ಆಡಳಿತ ನಿರ್ದೇಶಕರು
WellNest clinic
ಕ್ಲಿನಿಕಿನ ಮೇನೇಜಿಂಗ್ ಡಯರೆಕ್ಟರ್ ಅವಿನಾಶ್ ಎಂ, ಮೆಡಿಕಲ್ ಸಿಬಂದಿಗಳಾದ ಫಾತಿಮತ್ ಅಸ್ನಾ, ಅಜಯ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.








